Kaup MLA Lalaji R Mendon to request government to allot land unutilised by Suzlon for setting up waste management unit.

Padubidri, July 19th, 2018: Kaup MLA Lalaji R.. Mendon has said that he would send an appeal to the government to denotify part of the land acquired by Suzlon in order to set up the waste management unit in Padubidri. He was speaking at a meeting held at Padubidri Grama Panchayat where he was felicitated.

He said the land was allotted to Suzlon company to set up environment-friendly industry and provide employment to around 4 to 5 thousand people. But due to various reasons the expected benefit is not obtained and the company is planning to sell the land to third parties and benefit from it. He said discussions are being held with the officials and the Deputy Commissioner.

On behalf of Padubidri Grama Panchayat, president Damayanti V. Amin handed over an appeal to the MLA to allot 5 acres of land for solid and liquid waste management unit, give additional grant for the first floor of Grama Panchayat building from MLA’s fund and make Suzlon return 25 acres of land to distribute it to more than 1000 homeless people.

Read full news in Kannada…

ಪಡುಬಿದ್ರಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಸುಜ್ಲಾನ್ ಜಾಗ ನೀಡಲು ಸರಕಾರಕ್ಕೆ ಮನವಿ- ಶಾಸಕ ಮೆಂಡನ್

ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪಡುಬಿದ್ರಿಯ ಬಹುದೊಡ್ಡ ಸಮಸ್ಯೆಯಾದ ಘನ ಮತ್ತು ದ್ರವ ತ್ಯಾಜ್ಯ ಘಟಕಗಳನ್ನು ಸ್ಥಾಪಿಸಲು ಜಾಗದ ಕೊರತೆಯನ್ನು ಪರಿಗಣಿಸಿ ಸುಜ್ಲಾನ್ ಯೋಜನೆಗೆ ನೀಡಿರುವ ಜಮೀನಿನಲ್ಲಿ ಬಳಕೆಯಾಗದೇ ಉಳಿದ ಭೂಮಿಯನ್ನು ಡಿನೋಟಿಪೈ ಮಾಡಿ ಪಡುಬಿದ್ರಿ ಗ್ರಾಪಂಗೆ ಹಸ್ತಾಂತರಿಸುವ ಬಗ್ಗೆ ಸರಕಾರದೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಹೇಳಿದರು.
ಪಡುಬಿದ್ರಿ ಗ್ರಾಪಂನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಗ್ರಾಪಂನ ವಿವಿಧ ಬೇಡಿಕೆಗಳ ಮನವಿ ಹಾಗೂ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಪರಿಸÀರ ಸ್ನೇಹಿ ಹಾಗೂ ನಾಲ್ಕೈದು ಸಾವಿರ ಜನರಿಗೆ ಉದ್ಯೋಗ ಸೃಷ್ಟಿಯಾಗುವ ಆಶಾಭಾವನೆಯಿಂದ ಸುಜ್ಲಾನ್ ಯೋಜನೆಗೆ ಅಂದು ಜಮೀನು ನೀಡಲಾಗಿತ್ತು. ಆದರೆ ನಾನಾ ಕಾರಣಗಳಿಂದ ಯೋಜನೆ ನಿರೀಕ್ಷಿತ ಲಾಭಗಳಿಸಲಿಲ್ಲ. ಹೆಚ್ಚುವರಿಯಾಗಿರುವ ಜಮೀನನ್ನು ಅನ್ಯರಿಗೆ ಮಾರಾಟ ಮಾಡಿ ಲಾಭಗಳಿಸುವ ಪ್ರಯತ್ನ ಸುಜ್ಲಾನ್‍ನಿಂದ ನಡೆಯುತ್ತಿದೆ. ಈ ಬಗ್ಗೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಯವರೊಂದಿಗೆ ಸಮಾಲೋಚನೆ ನಡೆಸಲಾಗುತ್ತದೆ ಎಂದರು.

ಕಾಪು ಕ್ಷೇತ್ರ ಬೃಹತ್ ಯೋಜನೆಗಳ ಮೂಲಕ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಡುತ್ತಿದೆ. ಇಲ್ಲಿನ ಪ್ರಮುಖ ಸಮಸ್ಯೆಯಾಗಿರುವ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿಯ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ. ಪಡುಬಿದ್ರಿ ಗ್ರಾಪಂ ಕಟ್ಟಡದ ಎರಡನೇ ಹಂತದ ಯೋಜನೆಯ ನೀಲ ನಕಾಶೆ ಹಾಗೂ ಯೋಜನಾ ವರದಿಯನ್ನು ನೀಡಿದಲ್ಲಿ ಸರಕಾರಕ್ಕೆ ಮನವಿ ಮಾಡಿ ಅನುದಾನ ಒದಗಿಸಲು ಬದ್ಧನಾಗಿರುವುದಾಗಿ ಹೇಳಿದರು.

ಪುರಸಭೆಗಿಂತ ಗ್ರಾಮ ಪಂಚಾಯಿತಿಯಾಗಿರುವುದೇ ಉತ್ತಮ. ಕಾಪು ಪುರಸಭೆ ರಚನೆಯಾಗಿ ನಗರ ಯೋಜನಾ ಪ್ರಾಧಿಕಾರವಾದ ಬಳಿಕ ಸುತ್ತಮುತ್ತಲಿನ ಗ್ರಾಪಂಗಳು ಸಮಸ್ಯೆ ಎದುರಿಸುತ್ತಿವೆ. ಅದರಲ್ಲೂ ಕಂದಾಯ ಇಲಾಖೆಯ ಸಮಸ್ಯೆಗಳನ್ನು ಇತ್ಯರ್ಥಗೊಳಿಸುವುದೇ ದೊಡ್ಡ ತೊಂದರೆಯಾಗಿದೆ. ಭರವಸೆ ನೀಡುವುದಕ್ಕಿಂತ ವಾಸ್ತವಿಕತೆಗೆ ಹೆಚ್ಚು ಒತ್ತು ನೀಡಬೇಕಿದೆ ಎಂದವರು ಅಭಿಪ್ರಾಯಿಸಿದರು.
ಶಾಸಕರಿಗೆ ಮನವಿ: ಇದೇ ವೇಳೆ ಪಡುಬಿದ್ರಿ ಗ್ರಾಪಂ ವತಿಯಿಂದ ಅಧ್ಯಕ್ಷೆ ದಮಯಂತಿ ವಿ.ಅಮೀನ್,ಪಡುಬಿದ್ರಿಯ ಘನ ಹಾಗೂ ದ್ರವ ತ್ಯಾಜ್ಯ ಕಟ್ಟಡಕ್ಕೆ 5 ಎಕರೆ ಜಮೀನು ಮಂಜೂರು ಮಾಡಬೇಕು. ಗ್ರಾಪಂ ಕಟ್ಟಡದ ಒಂದನೇ ಮಹಡಿ ಕಟ್ಟಡ ರಚನೆಗೆ ಶಾಸಕರ ನಿಧಿಯಿಂದ ಹೆಚ್ಚಿನ ಅನುದಾನ ಒದಗಿಸಬೇಕು. ಸುಜ್ಲಾನ್ ಕಂಪೆನಿಗೆ ನೀಡಿದ ಜಮೀನಿನಲ್ಲಿ 25 ಎಕರೆ ಸ್ಥಳವನ್ನು ಹಿಂದಕ್ಕೆ ಪಡೆದು ಗ್ರಾಪಂ ವ್ಯಾಪ್ತಿಯ 1,000ಕ್ಕೂ ಅಧಿಕ ನಿವೇಶನ ರಹಿತರಿಗೆ ನಿವೇಶನ ವಿತರಿಸಲು ಕ್ರಮ ಕೈಗೊಳ್ಳಬೇಕು. ಪಡುಬಿದ್ರಿ ಹಾಗೂ ಪಾದೆಬೆಟ್ಟು ಗ್ರಾಮಗಳ ರಸ್ತೆ, ಸೇತುವೆ, ಕಿಂಡಿ ಅಣೆಕಟ್ಟು, ಕಾಲುಸಂಕಗಳ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂದು ಶಾಸಕ ಮೆಂಡನ್‍ರವರಿಗೆ ಮನವಿಯೊಂದನ್ನು ಅರ್ಪಿಸಿ ಬೇಡಿಕೆಗಳನ್ನು ಶೀಗ್ರ ಈಡೇರಿಸುವಂತೆ ವಿನಮತಿಸಿದರು.
ಕೇರಳ ಸರಕಾರದ ಮಾದರಿಯಲ್ಲಿ ಗ್ರಾಪಂ ಸದಸ್ಯರ ಗೌರವಧನವನ್ನು ರೂ. 2500 ಸಾವಿರಕ್ಕೆ ಹೆಚ್ಚಳ ಮಾಡಬೇಕು. ಗ್ರಾಪಂನ ವಿದ್ಯುತ್ ಬಿಲ್ ಮನ್ನಾ ಮಾಡಬೇಕು. ಪಡುಬಿದ್ರಿಯನ್ನು ಪಟ್ಟಣ ಪಂಚಾಯಿತಿ ಅಥವಾ ಪುರಸಭೆಯಾಗಿ ಮೇಲ್ದರ್ಜೆಗೇರಿಸಬೇಕು ಎಂದು ಗ್ರಾಪಂ ಸದಸ್ಯ ರವಿ ಶೆಟ್ಟಿ ಆಗ್ರಹಿಸಿದರು.

ಜಿಪಂ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಶಶಿಕಾಂತ ಪಡುಬಿದ್ರಿ, ತಾಪಂ ಸದಸ್ಯರಾದ ನೀತಾ ಗುರುರಾಜ್, ದಿನೇಶ್ ಕೋಟ್ಯಾನ್ ಪಲಿಮಾರು ವೇದಿಕೆಯಲ್ಲಿದ್ದರು. ಗ್ರಾಪಂ ಉಪಾಧ್ಯಕ್ಷ ವೈ.ಸುಕುಮಾರ್ ಪ್ರಸ್ತಾವಿಸಿದರು.ಪಿಡಿಒ ಪಂಚಾಕ್ಷರಿ ಸ್ವಾಮಿ ಕೆರಿಮಠ ಸ್ವಾಗತಿಸಿ ವಂದಿಸಿದರು.