Maruti Omni rams into a stationary truck – Driver killed

Padubidri, Sept. 17th, 2018:  In a road mishap, a Maruti Omni rammed into the rear  of a stationary truckand the driver of the Omni was killed.  Dinesh Mucchur (45), a resident of Mucchur near Suratkal, succumbed to his  injuries after being taken o a hospital.  The truck was awaiting repairs at the road side on NH-66 National HIghway  near Yermal Basadi.  Dinesh was returning from Udupi after finishing catering services at a auspicious function there.

Heavy vehicles parked at the road side and absence of a service road in the area are causing a number o accidents in this area and the people have urged the district administration to take strict action against such vehicles.

Fead Kannada version:

ಎರ್ಮಾಳಿನಲ್ಲಿ ನಿಂತಿದ್ದ ಲಾರಿಗೆ ಓಮ್ನಿ ಡಿಕ್ಕಿ: ಚಾಲಕ ಮೃತ್ಯು

ಪಡುಬಿದ್ರಿ: ಹೆದ್ದಾರಿಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಓಮ್ನಿ ಕಾರು ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ತೀವ್ರ ಗಾಯಗೊಂಡ ಓಮ್ನಿ ಚಾಕಲ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಇಲ್ಲಿ ಠಾಣಾ ವ್ಯಾಪ್ತಿಯ ಎರ್ಮಾಳು ಬಸದಿ ಬಳಿ ಸಂಭವಿಸಿದೆ. ಸುರತ್ಕಲ್ ಸಮೀಪದ ಮುಚ್ಚೂರು ನಿವಾಸಿ ದಿನೇಶ್ ಮುಚ್ಚೂರು(45) ಮೃತ ವ್ಯಕ್ತಿ.

ಕ್ಯಾಟರಿಂಕ್ ಕೆಲಸ ಮಾಡಿಕೊಂಡಿದ್ದ ದಿನೇಶ್‍ರವರು ಉಡುಪಿ ಕಡೆಯಿಂದ ಶುಭ ಸಮಾರಂಭವೊಂದಕ್ಕೆ ಕ್ಯಾಟರಿಂಗ್ ಪೂರೈಸಿ ವಾಪಾಸು ಬರುವಾಗ ಎರ್ಮಾಳು ಬಸದಿ ಬಳಿ ಕೆಟ್ಟು ನಿಂತಿದ್ದ ಲಾರಿಗೆ ಅವರ ಕಾರು ಢಿಕ್ಕಿ ಹೊಡೆದಿತ್ತು.ಈ ಸಂದರ್ಭ ಅವರ ಕಾರು ಸಂಪೂರ್ಣ ಜಖಂಗೊಂಡಿದ್ದು,ದಿನೇಶ್‍ರವರು ತೀವ್ರ ಗಾಯಗೊಂಡಿದ್ದರು.ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ,ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದೆ ಘನ ವಾಹನಗಳು ರಸ್ತೆ ಬದಿಯಲ್ಲಿ ನಿಲ್ಲುವ ಪರಿಪಾಠ ಈ ಭಾಗದಲ್ಲಿ ಅತೀ ಹೆಚ್ಚು.ಅಲ್ಲದೆ ಎಲ್ಲಾ ಕಡೆ ಸರ್ವಿಸ್ ರಸ್ತೆ ಕಾಮಗಾರಿಯೂ ನಡೆದಿಲ್ಲ.ಹಾಗಾಗಿ ಈ ಗದಲ್ಲಿ ಅತೀ ಹೆಚ್ಚು ಅಪಘಾತಗಳು ಸಂಭವಿಸುತ್ತದೆ.ಈಬಗ್ಗೆ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.