ಯಾವುದೇ ರಸ್ತೆ ಕಾಮಗಾರಿಗೆ ಮುನ್ನ ಚರಂಡಿ ಕಾಮಗಾರಿ ಪೂರ್ಣಗೊಳಿಸಿ-ಸಚಿವ ಆರ್‍ವಿ ದೇಶಪಾಂಡೆ ಆದೇಶ

ಪಡುಬಿದ್ರಿ: ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದಿದ್ದರೆ ರಸ್ತೆ ಸುರಕ್ಷತೆ ಬಲು ಕಷ್ಟ. ಹಾಗಾಗಿ ಯಾವುದೇ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಮುನ್ನ ರಸ್ತೆಯ ಇಕ್ಕೆಲಗಳ ಚರಂಡಿಯನ್ನು ಸೂಕ್ತವಾಗಿ ನಿರ್ಮಿಸುವುದು ಅತ್ಯಗತ್ಯ ಎಂದು ರಾಜ್ಯ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅಧಿಕಾರಗಳಿಗೆ ಸೂಚಿಸಿದ್ದಾರೆ.

ಉಡುಪಿ ಜಿಲ್ಲಾ ಪ್ರವಾಸದ ಆರಂಭಿಕ ಹಂತವಾಗಿ ಹೆಜಮಾಡಿಗೆ ಆಗಮಿಸಿದ ಅವರು ಹೆಜಮಾಡಿಯಲ್ಲಿ ಮಳೆ ಹಾನಿಗೊಳಗಾದ ಹಳೆ ಎಮ್‍ಬಿಸಿ ರಸ್ತೆಯ ದುರಸ್ತಿ ಕಾಮಗಾರಿಯನ್ನು ವೀಕ್ಷಿಸಿದ ಬಳಿಕ ಅಧಿಕಾರಿಗಳಿಗೆ ಆದೇಶ ನೀಡಿದರು.
ಇನ್ನು ಮುಂದೇ ಯಾವುದೇ ರಸ್ತೆಗಳ ಅಭಿವೃದ್ಧಿಗೆ ಮುನ್ನ ಚರಂಡಿ ಕಾಮಗಾರಿಗಳನ್ನು ಮೊದಲು ಪೂರ್ಣಗೊಳಿಸಬೇಕು. ರಸ್ತೆ ಕಾಮಗಾರಿಗೆ ಕ್ರಿಯಾ ಯೋಜನೆ ರೂಪಿಸುವಾಗ ಚರಂಡಿ ಕಾಮಗಾರಿಗೂ ಅನುದಾನ ಒದಗಿಸುವಂತೆ ಸೂಚಿಸಬೇಕು. ಅದಕ್ಕೆ ಬೇಕಾದ ಪ್ರೊಪೋಸಲ್‍ಗಳನ್ನು ಸಲ್ಲಿಸಬೇಕೆಂದು ಅವರು ಅಧಿಕಾರಿಗಳಿಗೆ ತಿಳಿಸಿದರು.

ಹೆಜಮಾಡಿ ಚೆಕ್‍ಪೋಸ್ಟ್‍ನಲ್ಲಿ ಸ್ವಾಗತ: ಹೆಜಮಾಡಿ ಪ್ರಥಮ ಬಾರಿ ಆಗಮಿಸಿದ ಸಚಿವ ಆರ್.ವಿ.ದೇಶಪಾಂಡೆಯವರನ್ನು ಜಿಲ್ಲಾಧಿಕಾರಿ ಹೆಬ್ಸಿಬಾ ರಾಣಿ ಕೊರ್ಲಪಾಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧು ಬಿ.ರೂಪೇಶ್, ಸಹಾಯಕ ಕಮೀಷನರ್ ಮಧುಕೇಶ್ವರ್ ಜಿಲ್ಲಾಡಳಿತದ ಪರವಾಗಿ ಸ್ವಾಗತಿಸಿದರು. ಶಾಸಕ ಲಾಲಾಜಿ ಆರ್.ಮೆಂಡನ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮುಖ್ಯ ಸಚೇತಕ ಐವನ್ ಡಿಸೋಜಾ ಹೂಹಾರ ಹಾಕುವ ಮೂಲಕ ಸ್ವಾತಿಸಿದರು.

ಈ ಸಂದರ್ಭ ಹೆಜಮಾಡಿ ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಉಮೇಶ್ ಪುತ್ರನ್, ಉಪಾಧ್ಯಕ್ಷ ಸುಧಾಕರ ಕರ್ಕೇರ, ಕಾಪು ತಹಶಿಲ್ದಾರ್ ಸಂತೋಷ್ ಕುಮಾರ್, ಲೋಕೋಪಯೋಗಿ ಇಲಾಖಾ ಎಕ್ಸಿಕ್ಯುಟಿವ್ ಇಂಜಿನಿಯರ್ ಗೋಕುಲ್‍ದಾಸ್, ಎಇಇ ಜಗದೀಶ್ ಭಟ್, ಕಾಪು ಆರ್‍ಐ ರವಿಶಂಕರ್, ವಿಎ ವಿಜಯ್, ಕಾಪು ನಿರೀಕ್ಷಕ ಹಾಲಮೂರ್ತಿ ರಾವ್ ಮತ್ತಿತರರು ಉಪಸ್ಥಿತರಿದ್ದರು.

ಸುಮಾರು 2 ಕಿಮೀ ಉದ್ದದ ಹೆಜಮಾಡಿ ಹಳೇ ಎಮ್‍ಬಿಸಿ ರಸ್ತೆಯಲ್ಲಿ ಟೋಲ್ ತಪ್ಪಿಸಿ ಸಂಚರಿಸಿದ ಘನ ವಾಹನಗಳ ಸಂಚಾರದಿಂದ ರಸ್ತೆ ಸಂಪೂರ್ಣ ನಾದುರಸ್ತಿಯಾಗಿತ್ತು. ಈ ಸಂದರ್ಭ ನವಯುಗ್ ಟೋಲ್ ಕಂಪನಿಯು ಹೆಜಮಾಡಿ ಒಳ ರಸ್ತೆಗೂ ಟೋಲ್ ಅಳವಡಿಸಿತ್ತು. ಬಳಿಕ ರಾಜ್ಯ ಸರಕಾರವು ಮಳೆ ಹಾನಿಯಿಂದ ರಸ್ತೆ ನಾದುರಸ್ತಿಯಾಗಿದೆ ಎಂದು ಸುಮಾರು ರೂ.49 ಲಕ್ಷ