ಪಡುಬಿದ್ರಿಯಲ್ಲಿ ಮುಂದುವರಿದ ಕಡಲ್ಕೊರೆತ: ತೆಂಗಿನ ಮರಗಳು ಸಮುದ್ರಪಾಲು

ಡುಬಿದ್ರಿ; ಕಳೆದ 3 ದಿನಗಳಿಂದ ಪಡುಬಿದಿಯ ಕಾಡಿಪಟ್ಣ ಮತ್ತು ನಡಿಪಟ್ಣಗಳಲ್ಲಿ ಕಡಲ್ಕೊರೆತ ಭಾನುವಾರವೂ ಮುಂದುವರಿದಿದ್ದು, ಕೆಲವು ತೆಂಗಿನ ಮರಗಳು ಸಮುದ್ರ ಪಾಲಾಗಿದೆ.

ಕಾಡಿಪಟ್ಣದ ರಾಮ ಕುಂದರ್ ಮನೆಯವರಿಗೆ ಸೇರಿದ 4 ತೆಂಗಿನ ಮರಗಳು ಭಾನುವಾರ ಮಧ್ಯಾಹ್ನ ನೀರು ಪಾಲಾಗಿದ್ದು, ಇನ್ನಷ್ಟು ತೆಂಗಿನ ಮರಗಳು ಅಪಾಯ ಸ್ಥಿಯಲ್ಲಿದೆ. ಅಲ್ಲೇ ಪಕ್ಕದ ರಾಘು ಸಾಲ್ಯಾನ್ ಕುಟುಂಬದ ಗಾಳಿ ಮರಗಳು ಸಮುದ್ರ ಪಾಲಾಗಿದ್ದು, ಅವರ ಹೆಂಚಿನ ಮಾಡಿನ ಚಪ್ಪರ ಅಪಾಯ ಸ್ಥಿತಿಯಲ್ಲಿದೆ.

ಇಲ್ಲಿ ಸಮುದ್ರ ಕರೆತ ಪ್ರದೇಶದಿಂದ ಮೀನುಗಾರಿಕಾ ರಸ್ತೆಯು ಕೇವಲ 10 ಮೀಟರ್ ಹತ್ತಿರದಲ್ಲಿದ್ದು, ಸಮುದ್ರ ಕೊರೆತ ಮುಂದುವರಿದರೆ ರಸ್ತೆ ತುಂಡಾಗುವ ಅಪಾಯ ಎದುರಾಗಿದೆ. ಇಲ್ಲಿ ತಡೆಗೋಡೆ ನಿರ್ಮಾಣಕ್ಕೆ ಕಲ್ಲು ತಂದು ಹಾಕಿದ್ದರೂ ಕೊರೆತ ಪ್ರದೇಶಕ್ಕೆ ಅಳವಡಿಸಿಲ್ಲ.

ಪಡುಬಿದ್ರಿ ಬೀಚ್‍ನ 150 ಮೀಟರ್ ಎರಡೂ ಬದಿಯಲ್ಲಿ ಕಡಲ್ಕೊರೆತ ಕಾಣಿಸಿಕೊಂಡಿದೆ. ಈ ಭಾಗದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಅಳವಡಿಸಿದ ಇಂಟರ್‍ಲಾಕ್ ಸಮುದ್ರದ ಪಾಲಾಗಿದ್ದು, ಬೀಚ್‍ನಲ್ಲಿ ಅಳವಡಿಸಿದ