ಹೆಜಮಾಡಿ ಉಪ್ಪು ನೀರು ನುಗ್ಗಿ ಬೆಳೆ ಹಾನಿ

ಪಡುಬಿದ್ರಿ:: ಅರಬ್ಬೀ ಸಮುದ್ರ ಪ್ರಕ್ಷುಬ್ದಗೊಂಡ ಹಿನ್ನೆಲೆಯಲ್ಲಿ ಶಾಂಭವಿ ಹೊಳೆಯಲ್ಲಿ ಕಡಲ ನೀರು ತುಂಬಿ ಸುತ್ತಲ ಕೃಷಿಗದ್ದೆಗಳಿಗೆ ನುಗ್ಗಿದ ಕಾರಣ ಬೆಳೆಹಾನಿಯಾದ ಘಟನೆ ಹೆಜಮಾಡಿ ಗ್ರಾಮ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.

ಹೆಜಮಾಡಿ ಗ್ರಾಮದ ಕಡಲ ತಡಿಯ ನಡಿಕುದ್ರು, ಪರಪಟ್ಟ, ಕೊಪ್ಪಲಗಳಲ್ಲಿ ಉಪ್ಪುನೀರು ನುಗ್ಗಿ ಭತ್ತದ ಬೆಳೆ ಹಾನಿಯಾಗಿದೆ.
ಹೆಜಮಾಡಿ ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್, ಉಪಾಧ್ಯಕ್ಷ ಸುಧಾಕರ ಕರ್ಕೇರರವರು ಈ ಬಗ್ಗೆ ಕಾಪು ತಹಶೀಲ್ದಾರ್ ಮೊಹಮ್ಮದ್ ಇಸಾಕ್ ಗಮನ ಸೆಳೆದಿದ್ದು, ಅವರು ತಕ್ಷಣ ಆರ್‍ಐ ರವಿಶಂಕರ್ ಜತೆಗೆ ಆಗಮಿಸಿ ಪರಿಶೀಲನೆ ನಡೆಸಿದರು.

ಈ ಭಾಗಗಳಲ್ಲಿ ಕೆಲವು ಕಡೆ ಭತ್ತದ ಕಟಾವು ನಡೆದಿದ್ದು, ತರಕಾರಿ ಬೆಳೆ ಬೆಳೆಯಲು ನಿರ್ಧರಿಸಲಾಗಿತ್ತು. ಇದೀಗ ಉಪ್ಪು ನೀರು ನುಗ್ಗಿದ ಪರಿನಾಮ ತರಕಾರಿ ಬೆಳೆ ಅಸಾಧ್ಯವಾಗಿದೆ ಎಂದು ಕೃಷಿಕ ಹಾಗೂ ಗ್ರಾಪಂ ಸದಸ್ಯ ವಾಮನ ಕೋಟ್ಯಾನ್ ನಡಿಕುದ್ರು ತಿಳಿಸಿದ್ದಾರೆ. ಪರಪಟ್ಟ, ಕೊಪ್ಪಲಗಳಲ್ಲಿ ಭತ್ತದ ಕಟಾವು ನಡೆದಿಲ್ಲ. ಈ ಭಾಗಗಳಲ್ಲಿ ಉಪ್ಪು ನೀರು ನುಗ್ಗಿದ ಕಾರಣ ಬೆಳೆ ನಷ್ಟವಾಗಿದೆ.