Transformer explosion in UPCL power plant

Padubidri, September 27th, 2018:  An internal power transformer explosion in the second unit of Adani owned  UPCL power plant near Yellur on Wednesday, September 26th, impacting the power production.

The incident took place i the morning 9.20 am and the flames could be seen going up in the air from a distance outside of the unit area as well.  Luckily the fire did not spread to the storage area of hydrogen cylinders. Also there has bee no causalities in the incident and the loss is estimated to be around 4 crores as per company sources.

Due to the incident, power production in the second unit has stopped completely and only the first unit is operational now.  The exact loss could be assessed only after the inspection by the senior technical staff, as per company officials.

 

ಯುಪಿಸಿಎಲ್ ಟ್ರಾನ್ಸ್‍ಫಾರ್ಮರ್ ಸ್ಪೋಟ

ಪಡುಬಿದ್ರಿ: ಅದಾನಿ-ಯುಪಿಸಿಎಲ್ ಎರಡನೇ ಘಟಕದ ಆಂತರಿಕ ಟ್ರಾನ್ಸ್‍ಪಾರ್ಮರ್ ಸ್ಫೋಟಗೊಂಡು ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ.

ಎಲ್ಲೂರು ಬಳಿ ಕಲ್ಲಿದ್ದಾಧಾರಿತ ಉಡುಪಿ ಪವರ್ ಕಾರ್ಪೋರೇಶನ್(ಅದಾನಿ-ಯುಪಿಸಿಎಲ್)ನ ಎರಡನೇ ಘಟಕದಲ್ಲಿ ತಾಂತ್ರಿಕ ಸಮಸ್ಯೆಯಿಂದ ಬುಧವಾರ ಬೆಳಿಗ್ಗೆ s 9.20ರ ಸಮಯಕ್ಕೆ ವಿದ್ಯುತ್ ಟ್ರಾನ್ಸ್‍ಫಾರ್ಮರ್ ಸ್ಪೋಟಗೊಂಡಿದ್ದು,ಮುಗಿಲೆತ್ತರಕ್ಕೆ ಅಗ್ನಿ ಜ್ವಾಲೆ ಹರಡಿತ್ತು.ಇದರಿಂದ ಘಟಕದ ಹೊರಭಾಗದ ಜನತೆಗೂ ಅಗ್ನಿ ಅವಘಡದ ಮಾಹಿತಿ ತಿಳಿದಿತ್ತು.

ಘಟಕದ ಎರಡನೇ ಘಟಕದ ಪ್ರಾನ್ಸ್‍ಫಾರ್ಮರ್ ಸ್ಪೋಟಗೊಂಡಲ್ಲಿ ಹೈಡ್ರೋಜನ್ ಸಿಲಿಂಡರ್‍ಗಳ ದಾಸ್ತಾನಿದ್ದು ಅದಕ್ಕೆ ಬೆಂಕಿ ಹರಡಿದ್ದರೆ ಭೀಕರ ಪರಿಣಾಮ ಉಂಟಾಗುತ್ತಿತ್ತು. ಕಾರ್ಮಿಕರ್ಯಾರೂ ಸ್ಫೊಟದಿಂದ ಗಾಯಗೊಂಡಿಲ್ಲ ಎಂದು ಕಂಪನಿ ಮೂಲಗಳು ತಿಳಿಸಿದ್ದು,ಅಂದಾಜು ರೂ.4 ಕೋಟಿ ನಷ್ಟ ಸಂಭವಿಸರಬಹುದು ಎಂದು ಮಾಹಿತಿ ಲಭ್ಯವಾಗಿದೆ.

ಘಟನೆಯಿಂದ ಸ್ಥಾವರದ 600 ಮೆ.ವಾ. ಸಾಮಥ್ರ್ಯದ ಎರಡನೇ ಘಟಕ ಸಂಪೂರ್ಣ ಸ್ಥಗಿತಗೊಂಡಿದೆ. ಮೊದಲ ಘಟಕದಲ್ಲಿ ಉತ್ಪಾದನೆ ನಡೆಯುತ್ತಿದೆ. ಘಟನೆ ನಡೆಯುವಾಗ ಸಿಬ್ಬಂದಿ ಕರ್ತವ್ಯದಲ್ಲಿದ್ದರೂ ಯಾವುದೇ ಅನಾಹುತ ಉಂಟಾಗÀಲಿಲ್ಲ. ಯೋಜನೆಯ ಉನ್ನತ ತಾಂತ್ರಿಕ ಅಧಿಕಾರಿಗಳು ಬಂದು ಪರಿಶೀಲಿಸಿದ ಬಳಿಕವಷ್ಟೇ ನಷ್ಟದ ಅಂದಾಜು ಗೊತ್ತಾಗಲಿದೆ ಎಂದು ಅದಾನಿ-ಯುಪಿಸಿಎಲ್ ಸ್ಥಳೀಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

 

News by HK Hejmady

Picture from Adani Power website: http://www.adanipower.com/businesses/operational-power-plants/udupi