Udupi District minister in charge welcomes Chief Minister at Hejamady

Padubidri, Sept. 7th, 2018:  Udupi District minister-in-charge Dr. Jayamala welcomed Chief Minister H.D. Kumaraswamy at Hejamady, the border of Udupi District,  by offering a bouquet for his visit to Udupi District on Friday morning.

Read more in Kannada …

ಹೆಜಮಾಡಿಯಲ್ಲಿ ಮುಖ್ಯಮಂತ್ರಿಯವರಿಗೆ ಉಸ್ತುವಾರಿ ಸಚಿವೆ ಡಾ.ಜಯಮಾಲಾರಿಂದ ಸ್ವಾಗತ

ಉಡುಪಿ ಜಿಲ್ಲೆಗೆ ಶುಕ್ರವಾರ ಭೇಟಿ ನೀಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಜಿಲ್ಲೆಯ ಗಡಿ ಭಾಗವಾದ ಹೆಜಮಾಡಿಯಲ್ಲಿ ಜಿಲ್ಲಾಡಳಿತದ ಪರವಾಗಿ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು.
ಬಳಿಕ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಮತ್ತಿತರರು ಮುಖ್ಯಮಂತ್ರಿಗಳನ್ನು ಸ್ವಾಗತಿಸಿದರು.ಇದೇ ವೇಳೆ ಜೆಡಿಎಸ್ ಪಕ್ಷದ ಮುಖಂಡರೂ ಮುಖ್ಯಮಂತ್ರಿಯವರನ್ನು ಪುಷ್ಪಗುಚ್ಛದೊಂದಿಗೆ ಸ್ವಾಗತಿಸಿದರು.

ಹೆಜಮಾಡಿಯಲ್ಲಿ ಕಾರಿನಿಂದಿಳಿದು ಸ್ವಾಗತ ಸ್ವೀಕರಿಸಿದ ಮುಖ್ಯಮಂತ್ರಿಗಳು ಜನರತ್ತ ಕೈಬೀಸಿದರು. ಮುಖ್ಯಮಂತ್ರಿಯವರ ಕಾರು ಚಲಿಸಲು ಅಣಿಯಾಗುತ್ತಿದ್ದಂತೆ ಜೆಡಿಎಸ್ ಮಹಿಳಾ ನಾಯಕಿಯೊಬ್ಬರು ಮುಖ್ಯಮಂತ್ರಿಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹರಸಾಹಸಪಟ್ಟರು.ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ, ಕಾರ್ಯಾಧ್ಯಕ್ಷ ವಾಸುದೇವ ರಾವ್, ರಾಜ್ಯ ಸಂಘಟನಾ ಕಾರ್ಯದರ್ಶಿ ಉದಯ ಹೆಗ್ಡೆ, ರಾಜ್ಯ ಪರಿಶಿಷ್ಟ ವಿಭಾಗದ ಪ್ರಧಾನ ಕಾರ್ಯದರ್ಶಿ ಚಂದ್ರಹಾಸ್ ಎರ್ಮಾಳ್, ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ್ ಪಡುಬಿದ್ರಿ, ಜಯಶ್ರೀ ಕಟಪಾಡಿ, ಎಸ್. ಪಿ. ಬರ್ಬೋಜ, ಇಸ್ಮಾಯಿಲ್ ಪಲಿಮಾರು, ಮಹಮ್ಮದ್ ಅಶ್ರಫ್, ದಿಲ್‍ಶಾದ್, ಅಬ್ದುಲ್ ಹಮೀದ್ ಯೂಸುಫ್, ಮಹಮ್ಮದ್ ರಫೀಕ್, ರವಿ ಶೆಟ್ಟಿ ಬೈಂದೂರು ಉಪಸ್ಥಿತರಿದ್ದರು.