ನಿಧನ: ಘನಪಾಠಿ, ಸಂಸ್ಕøತ ವಿದ್ವಾಂಸ ವೇದಮೂರ್ತಿ ಕೊಕ್ಕಡ ಅನಂತಪದ್ಮನಾಭ ಶಾಸ್ತ್ರಿ (Ananta Padmanabha Shastri)

ಪಡುಬಿದ್ರಿ: ಸಂಸ್ಕøತ ಶಿರೋಮಣಿ, ಕನ್ನಡ ವಿದ್ವಾನ್ ಹಾಗೂ ಹಿಂದಿ ಸೇರಿದಂತೆ ತ್ರಿಭಾಷಾ ಪಂಡಿತರಾಗಿ ಘನಪಾಠಿಗಳೂ, ಪ್ರಕಾಂಡ ಪಂಡಿತರೂ, ಸಂಸ್ಕøತ ಶಿಕ್ಷಕರೂ ಆಗಿದ್ದ ವೇದ ಮೂರ್ತಿ ಕೊಕ್ಕಡ ಅನಂತಪದ್ಮನಾಭ ಶಾಸ್ತ್ರಿ(92) ಅಸೌಖ್ಯದಿಂದ ಮಾ. 29ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮೃತರಿಗೆ ಪುತ್ರ, ಪುತ್ರಿ ಇದ್ದಾರೆ.

ಕೊಕ್ಕಡದ ಸಂಪ್ರದಾಯಸ್ಥ ಮನೆತನದಲ್ಲಿ ಜನಿಸಿದ್ದ ಇವರು ವೇದ, ಉಪನಿಷತ್ತುಗಳ ಆಳವಾದ ಅಧ್ಯಯನ ನಡೆಸಿದವರಾಗಿದ್ದರು. ಅನೇಕ ಪುಸ್ತಕಗಳನ್ನೂ ಪ್ರಕಟಿಸಿದವರಾಗಿದ್ದು ಜಿಲ್ಲೆಯ ಧರ್ಮಸ್ಥಳ, ಬಪ್ಪನಾಡು, ಎಲ್ಲೂರು, ಸೌತಡ್ಕ ಮುಂತಾದ ಅನೇಕ ದೇಗುಲಗಳ ಸುಪ್ರಭಾತ, ಭಕ್ತಿಗೀತೆಗಳ ಸಾಹಿತ್ಯವನ್ನೂ ರಚಿಸಿದವರಿವರಾಗಿದ್ದಾರೆ. ಉಜಿರೆ, ಧರ್ಮಸ್ಥಳ, ಕೊಡಗು ಸರಕಾರಿ ಪ್ರೌಢಶಾಲೆ, ಮೂಲ್ಕಿ ಪ. ಪೂ. ಕಾಲೇಜುಗಳಲ್ಲಿ ಸಂಸ್ಕøತ ಪಂಡಿತರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ನಿವೃತ್ತಿಯ ಬಳಿಕವೂ ಸುಮ್ಮನಿರದ ಅನಂತ ಪದ್ಮನಾಭ ಶಾಸ್ತ್ರಿಗಳು ಸಂಸ್ಕøತ ಹಾಗೂ ವೇದಾಧ್ಯನ ಗುರುಕುಲಗಳನ್ನು ಸ್ಥಾಪಿಸಿ ಅನೇಕ ಶಿಷ್ಯರ ಪ್ರೌಢಿಮೆಗೆ ಕಾರಣರಾಗಿದ್ದಾರೆ.ಸಂಶೋಧನಾ ವಿದ್ಯಾರ್ಥಿಗಳಿಗೆ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಗಳಾಗಿಯೂ ಇವರು ಸೇವೆ ಸಲ್ಲಸಿದ್ದಾರೆ.

ಕನ್ನಡ ಸಾಹಿತ್ಯ ಲೋಕಕ್ಕೂ ಇವರಿತ್ತ ಕೊಡುಗೆ ಅಪಾರವಾಗಿದ್ದು 2014ರಲ್ಲಿ ಶಿಶಿಲದಲ್ಲಿ ನಡೆದಿದ್ದ 13ನೇ ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ 2009ರಲ್ಲಿ ಕೊಕ್ಕಡದ ಸೌತಡ್ಕದಲ್ಲಿ ನಡೆದಿದ್ದ 9ನೇ ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಹಿತ ಉಡುಪಿ ಅಷ್ಟ ಮಠಾಧೀಶರಿಂದಲೂ, ಪಡುಬಿದ್ರಿಯ ಶ್ರೀ ವನದುರ್ಗಾ ಟ್ರಸ್ಟ್ ವತಿಯಿಂದಲೂ ಸಮ್ಮಾನಿಸಲ್ಪಟ್ಟಿದ್ದರು.

ಪಲಿಮಾರು ಯೋಗದೀಪಿಕಾ ಗುರುಕುಲದಲ್ಲಿ 10ವರ್ಷಗಳ ಕಾಲ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದ ಶಾಸ್ತ್ರಿಗಳ ನಿಧನಕ್ಕೆ ಪರ್ಯಾಯ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು,ಅಂತರಾಷ್ಟ್ರೀಯ ವಾಸ್ತುತಜ್ಞ,ಜ್ಯೋತಿಷಿ ಶ್ರೀ ಚಂದ್ರಶೇಖರ ಸ್ವಾಮೀಜಿ,ಕಸಾಪ ಪೂರ್ವಾಧ್ಯಕ್ಷ ಹರಿಕೃಷ್ಣ ಪುನರೂರು, ದಕ ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಸಹಿತ ಅನೇಕರು ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.