ಮಾರ್ಚ್ 20-28:ಶ್ರೀ ಕ್ಷೇತ್ರ ಬಪ್ಪನಾಡು ವರ್ಷಾವಧಿ ಮಹೋತ್ಸವ

ಮೂಲ್ಕಿ: ಶ್ರೀ ಕ್ಷೇತ್ರ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವರ್ಷಾವಧಿ ಮಹೋತ್ಸವವು ಮಾರ್ಚ್ 20 ರಿಂದ 27 ರ ವರೆಗೆ ಜರಗಲಿದೆ.

ಮಾರ್ಚ್ 20 ರ ಬುಧವಾರ ಮಧ್ಯಾಹ್ನ ಧ್ವಜಾರೋಹಣ, ಶ್ರೀ ದೇವಿ ಮತ್ತು ಸಸಿಹಿತ್ಲು ಶ್ರೀ ಭಗವತಿಯರ ಭೇಟಿ,ರಾತ್ರಿ ಉತ್ಸವ ಬಲಿ, 21 ರ ಗುರುವಾರ ರಾತ್ರಿ ಉತ್ಸವ ಬಲಿ, 22ರ ಶುಕ್ರವಾರ ರಾತ್ರಿ ಪೇಟೆ ಸವಾರಿ, 23ರ ಶನಿವಾರ ರಾತ್ರಿ ಕೊಪ್ಪಲ ಸವಾರಿ, 24 ರ ಭಾನುವಾರ ರಾತ್ರಿ ಬಾಕಿಮಾರು ದೀಪೆÇೀತ್ಸವ, 25 ರ ಸೋಮವಾರ ರಾತ್ರಿ ಕೆರೆ ದೀಪೆÇೀತ್ಸವ, 26 ರ ಮಂಗಳವಾರ ಮಧ್ಯಾಹ್ನ ಹಗಲು ರಥೋತ್ಸವ,ರಾತ್ರಿ ಉತ್ಸವ ಬಲಿ,ಶಯನೋತ್ಸವ, 27 ರ ಬುಧವಾರ ಬೆಳಿಗ್ಗೆ ಕವಟೋದ್ಘಾಟನೆ, ಸಂಜೆ ಬಲಿ, ಓಕುಳಿ, ರಾತ್ರಿ ಶ್ರೀ ದೇವಿ ಮತ್ತು ಭಗವತಿಯರ ಭೇಟಿ, ಮಹಾ ರಥೋತ್ಸವ, ಅವಭೃತ, ಧ್ವಜಾವರೋಹಣ, 28 ರ ಗುರುವಾರ ಊರ ಪರವೂರ ಭಕ್ತಾದಿಗಳಿಂದ ಹಣ್ಣು ಕಾಯಿ ಸಮರ್ಪಣೆ, ಸೇವಾದಿ.29 ರ ಮಧ್ಯಾಹ್ನ ಸಂಪೆÇ್ರೀಕ್ಷಣೆ,ಮಹಾ ಮಂತ್ರಾಕ್ಷತೆ,31 ರ ಭಾನುವಾರ ದೇವಳ ಆಡಳಿತಕ್ಕೊಳಪಟ್ಟ ಕೊಳಚಿಕಂಬಳ ಶ್ರೀ ಜಾರಂದಾಯ ದೈವದ ನೇಮೋತ್ಸವವು ಜರಗಲಿದೆಯೆಂದು ದೇವಳದ ಅನುವಂಶಿಕ ಹಾಗೂ ಆಡಳಿತ ಮೊಕ್ತೇಸರ ಎನ್.ಎಸ್.ಮನೋಹರ್ ಶೆಟ್ಟಿ, ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು ಮತ್ತು ಕಾರ್ಯ ನಿರ್ವಹಣಾಧಿಕಾರಿ ಜಯಮ್ಮ ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.