ಇನ್ನಾದಲ್ಲಿ ವಿಶಿಷ್ಟ ಕಾರ್ಯಕ್ರಮ

ಇನ್ನಾದ ಎಂವಿ.ಶಾಸ್ತ್ರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾದ ಪ್ರಕಾಶ್ ರಾವ್ ಪಿ.ಎನ್ ತಮ್ಮ ವಿವಾಹದ ರಜತ ಮಹೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಂಡರು. ತಮಗೆ ವಿದ್ಯೆ ನೀಡಿದ ಪ್ರೌಢಶಾಲೆಯ ನಾಲ್ಕು ಮಂದಿ ನಿವೃತ್ತ ಹಿರಿಯ ಶಿಕ್ಷಕರನ್ನು ಒಳಗೊಂಡು ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆ ಒಳಗೊಂಡಂತೆ ಒಟ್ಟು 26 ಮಂದಿ ಸಾಧಕ ಶಿಕ್ಷಕರನ್ನು ಪ್ರಸಸ್ತಿ ನೀಡಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಕಾರ್ಕಳದ ಯುವವಾಗ್ಮಿ ಶ್ರೀ ಆದರ್ಶ ಗೋಖಲೆಯವರ “ಶಾಲಾ ಆಡಳಿತದಲ್ಲಿ ಬದ್ಧತೆ ಹಾಗೂ ಕ್ರಿಯಾಶೀಲತೆಯ” ಬಗ್ಗೆ ಕಾರ್ಕಳ ತಾಲೂಕಿನ ವಿವಿಧ ಮುಖ್ಯೋಪಾಧ್ಯಾಯರುಗಳು ಪ್ರಯೋಜನ ಪಡೆದರು. ತದ ನಂತರ ರಜತ ಮಹೋತ್ಸವ ಕಾರ್ಯಕ್ರಮವನ್ನು ಮುಂಬೈಯ ಉದ್ಯಮಿ ಶ್ರೀ ಶೇಖರ್ ಶೆಟ್ಟಿ ಕಾಚೂರು ಪಡು ಮನೆ ಇನ್ನ, ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಕಳದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಶಿಧರ್ ಜಿ.ಎಸ್ ಸಭೆಯ ಅಧ್ಯಕ್ಷ ಸ್ಥಾನವನ್ನು ವಹಿಸಿ, ಎಲ್ಲರೂ ತಮ್ಮ ವಿವಾಹ ರಜತ ಮಹೋತ್ಸವವನ್ನು ತಮ್ಮ ಮನೆ ಅಥವಾ ಹೊಟೇಲ್‍ಗಳಲ್ಲಿ ಆಚರಿಸಿಕೊಳ್ಳುತ್ತಾರೆ. ಆದರೆ ಪ್ರಕಾಶ್ ರಾವ್ ಪಿ.ಎನ್ ತಮಗೆ ಅನ್ನ ನೀಡುತ್ತಿರುವ ತಮ್ಮ ಪ್ರೌಢಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳು, ಪೆÇೀಷಕರು ಹಗೂ ಇನ್ನಾದ ಊರಿನವರ ಮುಂದೆ ವಿವಿಧ 26 ಶಿಕ್ಷಕರನ್ನು ಸನ್ಮಾನಿಸಿ ತಮ್ಮ ವಿವಾಹದ ರಜತ ಮಹೋತ್ಸವವನ್ನು ಆಚರಿಸಿಕೊಳ್ಳುವುದು ಒಂದು ವಿಶಿಷ್ಟವಾದ ಕಾರ್ಯಕ್ರಮ ಉಳಿದವರಿಗೆ ಪ್ರೇರಣೆಯಾಗಲಿ ಎಂದು ಶುಭ ಹಾರೈಸಿದರು. ಶಾಲೆಯ ಮೊದಲ ಹಳೆ ವಿದ್ಯಾರ್ಥಿ ಶ್ರೀ ಉದಯ ಕುಮಾರ್ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು.

ಸಮಾರಂಭದಲ್ಲಿ ಉಡುಪಿ ಜಿಲ್ಲಾ ಮುಖ್ಯೋಪಾಧ್ಯಾಯ ಸಂಘದ ಅಧ್ಯಕ್ಷ ಶ್ರೀ ಚಂದ್ರಶೇಖರ್ ಶೆಟ್ಟಿ, ಜಿಲ್ಲಾ ಸಹಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಕಿರಣ್ ಹೆಗ್ಡೆ, ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀ ರವೀಂದ್ರ ಹೆಗ್ಡೆ, ಉಡುಪಿ ಸಾಹಿತ್ಯ ಸಂಘದ ಅಧ್ಯಕ್ಷ ಶ್ರೀ ನೀಲಾವರ ಸುರೇಂದ್ರ ಅಡಿಗರು, ಉತ್ತರ ಕನ್ನಡದ ಚಿತ್ತಾರ ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕ ಶ್ರೀ ಪ್ರಕಾಶ್ ನಾಯಕ್ ಶುಭ ಹಾರೈಸಿದರು. ಸಹಶಿಕ್ಷಕರಾದ ಸುಧಾಕರ್ ಆಚಾರ್ಯ ಸ್ವಾಗತಿಸಿದರೆ, ಶಾಲಾ ಸಂಚಾಲಕರಾದ ಶ್ರೀ ಸತೀಶ್ ಸದಾನಂದ, ಶ್ರೀ ಜಯ ಎಸ್ ಕೋಟ್ಯಾನ್ ಶಾಲಾ ವ್ಯವಸ್ಥಾಪಕ ಮಂಡಳಿ ಉಪಾಧ್ಯಕ್ಷರು, ಶ್ರೀ ಅಮರನಾಥ ಶೆಟ್ಟಿ ಉದ್ಯಮಿಗಳು ಅಣ್ಣಾಜಿಗೋಳಿ, ಶ್ರೀ ಕೆ.ಸಿ ಕಾಮತ್ ಉದ್ಯಮಿಗಳು ಕಾಂಜರಕಟ್ಟೆ ಅಭಿನಂದಿಸಿದರು. ಕಾರ್ಯಕ್ರಮವನ್ನು ಸಹಶಿಕ್ಷಕ ರಾಜೇಂದ್ರ ಭಟ್ ನಿರ್ವಹಿಸಿ, ಸಹಶಿಕ್ಷಕ ದಿನೇಶ ನಾಯಕ್ ಧನ್ಯವಾದ ನೀಡಿದರು. ಮಧ್ಯಾಹ್ನ ಸಹಭೋಜನದ ನಂತರ ಪ್ರಖ್ಯಾತ ಯಕ್ಷಗಾನದ ಮೇರು ಶಿಖರ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ಶ್ರೀ ಸತ್ಯನಾರಾಯಣ ಪುಣಿಚಿತ್ತಾಯ, ಶ್ರೀಮತಿ ಕಾವ್ಯಶ್ರೀ ಅಜೇರು ಅವರನ್ನು ಒಳಗೊಂಡ ಮೂರು ಗಂಟೆಗಳ ಕಾಲ “ಯಕ್ಷಗಾನ-ವೈಭವ” ಕಾರ್ಯಕ್ರಮವು ಮನಸೂರೆಗೊಂ