JCI’s Ashwamedha Shanti Yatra welcomed in Padubidri

Padubidri, May 26th, 2018:  A coridial welcome was accorded to JCI’s Ashwamedha Shanti Yatra in Padubidri by the members of Padubidri unit of JCI.  JCI Padubidri president Makrand Salian welcomed the team.

Full news in Kannada ….

 

ಜೇಸಿಐ ಅಶ್ವಮೇಧ ಶಾಂತಿ ಯಾತ್ರೆಗೆ ಪಡುಬಿದ್ರಿಯಲ್ಲಿ ಸ್ವಾಗತ

ವಿಶ್ವದಾದ್ಯಂತ ಅಶಾಂತಿಯನ್ನು ದೂರೀಕರಿಸಿ ಶಾಂತಿಯನ್ನು ಮರುಸ್ಥಾಪಿಸುವ ನಿಟ್ಡಿನಲ್ಲಿ ಜೇಸಿಐ ಅಂತರಾಷ್ಟ್ರೀಯ ಸಂಸ್ಥೆಯು “ಪೀಸ್ ಫಾರ್ ಪಾಸಿಬಲ್” ಎಂಬ ಧ್ಯೇಯವಾಕ್ಯದೊಂದಿಗೆ ಈ ವರ್ಷ ಎಲ್ಲೆಡೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಜೇಸಿಐ ವಲಯ 15ರ ಜೇಸಿಐ ಮಂಗಳೂರು ಸಾಮ್ರಾಟ್ ಈ ಕಾರ್ಯಕ್ರಮವನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ 8 ಜನರ ತಂಡದ ಮೂಲಕ ಅಶ್ವಮೇಧ ಎಂಬ ಕಾರ್ಯಕ್ರಮವನ್ನು “ಎ ಜರ್ನಿ ಫಾರ್ ಪೀಸ್” ಧ್ಯೇಯವಾಕ್ಯದೊಂದಿಗೆ ಕರ್ನಾಟಕ ರಾಜ್ಯದಾದ್ಯಂತ 3 ಸಾವಿರ ಕಿಮೀ ಪ್ರಯಾಣ ಮತ್ತು 50ಕ್ಕೂ ಹೆಚ್ಚು ಜೇಸಿಐ ಘಟಕಗಳಿಗೆ ಹಾಗೂ ಶಾಲಾ ಕಾಲೇಜುಗಳಿಗೆ ಭೇಟಿ ಮೂಲಕ ಶಾಂತಿಯ ಮರುಸ್ಥಾಪನೆಯಲ್ಲಿ ತನ್ನ ಅಳಿಲ ಸೇವೆ ನೀಡಲಿದೆ.
ಭಾನುವಾರ ಮಂಗಳೂರಿನಿಂದ ಆರಂಭಗೊಂಡ ಈ ಅಶ್ವಮೇಧ ಶಾಂತಿ ಯಾತ್ರೆಯು ಪಡುಬಿದ್ರಿಗಾಗಮಿಸಿದಾಗ ಜೇಸಿಐ ಪಡುಬಿದ್ರಿಯ ಅಧ್ಯಕ್ಷ ಮಕರಂದ್ ಪಡುಬಿದ್ರಿ ಮತ್ತವರ ತಂಡ ಸ್ವಾಗತಿಸಿತು.
ಈ ಸಂದರ್ಭ ಜೇಸಿಐ ವಲಯಾಧ್ಯಕ್ಷ ರಾಕೇಶ್ ಕುಂಜೂರು,ಜೇಸಿಐ ಸಾಮ್ರಾಟ್ ಅಧ್ಯಕ್ಷ ರಾಘವೇಂದ್ರ ಹೊಳ್ಳ,ಕಾರ್ಯದರ್ಶಿ ವೆಂಕಟರಮಣ,ಜೇಸಿಐ ಸುರತ್ಕಲ್ ಅಧ್ಯಕ್ಷ ಪ್ರವೀಣ್ ಶೆಟ್ಟಿ,ಉಮೇಶ್,ಅನುಶ್ಚಂದ್ರ,ಕಾರ್ತಿಕ್,ಮಹೇಶ್,ಪ್ರವೀಣ್,ಸುನಿಲ್ ಶೆಟ್ಟಿ ಮತ್ತು ನಿಖಿಲ್‍ರಾಜ್ ಉಪಸ್ಥಿತರಿದ್ದರು.