Scooter rider killed as a tanker overturns near Hejamady

Padubidri, September 15th, 2018: A tanker carrying sunflower oil hit a scooter coming from  the other side of the road after climbing over the road divider and overtiring in Hejamady on Saturday evening. The scooter rider has been killed in the tragic accident due to severe injuries and has been identified as Jayaraj (50), son of Ranga Mestri from Kalyanupur’s Nejaru Moodu Thonse, residing in Manish Nilaya. The accident happened near Hejamady near Boggarilacchil Ayyappa Nagar cross road.

Deceased Nagaraj from Nejaru.
                     Deceased Nagaraj from Nejaru.

 

The tanker was loaded with sunflower oil from New Mangalore harbour in Panambur and was bound for Mysore’s Srirangapattana via Padubidri and Sringeri route. After overturning smoke started coming from the vehicle and it was brought under control by the Navyug toll gate staff by using powdered fire extinguishers.ol.  A car and another scooter had a narrow escape as the tanker crossed over the road divider. The tanker driver Mohanraj from Bangalore’s Gurugutepalya has suffered a leg injury.

Deceased Nejaru resident Jayaraj was living in Pakshikere due to his work requirements. He is survived by his wife and three children.

Read in Kannada …

ಹೆಜಮಾಡಿಯಲ್ಲಿ ಟ್ಯಾಂಕರ್ ಪಲ್ಟಿಯಾಗಿ ಸ್ಕೂಟರ್ ಸವಾರ ದಾರುಣ ಸಾವು

 

ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಸನ್‍ಫ್ಲವರ್ ತುಂಬಿದ ಟ್ಯಾಂಕರ್ ಒಂದು ರಸ್ತೆ ವಿಭಾಜಕ ಏರಿ ಎದುರು ರಸ್ತೆಗೆ ಧುಮುಕಿ ಸ್ಕೂಟರ್ ಮೇಲೆ ಬಿದ್ದು ಪಲ್ಟಿಯಾಗಿ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಸವಾರ ದಾರುಣ ಮೃತಪಟ್ಟ ಘಟನೆ ಇಲ್ಲಿನ ಠಾಣಾ ವ್ಯಾಪ್ತಿಯ ಹೆಜಮಾಡಿಯಲ್ಲಿ ಶನಿವಾರ ಸಂಜೆ ನಡೆದಿದೆ.


ಕಲ್ಯಾಣಪುರ ನೇಜಾರು ಮೂಡುತೋನ್ಸೆಯ ಮನೀಶ್ ನಿಲಯ ವಾಸಿ ರಂಗ ಮೇಸ್ತ್ರಿಯವರ ಮಗ ಜಯರಾಜ್(50) ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟ ದುರ್ದೈವಿ.

ಘಟನೆ ವಿವರ: ಪಣಂಬೂರು ಬಂದರಿನಿಂದ ಸನ್‍ಫ್ಲವರ್ ಆಯಿಲ್ ತುಂಬಿಸಿಕೊಂಡು ಪಡುಬಿದ್ರಿಯಿಂದ ಶೃಂಗೇರಿ ಮೂಲಕ ಮೈಸೂರಿನ ಶ್ರೀರಂಗಪಟ್ಟಣಕ್ಕೆ ಹೊರಟಿದ್ದ ಟ್ಯಾಂಕರ್ ಹೆಜಮಾಡಿಯ ಬೊಗ್ಗರಿಲಚ್ಚಿಲ್ ಅಯ್ಯಪ್ಪನಗರಕ್ಕೆ ತೆರಳುವ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಾಜಕದ ಮೇಲೇರಿ ಬಲಭಾಗದ ರಸ್ತೆಗಿಳಿದು ಎದುರಿನಿಂದ ಬರುತ್ತಿದ್ದ ಸ್ಕೂಟರ್ ಮೇಲೇರಿ ಮಗುಚಿ ಬಿದ್ದಿತ್ತು.ಈ ಸಂದರ್ಭ ಸ್ಕೂಟರ್‍ನೊಂದಿಗೆ ಸವಾರ ಟ್ಯಾಂಕರ್ ಅಡಿಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
25 ಟನ್ ಸಾಮಥ್ರ್ಯದ ಟ್ಯಾಂಕರ್‍ನಲ್ಲಿ 17 ಟನ್ ಸನ್‍ಫ್ಲವರ್ ಆಯಿಲ್ ತುಂಬಿಸಿದ ಕಾರಣ ಅತೀ ವೇಗದಲ್ಲಿ ಬಂದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿತ್ತು ಎಂದು ಮೇಲ್ನೋಟಕ್ಕೆ ಕಂಡುಬಂದಿದ್ದು,ಮತ್ತೊಂದು ಟ್ಯಾಂಕರ್ ಚಾಲಕ ಇದೇ ಕಾರಣವಿರಬಹುದೆಂದು ಸ್ಪಷ್ಟಪಡಿಸಿದ್ದಾರೆ.

ಇದೇ ಪ್ರಥಮ ಬಾರಿಗೆ ಟ್ಯಾಂಕರ್‍ನಲ್ಲಿ ಆಯಿಲ್ ತುಂಬಿ ಹೊರಟಿದ್ದ ಟ್ಯಾಂಕರ್ ಚಾಲಕ ಟ್ಯಾಂಕರ್ ಅಲುಗಾಟದಿಂದ ವಿಚಲಿತಗೊಂಡಿದ್ದು ಇದೇ ಅಪಘಾತಕ್ಕೆ ಕಾರಣವಿರಬಹುದೆಂದು ಸ್ಥಳೀಯರು ಅಭಿಪ್ರಾಯಿಸಿದ್ದಾರೆ.
ಸಂಜೆ 4.45ಕ್ಕೆ ಘಟನೆ ಸಂಭವಿಸಿದ್ದು ಟ್ಯಾಂಕರ್ ಪಲ್ಟಿಯಾದ ಸಂದರ್ಭ ದಟ್ಟ ಹೊಗೆ ಕಾಣಿಸಿಕೊಂಡಿತ್ತು.ಈ ಸಂದರ್ಭ ನವಯುಗ್ ಟೋಲ್ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಅಗ್ನಿ ನಿರೋಧಕ ಹುಡಿ ಸಿಂಪಡಿಸಿ ಹೊಗೆಯನ್ನು ತಹಬದಿಗೆ ತಂದರು.ಇಲ್ಲದಿದ್ದಲ್ಲಿ ಬೆಂಕಿ ಹರಡುವ ಸಂಭವವಿತ್ತು.ಆದಾಗ್ಯೂ ಉಡುಪಿ ಅಗ್ನಿ ಶಾಮಕ ದಳ ಆಗಮಿಸಿ ಮುನ್ನೆಚ್ಚರಿಕೆ ಕ್ರಮ ಅನುಸರಿಸಿದರು.

ಟ್ಯಾಂಕರ್ ಪಲ್ಟಿಯಾಗಿ ಅಯ್ಯಪ್ಪನಗರಕ್ಕೆ ಹೋಗುವ ರಸ್ತೆಗೆ ಅಡ್ಡವಾಗಿ ಬಿದ್ದ ಕಾರಣ ಆ ಕಡೆಯಿಂದ ಬರುವ ಸ್ಥಳೀಯರಿಗೆ ಸಮಸ್ಯೆಯುಂಟಾಯಿತು.ಅವರು ಸುತ್ತುಬಳಸಿ ಪ್ರಯಾಣ ಮುಂದುವರಿಸಿದರು.
ಅಪಘಾತದ ವೇಳೆ ಕಾರು ಮತ್ತು ಸ್ಕೂಟರ್ ಒಂದು ಕೂದಲೆಳೆ ಅಂತರದಿಂದ ಪಾರಾಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ವಿಕಕ್ಕೆ ಮಾಹಿತಿ ನೀಡಿದ್ದಾರೆ.ಕಾರು ಇಂಚು ಅಂತರದಲ್ಲಿ ಪಾರಾದರೆ ಸ್ಕೂಟರ್ ಸವಾರ ಮಗುಚಿ ಬಿದ್ದಿದ್ದು,ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.ಹೆಚ್ಚಿನ ವಾಹನಗಳು ಈ ರಸ್ತೆಯಲ್ಲಿ ಅತೀವೇಗದಿಂದ ಸಂಚರಿಸುತ್ತಿದ್ದು,ಬಸ್ಸು ಅಥವಾ ಕಾರು ಈ ಸಂದರ್ಭ ಸಿಲುಕುತ್ತಿದ್ದರೆ ಅತೀ ಹೆಚ್ಚು ನಷ್ಟ ಸಂಭವಿಸುತ್ತಿತ್ತು.
ಪಡುಬಿದ್ರಿ ಠಾಣಾಧಿಕಾರಿ ಸತೀಶ್ ಮತ್ತವರ ಸಿಬ್ಬಂದಿ ವಾಹನ ಸಂಚಾರ ಸುಗಮಗೊಳಿಸಲು ಸಹಕರಿಸಿದರು.ಬಳಿಕ ಜೆಸಿಬಿ ಮೂಲಕ ಅಯ್ಯಪ್ಪನಗರ ರಸ್ತೆ ಸಂಚಾರವ ಸುಗಮಗೊಳಿಸಿದರು.

ಟ್ಯಾಂಕರ್ ಚಾಲಕ ಬೆಂಗಳೂರು ಗುರುಗುಂಟೆಪಾಳ್ಯ ವಾಸಿ ಮೋಹನ್‍ರಾಜ್ ಘಟನೆ ಸಂದರ್ಭ ಕಾಲಿಗೆ ಗಾಯಗೊಂಡಿದ್ದು,ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದರು.ಅಪಘಾತದ ಸಂದರ್ಭ ಟ್ಯಾಂಕರ್ ಡಿವೈಡರ್ ಮೇಲೇರಿದಾಗ ಆತ ಸ್ವಸ್ಥಾನನದಿಂದ ಕೆಳಕ್ಕೆ ಎಸೆಯಲ್ಪಟ್ಟಿದ್ದರು ಎಂದು ಪ್ರತಯ್ಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಪಡುಬಿದ್ರಿ ಠಾಣೇಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಜಯರಾಜ್‍ಗೆ ಪತ್ನಿ ಹಾಗೂ ಮೂವರು ಮಕ್ಕಳಿದ್ದಾರೆ.ನೇಜಾರು ವಾಸಿಯಾದ ಅವರು ಕೆಲಸದ ನಿಮಿತ್ತ ಪಕ್ಷಿಕೆರೆಯಲ್ಲಿ ವಾಸವಿದ್ದು,ಸ್ಕೂಟರ್‍ನಲ್ಲಿ ಅಕ್ಕಿಯ ಮೂಟೆ ಇತ್ತು.ಅಪಘಾತದ ಸಂದರ್ಭ ಅವರನ್ನು ಟ್ಯಾಂಕರ್ ಅಡಿಯಿಂದ ಹೊರಕ್ಕೆಳೆಯಲು ಅರ್ಧ ಗಂಟೆ ಸ್ಥಳೀಯರು ಶ್ರಮಿಸಿದರು.