Mass Soorya Namaskara programme at Padubidri Beach

 

Padubidri, April 15th, 2018:  A mass Soorya Namaskara programme was organised by JCI Padubidri at Padubidri beach in association with Hatha Yoga Shikshna Hoga Samiti and Shirva Patanjali Yoga Samiti on Sunday.

ಪಡುಬಿದ್ರಿಯಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ

ಜೇಸಿಐ ಪಡುಬಿದ್ರಿ,ಹಠಯೋಗ ಶಿಕ್ಷಣ ಯೋಗ ಸಮಿತಿ ಪಡುಬಿದ್ರಿ ಮತ್ತು ಶಿರ್ವ ಪತಂಜಲಿ ಯೋಗ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಮುಂಜಾನೆ ಸಾಮೂಹಿಕ ಸೂರ್ಯ ನಮಸ್ಕಾರ ಮತ್ತು ಬೃಹತ್ ಯೋಗ ಶಿಬಿರ ನಡೆಯಿತು.

ಪಡುಬಿದ್ರಿ ಬೀಚ್‍ನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು.ಅಕಾಲಿಕ ಬಿರು ಮಳೆಯ ಕಾರಣ ಕಾರ್ಯಕ್ರಮವನ್ನು ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ವರಾಂಡದಲ್ಲಿ ನಡೆಸಲಾಗಿದ್ದು,120ಕ್ಕೂ ಅಧಿಕ ಯೋಗಪಟುಗಳು ಭಾಗವಹಿಸಿದ್ದರು.

ಅನಂತ್ರಾಯ ಶೆಣೈ ಮತ್ತು ಲ್ಯಾನ್ಸಿ ಕೋರ್ಡಾ ಶಿಬಿರ ನಡೆಸಿಕೊಟ್ಟರು.
ಸನ್ಮಾನ: ಇದೇ ಸಂದರ್ಭ ಪಡುಬಿದ್ರಿ ಹಠಯೋಗ ಸಮಿತಿ ಮತ್ತು ಜೇಸಿಐ ಪಡುಬಿದ್ರಿ ವತಿಯಿಂದ ಶಿರ್ವ ಯೋಗಗುರುಗಳಾದ ಅನಂತ್ರಾಯ ಶೆಣೈ ಮತ್ತು ಲ್ಯಾನ್ಸಿ ಕೋರ್ಡಾಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಡಾ.ಮನೋಜ್ ಕುಮಾರ್ ಶೆಟ್ಟಿ,ಉಡುಪಿ ಆಯುಷ್ ಅಧ್ಯಕ್ಷ ಪಡುಬಿದ್ರಿ ಡಾ.ಎನ್.ಟಿ.ಅಂಚನ್,ಜಯ ಶೆಟ್ಟಿ ಪದ್ರ,ಜೇಸಿಐ ಪಡುಬಿದ್ರಿ ಅಧ್ಯಕ್ಷ ಮಕರಂದ ಸಾಲ್ಯಾನ್,ಪೂರ್ವಾಧ್ಯಕ್ಷ ಪ್ರಸನ್ನ ಕುಮಾರ್,ಪೂರ್ವಾಧ್ಯಕ್ಷ ಪಿ.ಎಸ್.ಆಚಾರ್,ಪಡುಬಿದ್ರಿ ಲಯನ್ಸ್ ಅಧ್ಯಕ್ಷ ಮ್ಯಾಕ್ಸಿಮ್ ಡಿಸೋಜಾ,ಕಾರ್ಯಕ್ರಮ ನಿರ್ದೇಶಕ ಹರೀಶ್ ಕುಮಾರ್ ಹೆಜ್ಮಾಡಿ ಉಪಸ್ಥಿತರಿದ್ದರು.