No toll for local vehicles at Hejmady toll gate – Dr. Jayamala

Padubidri, Sept 7th, 2018:  While arriving at Hejamady toll plaza to welcome Chief Minister H.D. Kumaraswamy, Udupi District minister-in-charge Dr. Jayamala has said that toll collection for local vehicles at Hejmady toll gate would not be allowed.

Read more in Kannada ..

ಹೆಜಮಾಡಿ ಟೋಲ್‍ನಲ್ಲಿ ಸ್ಥಳೀಯ ವಾಹನಗಳಿಂದ ಸುಂಕ ವಸೂಲಿಗೆ ಅವಕಾಶವಿಲ್ಲ-ಡಾ.ಜಯಮಾಲಾ

ಹೆಜಮಾಡಿಯಲ್ಲಿ ಕಾರ್ಯಾಚರಿಸುತ್ತಿರುವ ನವಯುಗ್ ಟೋಲ್ ಪ್ಲಾಝಾದಲ್ಲಿ ಸ್ಥಳೀಯ ವಾಹನಗಳಿಂದ ಯಾವುದೇ ಕಾರಣಕ್ಕೂ ಟೋಲ್ ಸಂಗ್ರಹಕ್ಕೆ ಅವಕಾಶ ಇಲ್ಲ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಹೇಳಿದ್ದಾರೆ.ಹೆಜಮಾಡಿ ರಾಹೆ 66 ರ ಟೋಲ್ ಪ್ಲಾಝಾ ಬಳಿ ಶುಕ್ರವಾರ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿಯವರನ್ನು ಸ್ವಾಗತಿಸಲು ಆಗಮಿಸಿದ್ದ ಸಂದರ್ಭ ಮಾಧ್ಯಮದವರ ಪ್ರಶ್ನೆಗೆ ಅವರು ಉತ್ತರಿಸಿದರು.ಒಳ ರಸ್ತೆಗೆ ಟೋಲ್ ಸಂಗ್ರಹಕ್ಕೆ ಅವಕಾಶವಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಈ ಭಾಗದಲ್ಲಿ ಕೆಲವೊಂದು ಘನ ವಾಹನಗಳು ಮುಖ್ಯರಸ್ತೆಯಲ್ಲಿ ಸಾಗದೆ ಟೋಲ್ ವಂಚಿಸಿ ಒಳ ರಸ್ತೆಯಲ್ಲಿ ಸಾಗುತ್ತಿದ್ದವು. ಅದನ್ನು ನಿಯಂತ್ರಿಸಲು ಒಳ ರಸ್ತೆಗೆ ಟೋಲ್ ಅಳವಡಿಸಲಾಗಿದೆ. ಇದರಿಂದ ಸ್ಥಳೀಯರಿಗೆ ಯಾವುದೇ ತೊಂದರೆಯಿಲ್ಲ. ಸ್ಥಳೀಯ ವಾಹನಗಳಿಂದ ಟೋಲ್ ಸಂಗ್ರಹಕ್ಕೆ ಅವಕಾಶ ನೀಡುವುದಿಲ್ಲ. ಅವರೊಂದಿಗೆ ನಾನಿದ್ದೇನೆ ಎಂದು ಭರವಸೆ ನೀಡಿದರು.

ಗೂಡಂಗಡಿಗಳಿಗೆ ಬದಲಿ ವ್ಯವಸ್ಥೆಗೆ ಸೂಚನೆ:ಇದೇ ಸಂದರ್ಭದಲ್ಲಿ ಟೋಲ್‍ಗೇಟ್‍ನ ಬಳಿ ಗೂಡಂಗಡಿಯಿಟ್ಟು ವ್ಯಾಪಾರ ನಡೆಸುತ್ತಿರುವ ಮಹಿಳೆಯರು ಗೂಡಂಗಡಿ ತೆರವು ಮಾಡದಂತೆ ಸಚಿವರಿಗೆ ಮನವಿ ಸಲ್ಲಿಸಿ ತಮ್ಮ ಅಳಲನ್ನು ತೋಡಿಕೊಂಡರು. ಅವರನ್ನು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸಮ್ಮುಖ ಕರೆದು, ವ್ಯಾಪಾರ ಮಾಡಿ ಕಷ್ಟದಿಂದ ಜೀವನ ಸಾಗಿಸುವ ಇವರಿಗೆ ಬದಲಿ ವ್ಯವಸ್ಥೆ ಕಲ್ಪಿಸಿ. ಯಾವುದೇ ರೀತಿ ತೊಂದರೆ ಮಾಡದಿರಿ ಎಂದು ಸೂಚನೆ ನೀಡಿದರು.
ಹೆಜಮಾಡಿ ಬಂದರು ಯೋಜನೆ ಜಾರಿ ಬಗ್ಗೆ ಕೇಳಲಾದ ಪ್ರಶ್ನೆಗೆ ಈ ಬಗ್ಗೆ ಸ್ಪಷ್ಟ ಮಾಹಿತಿ ತನ್ನಲ್ಲಿಲ್ಲ ಎಂದು ಹೇಳಿ ಕೂಲಂಕುಷ ವಿಚಾರಿಸುವುದಾಗಿ ಹೇಳಿದರು.