Sea erosion intensifies further at Amavasyekariya in Hejamadi

Padubidri, Aug. 9th, 2018:  Sea erosion at Amavasyekariya in Hejamadi has further intensified.  Many tress and electrical poles have been washed away.  The fisheries road is also facing imminent danger.  The electricity board MESCOM has come forward to shift the electrical poles likely to be affected.

News in Kannada

ಹೆಜಮಾಡಿ ತೀವ್ರ ಕಡಲ್ಕೊರೆತ_ತೆಂಗಿನಮರ,ಗಾಳಿ ಮರ ಸಮುದ್ರ ಪಾಲು

ಹೆಜಮಾಡಿಯ ಅಮವಾಸ್ಯೆಕರಿಯ ಬಳಿ ಗುರುವಾರ ಸಮುದ್ರ ಕೊರೆತಕ್ಕೆ 5-6 ತೆಂಗಿನ ಮರ,ಹತ್ತಕ್ಕೂ ಅಧಿಕ ಗಾಳಿಮರ ಸಮುದ್ರ ಪಾಲಾಗಿದ್ದು,ವಿದ್ಯುತ್ ಕಂಬಗಳು,ಮೀನುಗಾರಿಕಾ ರಸ್ತೆ ಅಪಾಯದಂಚಿನಲ್ಲಿದೆ.

ಹೆಜಮಾಡಿಯ ಅಮವಾಸ್ಯೆಕರಿಯದ ದಕ್ಷಿಣ ದಿಕ್ಕಿನಲ್ಲಿ ಸುಮಾರು 2009 ಮೀಟರ್‍ನಷ್ಟು ಸಮುದ್ರ ದಂಡೆಗೆ ಅಪ್ಪಳಿಸುತ್ತಿದ್ದು,ಚಂದ್ರಕಾಂತ್ ಶ್ರೀಯಾನ್,ಸುನಿಲ್,ಲೋಕನಾಥ ಶ್ರೀಯಾನ್,ರಾಘು ಮತ್ತು ಯಮುನಾ ಎಂಬವರ ತೆಂಗಿನ ಮರಗಳು ಸಮುದ್ರ ಪಾಲಾಗಿದ್ದು,ಇನ್ನು ಕೆಲವು ಅಪಾಯದಂಚಿನಲ್ಲಿದೆ.ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಲು ಮೆಸ್ಕಾಂ ಮುಂದಾಗಿದೆ.

ಹೆಜಮಾಡಿ ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್ ಘಟನಾ ಸ್ಥಳಕ್ಕೆ ಆಗಮಿಸಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ ಮೇರೆಗೆ ಮಧ್ಯಾಹ್ನದಿಂದಲೇ ಕಲ್ಲು ಬಂಡೆಗಳನ್ನು ತಂದು ತಡೆಗೋಡೆ ನಿರ್ಮಾಣ ನಡೆದಿದೆ.