ಟಿವಿಎಸ್ ಸಾಯಿರಾಧಾ-ಜೇಸಿಐ ಪಡುಬಿದ್ರಿ ನಿಧಿ ಶೋಧ ದ್ವಿಚಕ್ರ ರ್ಯಾಲಿ

ಯೋಗೀಶ್ ಮಾಂಡವಿ ಮೋಟಾರ್ಸ್-ಸುರೇಶ್ ಪಾದೆಬೆಟ್ಟು ಜೋಡಿಗೆ ಪ್ರಶಸ್ತಿ
ಪಡುಬಿದ್ರಿ: ಸಾಯಿರಾಧಾ ಟಿವಿಎಸ್ ಮತ್ತು ಸಾಯಿರಾಧಾ ಪ್ರಕೃತಿ ಪ್ರಾಯೋಜಕತ್ವದಲ್ಲಿ ಜೇಸಿಐ ಪಡುಬಿದ್ರಿಯ ಜೇಸೀ ಸಪ್ತಾಹದ ಅಂಗವಾಗಿ ಭಾನುವಾರ ಪಡುಬಿದ್ರಿಯಲ್ಲಿ ನಡೆಸಲಾದ ಟಿವಿಎಸ್ ನಿಧಿ ಶೋಧ ದ್ವಿಚಕ್ರ ವಾಹನ ರ್ಯಾಲಿಯಲ್ಲಿ ಯೋಗೀಶ್ ಮಾಂಡವಿ ಮೋಟಾರ್ಸ್-ಸುರೇಶ್ ಪಾದೆಬೆಟ್ಟು ಜೋಡಿ ಪ್ರಶಸ್ತಿ ಗಳಿಸಿತು.

ಜೇಮ್ಸ್ ಡಯಾನ್ ಅಂದ್ರಾದೆ, ಮುರಳಿನಾಥ ಶೆಟ್ಟಿ ನೇತೃತ್ವದಲ್ಲಿ ನಡೆದ ರ್ಯಾಲಿಗೆ ಸಾಯಿರಾಧಾ ಗ್ರೂಪ್ಸ್‍ನ ಮ್ಯಾನೇಜಿಂಗ್ ಡೈರೆಕ್ಟರ್ ಮನೋಹರ ಶೆಟ್ಟಿಯವರು ಚಾಲನೆ ನೀಡಿದ ಸಂದರ್ಭ ಮಾತನಾಡಿ, ಈಗಿನ ಸಾರಿಗೆ ಕಾನೂನಿನ್ವಯ ವಾಹನ ಸವಾರರು ಕಾನೂನಾತ್ಮಕವಾಗಿ ವಾಹನ ಚಲಾಯಿಸಬೇಕು. ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಸಹಿತ ವಾಹನದ ಎಲ್ಲಾ ದಾಖಲೆಗಳನ್ನು ಸುಸ್ಥಿತಿಯಲ್ಲಿಡಬೇಕಾಗಿದೆ. ಈ ನಿಟ್ಟಿನಲ್ಲಿ ದ್ವಿಚಕ್ರ ವಾಹನ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದ್ದು, ಭಾಗವಹಿಸುವ ಎಲ್ಲಾ ತಂಡಗಳ ದಾಖಲೆಗಳನ್ನು ಕ್ರಮಬದ್ಧವಾಗಿ ಪರಿಶೀಲಿಸಿ ಅವಕಾಶ ಕಲ್ಪಿಸಲಾಗಿದೆ ಎಂದರು.

ರ್ಯಾಲಿಯಲ್ಲಿ 15ಕ್ಕೂ ಅಧಿಕ ದ್ವಿಚಕ್ರ ವಾಹನಗಳು ಭಾಗವಹಿಸಿದರು. ರೋಮಾಂಚಕಾರಿಯಾಗಿ ಹಾಗೂ ಅತ್ಯಂತ ತುರುಸಿನ ಸ್ಪರ್ಧೆಯಲ್ಲಿ ಯೋಗೀಶ್-ಸುರೇಶ್ ಜೋಡಿ ಪ್ರಶಸ್ತಿ ಪಡೆಯಿತು.

ಈ ಸಂದರ್ಭ ಜೇಸಿಐ ಪಡುಬಿದ್ರಿ ಅಧ್ಯಕ್ಷ ಅನಿಲ್ ಶೆಟ್ಟಿ, ಬಿಜೆಪಿ ಕಾಪು ಕ್ಷೇತ್ರ ಸಮಿತಿಯ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜೇಸಿಐ ಫೌಂಡೇಶನ್ ನಿರ್ದೇಶಕ ವೈ.ಸುಕುಮಾರ್, ಮಕರಂದ್ ಸಾಲ್ಯಾನ್, ವಿಜಯ ಭವನದ ರಿಬಿತಾ ವಿಜಯಕಯಮಾರ್ ಶೆಟ್ಟಿ, ಜೇಮ್ಸ್ ಅಂದ್ರಾದೆ, ಮುರಳೀನಾಥ ಶೆಟ್ಟಿ, ರವಿ ಶೆಟ್ಟಿ, ಮನೋಜ್ ಕುಮಾರ್, ಪ್ರದೀಪ್ ಆಚಾರ್ಯ, ಅಶ್ವಥ್, ಡಾ.ಮನೋಜ್‍ಕುಮಾರ್ ಶೆಟ್ಟಿ, ವೈ.ದಾಮೋದರ್, ಜಯ ಶೆಟ್ಟಿ ಪದ್ರ, ಶ್ರೀನಿವಾಸ ಶರ್ಮ, ರಾಜಾರಾಮ್, ರಮೇಶ್ ಯು., ಪ್ರಸನ್ನ ಕುಮಾರ್, ವಿವೇಕ್ ಬಿಎಸ್, ಪ್ರಕಾಶ್ ದೇವಾಡಿಗ, ಸುಪ್ರಿಯಾ ಅನಿಲ್ ಶೆಟ್ಟಿ, ಸಂತೃಪ್ತಿ ಮನೋಜ್ ಶೆಟ್ಟಿ, ಶರತ್ ಶೆಟ್ಟಿ, ನವೀನ್ ಎನ್.ಶೆಟ್ಟಿ, ಸುನಿಲ್ ಶೆಟ್ಟಿ, ಗಣೇಶ್ ಆಚಾರ್ಯ, ರವಿರಾಜ್ ಕೋಟ್ಯಾನ್, ಸುರೇಶ್ ಪಡುಬಿದ್ರಿ, ರೋಹಿತ್ ಪಲಿಮಾರು, ವಿನಯ ಭಂಡಾರಿ, ವಿನೋದ್ ಸಾಲ್ಯಾನ್, ನವೀನ್ ಎರ್ಮಾಳ್, ಶಿವರಾಜ್ ಮೊಯಿಲಿ, ಸುಜಿತ್ ಶೆಟ್ಟಿ, ನಾಗೇಶ್ ಶೆಟ್ಟಿ, ಪ್ರಜ್ವಲ್ ಶೆಟ್ಟಿ, ಅಶ್ವಿನಿ ಪ್ರದೀಪ್, ಹರ್ಷಿತಾ ಆಚಾರ್ಯ ಉಪಸ್ಥಿತರಿದ್ದರು.