Taluk level Kabaddi competition for girls held at Lions School Padubidri

Padubidri, Aug 8th, 2018:  Taluk level Kabaddi competition for girls was organized at Lions English Medium School Padubidri  in association with Department of Public Instruction, Udupi Zone, on Wednesday August 8th.

Shashikanth Padubidri, the president of Udupi Zilla Panchayat Social Justice Standing Committee, inagurated the competition.  Padubidri Grama Panchayat president Mrs Damayanti V Amin and Udupi Physical Instuctors Association president Alwyn Andrade spoke on the occcasion.  BEO Vishwanath Bayari,  Lions Zone president Sudha P. R. Navada, Education co-coordinator Kavita, School correspondent P Raghavendra Navada, headmistress  Usha M, Lions Education Trust vice president Dr NT Anchan, trust member Y. Damodar, PTA president Akber M and others were present.

Lions Education Trust president Y. Gopal Shetty presided..  Teacher Renuka compered and teacher Pratibha proposed vote of thanks.

 

ಪಡುಬಿದ್ರಿ: ಕ್ರೀಡಾಪಟುಗಳಾದವರು ನಿರಂತರ ಅಭ್ಯಾಸ ಮಾಡಿಕೊಂಡಲ್ಲಿ ಉತ್ತಮ ಕ್ರೀಡಾಪಟುವಾಗಲು ಸಾಧ್ಯವಿದೆ.ಕ್ರೀಡಾ ಮನೋಭಾವನೆಯೊಂದಿಗೆ ನೀವು ಆರಿಸಿದ ಕ್ರೀಡೆಗಳಲ್ಲಿ ಸತತ ಅಭ್ಯಾಸ ನಿಮ್ಮದಾಗಿರಲಿ. ಉತ್ತಮ ದೈಹಿಕ ಕ್ಷಮತೆ, ಕಠಿನ ಅಭ್ಯಾಸ, ಚಾಕಚಕ್ಯತೆಯಿಂದ ಮಾತ್ರ ಕಬಡ್ಡಿಯಲ್ಲಿ ನಮ್ಮ ಪ್ರತಿಸ್ಪರ್ಧಿಯನ್ನು ಮಣಿಸಲು ಸಾಧ್ಯ ಎಂದು ಉಡುಪಿ ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ ಹೇಳಿದರು.

ಅವರು ಬುಧವಾರ ಪಡುಬಿದ್ರಿಯ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉಡುಪಿ ತಾಲೂಕು ಮಟ್ಟದ ಪ್ರೌಢಶಾಲಾ ಬಾಲಕಿಯರ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ದಮಯಂತಿ ವಿ. ಅಮೀನ್ ಮಾತನಾಡಿ, ಕ್ರೀಡೆಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆಯು ಬಲು ಮುಖ್ಯ ಎಂದರು.

ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಆಲ್ವಿನ್ ಅಂದ್ರಾದೆ ಮಾತನಾಡಿದರು.
ವೇದಿಕೆಯಲ್ಲಿ ಶಿಕ್ಷಣಾಧಿಕಾರಿ ವಿಶ್ವನಾಥ ಬಾಯರಿ, ಲಯನ್ಸ್ ವಲಯಾಧ್ಯಕ್ಷೆ ಸುಧಾ ಆರ್.ನಾವಡ, ಶಿಕ್ಷಣ ಸಂಯೋಜಕಿ ಕವಿತಾ, ಲಯನ್ಸ್ ಆಂಗ್ಲ ಮಾಧ್ಯಮ ಶಾಲಾÁಡಳಿ ಸಮಿತಿಯ ಉಪಾಧ್ಯಕ್ಷ ಡಾ| ಎನ್. ಟಿ. ಅಂಚನ್, ಲಯನ್ಸ್ ಟ್ರಸ್ಟ್ ಸದಸ್ಯ ವೈ.ದಾಮೋದರ್, ಲಯನ್ಸ್ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕ ಪಿ. ರಾಘವೇಂದ್ರ ನಾವಡ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಪಿ. ಎಂ. ಅಕ್ಬರ್, ಶಾಲಾ ಮುಖ್ಯ ಶಿಕ್ಷಕಿ ಉಷಾ ಎಂ. ಉಪಸ್ಥಿತರಿದ್ದರು.

ಲಯನ್ಸ್ ಆಂಗ್ಲ ಮಾಧ್ಯಮ ಶಾಲಾ ಟ್ರಸ್ಟ್‍ನ ಅಧ್ಯಕ್ಷ ವೈ. ಗೋಪಾಲ ಶೆಟ್ಟಿ ಸ್ವಾಗತಿದರು. ಅಧ್ಯಾಪಕಿ ರೇಣುಕಾ ಕಾರ್ಯಕ್ರಮ ನಿರ್ವಹಿಸಿದರು. ಪ್ರತಿಭಾ ವಂದಿಸಿದರು.