Mithuna Kodattur elected as the president of Mulki Zone Journalists group

Padubidri, Dec.17th, 2017:  Young journalist and columnist Mithuna Kodattur has been elected as the president of Mulki Zone Journalists group.  With Mulki as its headquarters, the group covers areas of Suratkal, Kateel, Kinnigoli, Padubidri, Belman and Kaup.

 

Full news in Kannada …

ಮೂಲ್ಕಿ ವಲಯ ಪತ್ರಕರ್ತರ ಸಮೂಹದ ಅಧ್ಯಕ್ಷರಾಗಿ ಮಿಥುನ ಕೊಡೆತ್ತೂರು ಆಯ್ಕೆ

ಮೂಲ್ಕಿ ಕೇಂದ್ರವಾಗಿದ್ದು ಸುರತ್ಕಲ್,ಕಟೀಲು ,ಕಿನ್ನಿಗೋಳಿ,ಪಡುಬಿದ್ರಿ, ಬೆಳ್ಮಣ್ಣು ಹಾಗೂ ಕಾಪು ವ್ಯಾಪ್ತಿಯ ಪತ್ರಕರ್ತರ ಸಂಘಟನೆಯಾಗಿರುವ ಮೂಲ್ಕಿ ವಲಯ ಪತ್ರಕರ್ತರ ಸಮೂಹದ ಅಧ್ಯಕ್ಷರಾಗಿ ಯುವ ಪತ್ರಕರ್ತ, ಅಂಕಣ ಬರಹಗಾರ ಮಿಥುನ ಕೊಡೆತ್ತೂರುಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ನಿಶಾಂತ್ ಕಿಲೆಂಜೂರು, ಉಪಾಧ್ಯಕ್ಷರುಗಳಾಗಿ ವಿಜಯ ಆಚಾರ್ಯ ಉಚ್ಚಿಲ,ವಾಮನ ಕೋಟ್ಯಾನ್ ಕೊಲ್ಲೂರು, ಪುನೀತಕೃಷ್ಣ ಮೂಲ್ಕಿ, ಹರಿಪ್ರಸಾದ್ ನಂದಳಿಕೆ ಆಯ್ಕೆಯಾಗಿದ್ದಾರೆ.

ಪೂರ್ವಾಧ್ಯಕ್ಷರಾದ ಸರ್ವೋತ್ತಮ ಅಂಚನ್,ಹರೀಶ್ ಕುಮಾರ್ ಹೆಜ್ಮಾಡಿ,ರಘುನಾಥ ಕಾಮತ್ ಕೆಂಚನಕೆರೆ,ಶರತ್ ಶೆಟ್ಟಿ ಕಿನ್ನಿಗೋಳಿ,ಭಾಗ್ಯವಾನ್ ಸನಿಲ್ ಮೂಲ್ಕಿ, ಲೋಕೇಶ್ ಸುರತ್ಕಲ್, ರಾಮಚಂದ್ರ ಆಚಾರ್ಯ ಪಡುಬಿದ್ರಿ ಇವರೆಲ್ಲರನ್ನು ಗೌರವ ಸಲಹೆದಾರರನ್ನಾಗಿ ಆಯ್ಕೆಮಾಡಲಾಯಿತು.