Rotary Club Padubidri organizes Cyclothon-2018 to spread social awaeness

Padubidri, Jan 14th, 2018:  Rotary Club Padubidri orgabized a cycling programme  – Cyclothon02018  from Kaup to Hejamady on Sunday, to spread social awareness.  Speaking at the closing ceremony Mr Kishore Alva,  Executive Director Adani-UPCL, said that the rural cycling programme with social awareness awareness message  a model programme and it is beneficial in health point of view.  He also announced that if Rotary club  continues this every year, the company would sponsor such programmes.

Full news in Kannada …

ಗ್ರಾಮೀಣ ಭಾಗದಲ್ಲಿ ನಡೆದ ಸೈಕ್ಲಿಂಗ್ ಇತರರಿಗೆ ಮಾದರಿ-ಕಿಶೋರ್ ಆಳ್ವ
ಪಡುಬಿದ್ರಿ ರೋಟರಿ ಕ್ಲಬ್ ವತಿಯಿಂದ ಜನಜಾಗೃತಿ ಅಂಗವಾಗಿ ಸೈಕ್ಲೋಥಾನ್-2018

ಸಾಮಾಜಿಕ ಕಾಳಜಿಯ ಕುರಿತು ಗ್ರಾಮೀಣ ಪ್ರದೇಶದಲ್ಲಿ ಹಮ್ಮಿಕೊಂಡ ಸೈಕ್ಲೋಥಾನ್ ಇತರರಿಗೆ ಮಾದರಿ ಕಾರ್ಯಕ್ರಮ.ಆರೋಗ್ಯ ದೃಷ್ಟಿಯಿಂದಲೂ ಅತ್ಯುತ್ತಮ ಎಂದು ಅದಾನಿ-ಯುಪಿಸಿಎಲ್ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ಹೇಳಿದರು.
ಪಡುಬಿದ್ರಿ ರೋಟರ ಕ್ಲಬ್ ವತಿಯಿಂದ ಭಾನುವಾರ ಕಾಪುವಿನಿಂದ ಹೆಜಮಾಡಿ ತನಕ ನಡೆದ ಸೈಕ್ಲೋಥಾನ್-2018 ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ರೋಟರಿ ಸಂಸ್ಥೆಯು ಪ್ರತಿವರ್ಷ ಸೈಕ್ಲಿಂಗ್ ಹಮ್ಮಿಕೊಂಡಲ್ಲಿ ಯುಪಿಸಿಎಲ್ ವತಿಯಿಂದ ಪ್ರಾಯೋಜಕತ್ವ ವಹಿಸಲಾಗುವುದು ಎಂದವರು ಭರವಸೆ ನೀಡಿದರು.
“ಮಾದಕ ವಸ್ತುಗಳ ವಿರುದ್ಧ ಜನಜಾಗೃತಿ-ರಸ್ತೆ ಸುರಕ್ಷತೆ-ಜಲ ಸಂರಕ್ಷಣೆ” ಕುರಿತು ನಡೆದ ಸೈಕ್ಲೊಥಾನ್ ಕಾರ್ಯಕ್ರಮದ ಸಮಾರೋಪದಲ್ಲಿ ಈ ಬಗ್ಗೆ ಕರಪತ್ರ ಬಿಡುಗಡೆಗೊಳಿಸಿದ ಶಾಸಕ ವಿನಯಕುಮಾರ್ ಸೊರಕೆ ಮಾತನಾಡಿ,ಸಾಮಾಜಿಕ ಪಿಡುಗಳ ನಿವಾರಣೆಗೆ ಸೂಕ್ತವಾದ ಕಾರ್ಯಕ್ರಮ.ನಿರಂತರ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಪಡುಬಿದ್ರಿ ರೋಟರಿ ಕ್ಲಬ್ ಅಭಿನಂದನಾರ್ಹರು ಎಂದರು.
ಇದೇ ವೇಳೆ ಅವರು ರೋಟರಿ ವತಿಯಿಂದ ಪಡುಬಿದ್ರಿ ಪೋಲೀಸ್ ಠಾಣೆಗೆ ನೀಡಲಾದ ಎರಡು ಬ್ಯಾರಿಕೇಡ್‍ಗಳನ್ನು ಪೋಲಿಸರಿಗೆ ಹಸ್ತಾಂತರಿಸಿದರು.
ಚಲನಚಿತ್ರ ನಟ ಅನೂಪ್ ಸಾಗರ್ ಮಾತನಾಡಿ, ಈ ಕಾರ್ಯಕ್ರಮ ನಮ್ಮ ಮನೆಯಿಂದಲೇ ಪ್ರಾರಂಭವಾಗಬೇಕೆಂದರು.
15 ಕಿಮೀ ಕ್ರಮಿಸಿದ ಸೈಕ್ಲೋಥಾನ್‍ಗೆ ತೆರೆದ ಜೀಪ್ ಮೂಲಕ ಸಾಥ್ ನೀಡಿದ ಚಲನಚಿತ್ರ ನಟನಟಿಯರಾದ ರಾಧಿಕಾ ರಾವ್,ಪ್ರಥ್ವಿ ಅಂಬರ್,ಆರಾಧ್ಯ ಶೆಟ್ಟಿ,ಜೆನ್ನಿಫರ್ ಸ್ನೇಹಾ,ರಂಜಿತಾ ಶೇಠ್,ವಿಸ್ಮಯ ವಿನಾಯಕ್,ಶ್ಲಾಘಾ ಸಾಲಿಗ್ರಾಮ ಮಾತನಾಡಿದರು.
ಜೋಸೆಫ್ ಜಿಎಮ್ ರೆಬೆಲ್ಲೋ ಜಲ ಸಂರಕ್ಷಣೆ ಕುರಿತು ಮಾಹಿತಿ ನೀಡಿದರು.
ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ,ಹೆಜಮಾಡಿ ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್,ಉಪಾಧ್ಯಕ್ಷ ಸುಧಾಕರ ಕರ್ಕೇರ,ಪಡುಬಿದ್ರಿ ಗ್ರಾಪಂ ಉಪಾಧ್ಯಕ್ಷ ವೈ.ಸುಕುಮಾರ್,ಉಡುಪಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ,ಜೆಡಿಎಸ್ ಕಾಪು ಕ್ಷೇತ್ರಾಧ್ಯಕ್ಷ ಸುಧಾಕರ ಶೆಟ್ಟಿ ಹೆಜಮಾಡಿ,ಉಡುಪಿ ಸೈಕ್ಲಿಂಗ್ ಕ್ಲಬ್ ಅಧ್ಯಕ್ಷ ಡಾ.ಗುರುರಾಜ್,ಮೂಡಿಗೆರೆ ಕೌಸರ್ ಗ್ರೂಪ್ ಆಫ್ ಕನ್ಸರ್ನ್‍ನ ಮ್ಯಾನೇಜಿಂಗ್ ಡೈರೆಕ್ಟರ್ ಕೆಎಮ್ ಅಬ್ದುಲ್ಲಾ,ಉಡುಪಿ ಜಿಲ್ಲಾ ಹಿಂದು ಯುವ ಸೇನೆ ಅಧ್ಯಕ್ಷ ಮಂಜು ಕೊಳ,ಕಾರ್ಯಕ್ರಮ ನಿರ್ದೇಶಕರುಗಳಾದ ವಿಶ್ವಾಸ್ ವಿ.ಅಮೀನ್, ಬಿಎಸ್ ಆಚಾರ್ಯ,ಸಂತೋಷ್ ಪಡುಬಿದ್ರಿ ಮತ್ತು ಇಸ್ಮಾಯಿಲ್ ಪಲಿಮಾರ್,ರೋಟರಿ ಝೋನಲ್ ಲೆಫ್ಟಿನೆಂಟ್ ಕೃಷ್ಣ ಬಂಗೇರ,ಕಾರ್ಯದರ್ಶಿ ಸಂದೀಪ್ ಪಲಿಮಾರ್ ವೇದಿಕೆಯಲ್ಲಿದ್ದರು.
ರೋಟರಿ ಅಧ್ಯಕ್ಷ ರಮೀಝ್ ಹುಸೈನ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿ ಪ್ರಸ್ತಾವಿಸಿದರು.ಹುಸೈನ್ ಕಾಟಿಪಳ್ಳ ಕಾರ್ಯಕ್ರಮ ನಿರ್ವಹಿಸಿದರು.ಸುಧಾಕರ್ ಕೆ.ವಂದಿಸಿದರು.
ಉದ್ಘಾಟನೆ: ಮುಂಜಾನೆ ಕಾಪುವಿನ ವಿದ್ಯಾನಿಕೇತನ್ ಶಾಲಾ ಆವರಣದಲ್ಲಿ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಸೈಕ್ಲೋಥನ್-2018ಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ಕಾರ್ಕಳ ಎಎಸ್‍ಪಿ ಹೃಷಿಕೇಶ್ ಸೋನಾವಾಣೆ,ರೋಟರಿ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ಹರಿಪ್ರಕಾಶ್ ಶೆಟ್ಟಿ,ಕಾಪು ಪುರಸಭೆ ಅಧ್ಯಕ್ಷೆ ಸೌಮ್ಯಾ ಸಂಜೀವ,ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್,ಕಾಪು ವಿದ್ಯಾನಿಕೇತನ್ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಕೆಪಿ ಆಚಾರ್ಯ,ಪ್ರೈಮ್ ಟಿವಿ ಮುಖ್ಯಸ್ಥ ದಿನೇಶ್ ಕಿಣಿ,ಉದ್ಯಮಿ ವೈಬಿಸಿ ಬಾವಾ ಮೂಳೂರು,ಪಡುಬಿದ್ರಿ ಸಿಎ ಬ್ಯಾಂಕ್ ಅಧ್ಯಕ್ಷ ವೈ.ಸುಧೀರ್ ಕುಮಾರ್,ಉಚ್ಚಿಲ ರೋಟರಿ ಅಧ್ಯಕ್ಷ ಹರೀಶ್ ಶೆಟ್ಟಿ ಪೊಲ್ಯ ಉಪಸ್ಥಿತರಿದ್ದರು.
ಉಡುಪಿ ಸೈಕ್ಲಿಂಗ್ ಕ್ಲಬ್ ಮತ್ತು ಮೂಲ್ಕಿ ಮಂತ್ರ ಸರ್ಫ್ ಕ್ಲಬ್ ಸದಸ್ಯರು,ಮೂಳೂರು ಅಲ್ ಇಹ್ಸಾನ್ ಶಾಲೆ,ಕಾಪು ವಿದ್ಯಾನಿಕೇತನ್ ಶಾಲೆ,ಉಚ್ಚಿಲ ಮಹಾಲಕ್ಷ್ಮೀ ಶಾಲೆ,ಕಾಪು ಮಹಾದೇವಿ ಶಾಲೆ,ಉಚ್ಚಿಲ ಸರಸ್ವತಿ ಮಂದಿರ ಶಾಲೆ, ಮೂಳೂರು ಸಿಎಸ್‍ಐ ಶಾಲೆ,ಹೆಜಮಾಡಿ ಅಲ್ ಅಝ್‍ಹರ್ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಪಡುಬಿದ್ರಿ ರೋಟರಿ ಕ್ಲಬ್ ಸದಸ್ಯರು ಹಾಗೂ ಸಾರ್ವಜನಿಕರು ಸೇರಿ 350ಕ್ಕೂ ಅಧಿಕ ಸೈಕಲ್‍ಪಟುಗಳು ಕಾಪುವಿನಿಂದ ಹೆಜಮಾಡಿ ತನಕ ಸುಮಾರ್ 15 ಕಿಮೀ ಸೈಕ್ಲೋಥಾನ್‍ನಲ್ಲಿ ಭಾಗವಹಿಸಿದರು.
ಕಾರ್ಕಳ ಎಎಸ್‍ಪಿ ಹೃಷಿಕೇಶ್ ಸೋನಾವಾಣೆ ಕಾಪುವಿನಿಂದ ಉಚ್ಚಿಲ ತನಕ ಸೈಕ್ಲಿಂಗ್ ನಡೆಸಿ ಸೈಕಲ್ ಸವಾರರಿಗೆ ಸ್ಪೂರ್ತಿ ತುಂಬಿ ಗಮನ ಸೆಳೆದರು.