New showroom of Abharana inaugurated in Padubidri

Padubidi, August 17th, 2018:  New showroom of Udupi’s Abharana Jewellery and Abharana Motors was inaugurated at a new building near Kancinadka bus stand in Padubidri.  Both units were inaugurated by  Radha M. Kamath and Madhukar S. Kamagth  by lighting the lamp.

Speaking on the occasion, the company’s management head Mr..Dayanand Kamath said the company was established in the year 1935 by Late Sadanand Kamath and has been famous for pure and good quality gold in coastal Karnataka and Malnad regions.

Read more in Kannada …

ಪಡುಬಿದ್ರಿಯಲ್ಲಿ “ಆಭರಣ” ಚಿನ್ನಾಭರಣ ಮಳಿಗೆ ಉದ್ಘಾಟನೆ
ಆಭರಣ ಮೋಟಾರ್ಸ್‍ನ ಮಾರುತಿ ಸುಜುಕಿ ಅರೆನಾ ಕಾರ್ಯಾರಂಭ

ಉಡುಪಿಯ ಪ್ರಸಿದ್ಧ ಚಿನ್ನಾಭರಣ ಸಂಸ್ಥೆ “ಆಭರಣ ಜ್ಯುವೆಲ್ಲರ್ಸ್” ಪಡುಬಿದ್ರಿಯಲ್ಲಿ ತನ್ನ ನೂತನ ಮಳಿಗೆಯನ್ನು ಶುಕ್ರವಾರ ಶುಭಾರಂಭಗೊಂಡಿತು.

ಪಡುಬಿದ್ರಿ-ಕಾರ್ಕಳ ಹೆದ್ದಾರಿಯ ಕಂಚಿನಡ್ಕ ಬಸ್ಸು ನಿಲ್ದಾಣ ಸಮೀಪದ ನೂತನ ಸಂಕೀರ್ಣದಲ್ಲಿ ಆಭರಣ ಜ್ಯುವೆಲ್ಲರ್ಸ್ ಹಾಗೂ ಅದರ ಸಹೋದರ ಸಂಸ್ಥೆ ಆಭರಣ ಮೋಟಾರ್ಸ್‍ನ “ಮಾರುತಿ ಸುಜುಕಿ ಅರೆನಾ” ಗ್ರಾಮೀಣ ಮಾರಾಟ ಮತ್ತು ಸೇವಾ ಶಾಖೆಯನ್ನೂ ಕಾರ್ಯಾರಂಭಗೊಳಿಸಲಾಯಿತು.


ಎರಡೂ ಸಂಸ್ಥೆಗಳನ್ನು ರಾಧಾ ಎಮ್.ಕಾಮತ್ ಮತ್ತು ಮಧುಕರ್ ಎಸ್.ಕಾಮತ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.

ಈ ಸಂದರ್ಭ ಮಾತನಾಡಿದ ಸಂಸ್ಥೆಯ ಆಡಳಿತ ವರ್ಗದ ಪ್ರಮುಖರಾದ ದಯಾನಂದ ಕಾಮತ್,1935ರಲ್ಲಿ ದಿ.ಬುರ್ಡೆ ಸದಾನಂದ ಕಾಮತ್‍ರಿಂದ ಸ್ಥಾಪನೆಗೊಂಡ ಆಭರಣ ಸಂಸ್ಥೆಯು ಪರಿಶುದ್ಧ ಮತ್ತು ಉತ್ತಮ ಗುಣಮಟ್ಟದ ಚಿನ್ನಾಭರಣಗಳಿಗೆ ಕರಾವಳಿ ಕರ್ನಾಟಕ ಹಾಗೂ ಮಲೆನಾಡಿನಲ್ಲಿ ಪ್ರಸಿದ್ಧಿ ಪಡೆದಿದೆ.ಉತ್ಕøಷ್ಟ ಕರಕುಶಲ ಕೆಲಸ,ಶ್ರೇಷ್ಠ ಮಾದರಿಯ ವಿನ್ಯಾಸಗಳ ಲಭ್ಯತೆ,ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದಿರುವುದು ಮತ್ತು ಉನ್ನತ ಮಟ್ಟದ ಗ್ರಾಹಕ ಸೇವೆ ಎಂದಿನಿಂದಲೂ ಆಭರಣದ ಹೆಗ್ಗಳಿಕೆಯಾಗಿದೆ.ಗ್ರಾಮೀಣ ಭಾಗಕ್ಕೂ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಇದೀಗ ತನ್ನ ಹತ್ತನೇ ಶಾಖೆಯನ್ನು ಪಡುಬಿದ್ರಿಯಲ್ಲಿ ಆರಂಭಿಸಲಾಗಿದೆ.ಜತೆಗೆ ಮಾರುತಿ ಸುಜುಕಿ ಅರೆನಾ ಗ್ರಾಮೀಣ ಮಾರಾಟ ಮತ್ತು ಸೇವಾ ಶಾಖೆಯನ್ನೂ ಆರಂಭಿಸಲಾಗಿದ್ದು,ಸ್ಥಳೀಯರ ಸಹಕಾರದ ಭರವಸೆ ಇದೆ ಎಂದು ಹೇಳಿದರು.

ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‍ಚಂದ್ರ ಜೆ.ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿ,ಪಡುಬಿದ್ರಿಗೆ ಅಗತ್ಯವಾಗಿ ಇಂತಹ ಸೇವಾ ಸಂಸ್ಥೆ ಬಂದಿದೆ.ಗ್ರಾಹಕರು ಹಿಂದೆ ದೂರದ ಉಡುಪಿಗೆ ಅಲೆಯಬೇಕಿತ್ತು.ಇದೀಗ ಕಾಲಬುಡದಲ್ಲೇ ಉತ್ಕøಷ್ಠ ಸೇವೆಯ ಆಭರಣ ಮಳಿಗೆ ಬಂದಿರುವುದು ಶ್ಲಾಘನೀಯ.ಸಂಸ್ಥೆಗೆ ಗ್ರಾಹಕ ಸೇವೆಯಲ್ಲಿ ಅತ್ಯುತ್ತಮ ಹೆಸರಿದೆ ಎಂದರು.
ಸಂಸ್ಥೆಯ ಲೆಕ್ಕಪತ್ರ ಮುಖ್ಯಸ್ಥರಾದ ವಿನೋದ್ ಕಾಮತ್ ಮಾತನಾಡಿ,ರಾಜ್ಯದ ಸುಪ್ರಸಿದ್ದ ಚಿನ್ನಾಭರಣ ಮಳಿಗೆ ಆಭರಣ ಗ್ರಾಮೀಣ ಪಡುಬಿದ್ರಿಯಲ್ಲಿ ಗ್ರಾಹಕರ ಅನುಕೂಲತೆಗಾಗಿ ಪ್ರಾರಂಭಿಸಿದ್ದು,ಮುಂದೆ ಕುಮುಟಾ,ಬೆಳ್ತಂಗಡಿ,ಸಾಗರ ಮತ್ತು ಗೋವಾದ ಪಣಜಿಯಲ್ಲಿ ಶಾಖೆಗಳನ್ನು ಆರಂಭಿಸಲಿದೆ.ಪಡುಬಿದ್ರಿ ಶಾಖೆಯಲ್ಲಿ ಗ್ರಾಹಕರ ಅನುಕೂಲತೆಗಾಗಿ ಒಂದು ತಿಂಗಳ(ಸೆ.17ರ ವರೆಗೆ) ಕ್ಯಾಶ್ ಬ್ಯಾಕ್ ಕೊಡುಗೆ ಜಾರಿಗೊಳಿಸಲಾಗಿದ್ದು,ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ವಿನಂತಿಸಿದರು.

ತನ್ನ ಎಲ್ಲಾ ಮಳಿಗೆಗಳಲ್ಲಿ ಚಿನ್ನ,ಬೆಳ್ಳಿ,ವಜ್ರ,ಪ್ಲಾಟಿನಮ್ ಮತ್ತು ಬೆಲೆಬಾಳುವ ಮುತ್ತು,ಹರಳುಗಳ ಪಾರಂಪರಿಕ ಹಾಗೂ ಆಧುನಿಕ ವಿನ್ಯಾಸಗಳ ವಿಶಾಲ ಶ್ರೇಣಿಯ ಸಂಗ್ರಹವನ್ನು ಹೊಂದಿದೆ.ಬೆಳ್ಳಿಯ ಆಭರಣ ಹಾಗೂ ಸಾಮಾಗ್ರಿಗಳಿಗೆ ಇರುವ ಬೇಡಿಕೆ ಮತ್ತು ಮನ್ನಣೆಯನ್ನು ಪರಿಗಣಿಸಿ ಸಂಸ್ಥೆಯು ಬೆಳ್ಳಿಯ ಪೂಜಾ ಸಾಮಾಗ್ರಿ,ಬೆಳ್ಳಿಯ ಆಭರಣಗಳು,ಬೆಳ್ಳಿಯ ಕಲಾತ್ಮಕ ಅಲಂಕಾರ ವಸ್ತುಗಳು,ಬೆಳ್ಳಿಯ ಉಡುಗೊರೆಗಳ ಸಮಗ್ರ ಸಂಗ್ರಹವನ್ನೂ ಹೊಂದಿದೆ.

ಸಂಸ್ಥೆಯ ಆಡಳಿತ ವರ್ಗದ ಪ್ರಮುಖರಾದ ಸುಭಾಸ್ ಎಮ್.ಕಾಮತ್,ಮಹೇಶ್ ಎಮ್.ಕಾಮತ್,ದಯಾನಂದ ಕಾಮತ್,ಪಡುಬಿದ್ರಿ ದುರ್ಗಾ ಜ್ಯುವೆಲ್ಲರ್ಸ್ ಮಾಲೀಕರಾದ ರಮೇಶ್ ಆಚಾರ್ಯ,ಸಂಪತ್ ಆಚಾರ್ಯ ಮತ್ತು ಸ್ಥಳೀಯರಾದ ಸದಾಶಿವ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ವಿನೋದ್ ಕಾಮತ್ ವಂದಿಸಿದರು.