ಪಡುಬಿದ್ರಿ: ಕಿಡಿಗೇಡಿಗಳಿಂದ ವಾಹನಗಳಿಗೆ ಹಾನಿ

ಪಡುಬಿದ್ರಿ: ಇಲ್ಲಿನ ಮುಖ್ಯ ಬೀಚ್ ಬಳಿ ಮನೆಗಳಲ್ಲಿ ನಿಲ್ಲಿಸಿದ ವಾಹನಗಳನ್ನು ಬೇರೆಡೆ ಕೊಂಡೊಯ್ದು ಹಾನಿಗೊಳಿಸಿದ್ದಲ್ಲದೆ, ಬೀಚ್ ಬಳಿಯ ಅಂಗಡಿ ಸಾಮಾನುಗಳನ್ನು ಚೆಲ್ಲಾಪಿಲ್ಲಿ ಮಾಡಿದ ಘಟನೆ ಮಂಗಳವಾರ ತಡ ರಾತ್ರಿ ನಡೆದಿದೆ.

ಮಂಗಳವಾರ ತಡ ರಾತ್ರಿ ಇಲ್ಲಿನ ಬೀಚ್‍ನಲ್ಲಿರುವ ಕ್ಯಾಂಟೀನ್‍ನ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಹಾನಿಗೊಳಿಸಲಾಗಿದೆ. ಇಲ್ಲಿನ ಕುರ್ಚಿ ಮತ್ತು ಟೇಬಲ್ ಹಾಗೂ ನೀರಿನ ಕ್ಯಾನ್‍ಗಳನ್ನು ಸಮುದ್ರಕ್ಕೆ ಎಸಿಯಲಾಗಿದೆ.

ಕಾಡಿಪಟ್ಣ ಸಮೀಪದ ಮನೆಯೊಂದರ ಮುಂಭಾಗದಲ್ಲಿ ನಿಲ್ಲಿಸಿದ್ದ ಪ್ರಜ್ವಲ್ ಎಂಬವರಿಗೆ ಸೇರಿದ ಬೈಕ್‍ನ್ನು ಮಿರರ್ ಕಳಚಿ ರಸ್ತೆಯ ಮಧ್ಯಭಾಗದಲ್ಲಿ ಅಡ್ಡವಿರಿಸಲಾಗಿತ್ತು. ಸಮೀಪದಲ್ಲೇ ಶೆಡ್‍ನಲ್ಲಿ ನಿಲ್ಲಿಸಿದ್ದ ರಿಕ್ಷಾವನ್ನು ಹೊರಗಡೆ ತಂದು ದೂರಕ್ಕೆ ಎಳೆದುಕೊಂಡು ಹೋಗಿ ನಿಲ್ಲಿಸಲಾಗಿದೆ. ಇನ್ನೊಂದು ಬೈಕ್‍ನ ಬೀಚ್‍ನ ಸಮೀಪದ ಎಸೆಯಲಾಗಿದೆ. ಇನ್ನೊಂದು ಸ್ಕೂಟರ್ ನಾಪತ್ತೆಯಾಗಿತ್ತು. ಬಳಿಕ ಹುಡುಕಾಡಿದಾಗ ಮನೆಯೊಂದರ ಪಕ್ಕದಲ್ಲಿ ನಿಲ್ಲಿಸಿರುವುದು ಕಂಡುಬಂತು. ಮುಂಜಾನೆ ಮಲ್ಪೆಗೆ ಮೀನಿಗೆ ತೆರಳುವ ಮಹಿಳೆಯರು ಈ ಬಗ್ಗೆ ಮಾಹಿತಿ ಅರಿತು ಸ್ಥಳೀಯರಿಗೆ ತಿಳಿಸಿದ್ದರು.

ಇದು ಕಿಡಿಗೇಡಿಗಳು ನಡೆಸಿದ ಕೃತ್ಯವೇ ಅಥವಾ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆಯೇ ಎಂಬುವುದು ತನಿಖೆಯಿಂದ ಬೆಳಕಿಗೆ ಬರಬೇಕಿದೆ. ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲವೊಂದು ಕಡೆ ಸಿಸಿಟಿವಿ ಅಳವಡಿಸಲಾಗಿದ್ದು, ಪೋಲೀಸರು ಸಿಸಿಟಿವಿ ಜಾಡು ಹಿಡಿದು ತನಿಖೆ ಆರಂಭಿಸಿದ್ದಾರೆ.\

ಫೋಟೋ: ಕ್ಯಾ: ಹಾನಿಗೊಂಡ ಸ್ಕೂಟರ್