ಗೃಹ ರಕ್ಷಕ ದಳದ ವತಿಯಿಂದ ಪುಲ್ವಾಮಾ ಹುತಾತ್ಮರಿಗೆ ಶ್ರದ್ಧಾಂಜಲಿ

ಮೂಲ್ಕಿ: ಗಡಿಯಲ್ಲಿ ದೇಶ ಕಾಯುವ ಯೋಧರು ಗುಡಿಯಲ್ಲಿ ನಮ್ಮನ್ನು ಕಾಯುವ ದೇವರಿದ್ದಂತೆ. ಈ ಯೋಧರ ಬಗ್ಗೆ ನಾವು ಯಾವತ್ತೂ ಋಣಿಗಳಾಗಿದ್ದೇವೆ ಎಂದು ದ.ಕ ಜಿಲ್ಲಾ ಗೃಹ ರಕ್ಷಕ ದಳ ಸಮಾದೇಷ್ಠರಾದ ಡಾ.ಮುರಳೀ ಮೋಹನ ಚೂಂತಾರು ಹೇಳಿದರು.

ಕಾಶ್ಮೀರದಲ್ಲಿ ಮಡಿದ ಸೈನಿಕರ ಗೌರವಾರ್ಥ ಮೂಲ್ಕಿ ಗಾಂಧೀ ಮೈದಾನದಲ್ಲಿ ಗೃಹ ರಕ್ಷಕ ದಳದ ವತಿಯಿಂದ ಶುಕ್ರವಾರ ಮುಂಜಾನೆ ನಡೆದ ಶ್ರದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಭಯೋತ್ಪಾದನಾ ಮನಸ್ಸಿನ ವ್ಯಕ್ತಿಗಳು ದೇಶದೆಲ್ಲಡೆ ತುಂಬಿರುವ ಕಾರಣ ಗೃಹ ರಕ್ಷಕ ದಳದ ಸದಸ್ಯರು ದೇಶದ ಭದ್ರತೆಯ ಬಗ್ಗೆ ಕಾಳಜಿ ವಹಿಸಬೇಕು.ಅನುಮಾನಾಸ್ಪದ ವ್ಯಕ್ತಿಗಳು ಗಮನಕ್ಕೆ ಬಂದಾಗ ಹಿರಿಯ ಅಧಿಕಾರಿಗಳಿಗೆ ತಕ್ಷಣ ತಿಳಿಸುವ ಮೂಲಕ ದೇಶಸೇವಾ ಕೈಂಕರ್ಯಕ್ಕೆ ತಮ್ಮ ಅಳಿಲ ಸೇವೆ ಸಲ್ಲಿಸಬೇಕು ಎಂದರು.
ಈ ಸಂದರ್ಭ ಮೊಂಬತ್ತಿ ಉರಿಸಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು
ಮೂಲ್ಕಿ ಘಟಕದ ಪ್ರಭಾರ ಅಧಿಕಾರಿ ಲೋಕೇಶ್ ಸ್ವಾಗತಿಸಿದರು.ಹಿರಿಯ ಸದಸ್ಯ ವಲೇರಿಯನ್ ವಂದಿಸಿದರು.