ನಿಧನ: ಸಂಜೀವ ವಿ.ಕಾಂಚನ್

ಪಡುಬಿದ್ರಿ: ಪೊಲಿಪುವಿನ ಕಾಂಚನ್ ಮೂಲಸ್ಥಾನದ ಮೂಲಕರ್ತೃ, ಹೆಜಮಾಡಿ ಹಿರಿಯ ಮೀನುಗಾರ ಮುಖಂಡ ಸಂಜೀವ ವಿ.ಕಾಂಚನ್(85) ಅಲ್ಪ ಕಾಲದ ಅಸೌಖ್ಯದಿಂದ ಹೆಜಮಾಡಿಯ ಸ್ವಗೃಹ ಶ್ರೀ ದೀಪಾದಲ್ಲಿ ಶನಿವಾರ ನಿಧನರಾದರು.
ಹೆಜಮಾಡಿಯ ಗುಂಡಿ ಮೊಗವೀರ ಸಭಾದ ಸಕ್ರಿಯ ಸದಸ್ಯರಾಗಿದ್ದ ಅವರಿಗೆ ಪುತ್ರ ಮೊಗವೀರ ಹಿತಸಾಧನಾ ವೇದಿಕೆಯ ಮಾಜಿ ಕಾರ್ಯದರ್ಶಿ ದಿವಾಕರ ಹೆಜ್ಮಾಡಿ ಸಹಿತ ಇಬ್ಬರು ಪುತ್ರಿಯರಿದ್ದಾರೆ.