ಮಾ.16: ನೂತನ ಜೇಸಿಐ ಪುನರೂರು ಉದ್ಘಾಟನೆ

ಮೂಲ್ಕಿ: ಜೇಸಿಐ ಮೂಲ್ಕಿ ಶಾಂಭವಿ ಪ್ರಾಯೋಜಿಸಿದ ನೂತನ ಘಟಕ ಜೇಸಿಐ ಪುನರೂರು ಮಾರ್ಚ್ 16 ಶನಿವಾರ ಬೆಳಿಗ್ಗೆ 9 ಗಂಟೆಗೆ ಉದ್ಘಾಟನೆಗೊಳ್ಳಲಿದೆ.

ಜೇಸಿಐ ಪುನರೂರು ನೂತನ ಅಧ್ಯಕ್ಷ ದೇವಪ್ರಸಾದ್ ಪುನರೂರು ನೇತೃತ್ವದ ಜೇಸಿಐ ಪುನರೂರು ಘಟಕವನ್ನು ಜೇಸಿಐ ಇಂಡಿಯಾದ ಉಪಾಧ್ಯಕ್ಷ ಅನೀಶ್ ಸಿ.ಮ್ಯಾಥ್ಯೂ ಉದ್ಘಾಟಿಸಲಿದ್ದಾರೆ.

ಮೂಲ್ಕಿಯ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ನಡೆಯುವ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಕಸಾಪ ಪೂರ್ವಾಧ್ಯಕ್ಷ ಹರಿಕೃಷ್ಣ ಪುನರೂರು,ಜೇಸಿಐ ವಲಯಾಧ್ಯಕ್ಷ ಅಶೋಕ್ ಚೂಂತಾರು,ವಲಯ ಉಪಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ,ಅಭಿವೃದ್ಧಿ ಮತ್ತು ಬೆಳವಣಿಗೆಯ ವಲಯ ನಿರ್ದೇಶಕಿ ಸೌಮ್ಯಾ ರಾಕೇಶ್,ಜೇಸಿಐ ಮೂಲ್ಕಿ ಶಾಂಭವಿಯ ಅಧ್ಯಕ್ಷ ನವೀನ್ ಶೆಟ್ಟಿ ಮುಖ್ಯ ಅತಿಥಿಗಳಾಗಿರುವರು ಎಂದು ಕಾರ್ಯಕ್ರಮ ನಿರ್ದೇಶಕರಾದ ಸರ್ವೋತ್ತಮ ಅಂಚನ್ ಮತ್ತು ಅಶೋಕ್‍ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಮಾರ್ಚ್ 23-24:ಯೂತ್ ಫೆಸ್ಟ್ ಅಂಗವಾಗಿ ಮಯೂರಿ ಯೂತ್ ಕಪ್ ಕ್ರಿಕೆಟ್ ಪಂದ್ಯಾಟ
ಮೂಲ್ಕಿ: ಸಾಮಾಜಿಕ,ಧಾರ್ಮಿಕ,ಶೈಕ್ಷಣಿಕ ಕ್ಷೇತ್ರಗಳಲ್ಲಿ ನಿರಂತರ ಸಾಮಾಜಿಕ ಸೇವೆ ಮಾಡುತ್ತಿರುವ ಮೂಲ್ಕಿಯ ಮಯೂರಿ ಫೌಂಡೇಶನ್ ಆಶ್ರಯದಲ್ಲಿ ನಡೆಯುವ ಯೂತ್ ಫೆಸ್ಟ್ ಅಂಗವಾಗಿ ಮಾರ್ಚ್ 23 ಮತ್ತು 24ರಂದು ಮೂಲ್ಕಿಯ ವಿಜಯಾ ಕಾಲೇಜು ಕ್ರೀಡಾಂಗಣದಲ್ಲಿ ಮಯೂರಿ ಯೂತ್ ಕಪ್-2019 ಕ್ರಿಕೆಟ್ ಪಂದ್ಯಾಟ ಹಮ್ಮಿಕೊಳ್ಳಲಾಗಿದೆ.
ಮಾ.23 ಶನಿವಾರ ಅವಿಭಜಿತ ದಕ ಜಿಲ್ಲೆಯ ಅಗ್ರ ಆಟಗಾರನ್ನೊಳಗೊಂಡ ತಂಡಗಳು ಪಂದ್ಯಾಟ ಆಡಲಿದ್ದು,ವಿಜೇತ ತಂಡವು ಮಾ.24ರಂದು ನಡೆಯುವ ಮೂಲ್ಕಿ ವಲಯ ಮಟ್ಟದ ಪಂದ್ಯಾಟದ ವಿಜೇತ ತಂಡದೊಂದಿಗೆ ಮಯೂರಿ ಯೂತ್