ಶ್ರೀ ಕ್ಷೇತ್ರ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳದ ವರ್ಷಾವಧಿ ಉತ್ಸವ

ಮೂಲ್ಕಿಯ ಶ್ರೀ ಕ್ಷೇತ್ರ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳದ ವರ್ಷಾವಧಿ ಉತ್ಸವದ ಅಂಗವಾಗಿ ಬುಧವಾರ ರಾತ್ರಿ ರಥೋತ್ಸವ ವಿಜ್ರಂಭಣೆಯಿಂದ ನೆರವೇರಿತು.

 

ಮೂಲ್ಕಿಯ ಬಪ್ಪನಾಡು ಜಾತ್ರಾ ಉತ್ಸವದ ಅಂಗವಾಗಿ ಗುರುವಾರ ಮುಂಜಾನೆ ಚಂದ್ರಶ್ಯಾನುಭಾಗ ಕುದ್ರುವಿನ ಜಳಕದ ಕೆರೆಯಲ್ಲಿ ಶ್ರೀ ದುರ್ಗೆಯ ಜಳಕದ ಬಲಿ ಸೇವೆ ನಡೆಯಿತು.

 

ಮೂಲ್ಕಿಯ ಬಪ್ಪನಾಡು ಜಾತ್ರೆಯ ಅಂಗವಾಗಿ ಬುಧವಾರ ರಾತ್ರಿ ನಡೆದ ರಥೋತ್ಸವದ ಸಂದರ್ಭ ಶ್ರೀ ದುರ್ಗೆಯ ಸಹೋದರಿ ಸಸಿಹಿತ್ಲು ಶ್ರೀ ಭಗವತಿ ಮತ್ತು ಪರಿವಾರ ದೈವಗಳ ಮೇಲುಸ್ತುವಾರಿಯಲ್ಲಿ ರಥಾರೋಹಣ ನಡೆಯಿತು.

 

ಮೂಲ್ಕಿ ಮೂಲದ ಮುಂಬೈ ಚರಿಷ್ಮಾ ಬಿಲ್ಡರ್ಸ್ ಆಡಳಿತ ನಿರ್ದೇಶಕ ಸುಧೀರ್ ಶೆಟ್ಟಿ ಪಡುಮನೆ ಮತ್ತು ಹಿಂದಿ ಚಲನಚಿತ್ರ ನಟ ಸುನಿಲ್ ಶೆಟ್ಟಿಯವರು ಬಪ್ಪನಾಡು ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ದೇವಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.ಈ ಸಂದರ್ಭ ದೇವಳದ ಅನುವಂಶಿಕ ಮತ್ತು ಆಡಳಿತ ಮೊಕ್ತೇಸರ ಎನ್‍ಎಸ್ ಮನೋಹರ ಶೆಟ್ಟಿ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಮ್ಮ ಪಿ., ಅರ್ಚಕ ಶ್ರೀಪತಿ ಉಪಾಧ್ಯಾಯ,ನರಸಿಂಹ ಭಟ್ ಮತ್ತಿತರರು ಉಪಸ್ಥಿತರಿದ್ದರು.

 

ಮೂಲ್ಕಿಯ ಶ್ರೀ ಕ್ಷೇತ್ರ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳದ ಜಾತ್ರಾ ಮಹೋತ್ಸವದ ಸಂದರ್ಭ ಬುಧವಾರ ರಾತ್ರಿ ಮಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್‍ಕುಮಾರ್ ಕಟೀಲ್ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.ಈ ಸಂದರ್ಭ ಪಕ್ಷದ ಮುಖಂಡರುಗಳಾದ ಈಶ್ವರ್ ಕಟೀಲ್,ಸುನಿಲ್ ಆಳ್ವ,ಪುರುಷೋತ್ತಮ ರಾವ್,ರಂಗನಾಥ್ ಶೆಟ್ಟಿ,ಶೈಲೇಶ್ ಕುಮಾರ್,ಸಾಧು ಅಂಚನ್,ಶರತ್ ಕುಬೆವೂರು,ರವೀಂದ್ರ ಶೆಟ್ಟಿ,ಸಂತೋಷ್ ಶೆಟ್ಟಿ,ನವೀನ್‍ರಾಜ್,ಜಯಾನಂದ್ ಮತ್ತಿತರರು ಉಪಸ್ಥಿತರಿದ್ದರು.