Our ancestors’ beautiful culture should be passed on to our next generation- Suresh Shetty Gurme

Padubidri, July 26th, 2018: “Our ancestors have built their lives with rich culture and we have the responsibility to pass it on to our next generation,” said Suresh Shetty Gurme, the vice president of Udupi District  BJP

He was addressing the gathering after inaugurating cluster-level Pratibha Karanji-2018/19 held at Hejamadi Kodi Higher Primay school, jointly organized by Department of Public Instructions, BEO office, Udupi Resoources centre and  Hejamadi Kodi school.

Full news in Kannada …

ಪೂರ್ವಜರ ಸುಂದರ ಬದುಕನ್ನು ಮುಂದಿನ ಜನಾಂಗಕ್ಕೆ ನೀಡಬೇಕು-ಸುರೇಶ್ ಶೆಟ್ಟಿ ಗುರ್ಮೆ

ಪೂರ್ವಜರು ನಮ್ಮ ಬದುಕನ್ನು ಸುಸಂಸ್ಕøತವಾಗಿ ಕಟ್ಟಿಕೊಟ್ಟಿದ್ದಾರೆ.ಅದನ್ನು ಮುಂದಿನ ಜನಾಂಗಕ್ಕೆ ಕೊಂಡುಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ ಹೇಳಿದರು. ಗುರುವಾರ ಹೆಜಮಾಡಿ ಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ,ಉಡುಪಿ ಸಂಪನ್ಮೂಲ ಕೇಂದ್ರ, ಸಮೂಹ ಸಂಪನ್ಮೂಲ ಕೇಂದ್ರ ಮತ್ತು ಹೆಜಮಾಡಿಕೋಡಿ ಶಾಲಾ ಸಂಯುಕ್ತ ಆಶ್ರಯದಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ-2018/19ನ್ನು ಉದ್ಘಾಟಿಸಿ ಗುರ್ಮೆ ಮಾತಮಾಡಿದರು.

ಒಂದು ಹಗಲು ಒಂದು ರಾತ್ರಿ ನಮ್ಮ ಬದುಕು ರೂಪುಗೊಳ್ಳುವುದಿಲ್ಲ.ನಿರಂತರ ಸಾಧನೆ,ಛಲದಿಂದ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿದೆ ಎಂದ ಅವರು,ಉತ್ತರವಿಲ್ಲದ ಪ್ರಶ್ನೆಗಳಲ್ಲಿಯೇ ನಮ್ಮ ಬದುಕು ಕಳೆದು ಹೋಗಬಾರದು ಎಂದರು.

ಇದೇ ವೇಳೆ ಗುರು ಪೌರ್ಣಿಮೆ ಮತ್ತು ಕಾರ್ಗಿಲ್ ವಿಜಯ ದಿವಸದ ಶುಭಾಶಯ ಸಲ್ಲಿಸಿದ ಅವರು ನಮ್ಮ ಬದುಕಿನ ನಾಳೆಗಾಗಿ ಅವರ ಇಂದಿನ ಬದುಕನ್ನು ಮೀಸಲಿಟ್ಟ ಸೈನಿಕರಿಗೆ ನಮನ ಎಂದರು.
ಹೆಜಮಾಡಿ ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಉಮೇಶ್ ಪುತ್ರನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಜಿಪಂ ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿಯ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ ಮುಖ್ಯ ಅತಿಥಿಯಾಗಿ ಮಾತನಾಡಿ,ಗ್ರಾಮೀಣ ಪ್ರತಿಭೆಗಳ ಅನಾವರಣಕ್ಕೆ ಪೂರಕವಾಗಿ ಸರಕಾರ ಹಮ್ಮಿಕೊಂಡ ಪ್ರತಿಭಾ ಕಾರಂಜಿ ಕಾರ್ಯಕ್ರಮ ಔಚಿತ್ಯಪೂರ್ಣವಾದುದು ಎಂದರು.
ಹೆಜಮಾಡಿ ಗ್ರಾಪಂ ಉಪಾಧ್ಯಕ್ಷ ಸುಧಾಕರ ಕರ್ಕೇರ,ಸದಸ್ಯರಾದ ಪ್ರಣೇಶ್ ಹೆಜಮಾಡಿ ಮತ್ತು ಸೆರಿನಾ ಅಲ್ಮೆಡಾ,ಪಿಡಿಒ ಮಮತಾ ಶೆಟ್ಟಿ,ಮಾನಂಪಾಡಿ ಮೊಗವೀರ ಸಭಾ ಅಧ್ಯಕ್ಷ ಭಾಸ್ಕರ ಪುತ್ರನ್,ಉದ್ಯಮಿ ದಯಾನಂದ ಹೆಜ್ಮಾಡಿ,ಗಾಂಧಿನಗರ ಯುವಕ ವೃಂದದ ಅಧ್ಯಕ್ಷ ರವೀಂದ್ರ ಕೋಟ್ಯಾನ್,ಹೆಜಮಾಡಿ ಬಿಲ್ಲವರ ಸಂಘದ ಅಧ್ಯಕ್ಷ ಲೋಕೇಶ್ ಅಮೀನ್,ಶಿಕ್ಷಣ ಸಂಯೋಜಕ ಶಂಕರ್,ಸಮೂಹ ಸಂಪನ್ಮೂಲ ಕೇಂದ್ರದ ಕವಿತಾ ಮತ್ತು ವಸಂತಿ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಮಂಗಳಾ ಶೆಟ್ಟಿ,ಹೆಜಮಾಡಿ ಏಳೂರು ಮೊಗವೀರ ಸಭಾ ಕಾರ್ಯದರ್ಶಿ ದಿವಾಕರ ಹೆಜ್ಮಾಡಿ,ವಸಂತಿ ಜಯಶೀಲ ಬಂಗೇರ,ಲಲಿತಾ ಸದಾನಂದ ಮುಖ್ಯ ಅತಿಥಿಗಳಾಗಿದ್ದರು.

ಶಾಲಾ ಮುಖ್ಯ ಶಿಕ್ಷಕಿ ರಾಜೇಶ್ವರೀ ನಿತ್ಯಾನಂದ ಸ್ವಾಗತಿಸಿದರು.ಗೋವರ್ಧನ ಕೋಟ್ಯಾನ್ ಕಾರ್ಯಕ್ರಮ ನಿರ್ವಹಿಸಿದರು.ವಾಮನ ಕೋಟ್ಯಾನ್ ನಡಿಕುದ್ರು ವಂದಿಸಿದರು.