ಉತ್ತಮ ಆರೋಗ್ಯ ಭಾಗ್ಯಕ್ಕಾಗಿ ನಿತ್ಯ ಯೋಗಾಭ್ಯಾಸ ಅಗತ್ಯ-ಡಾ ದೇವಿಪ್ರಸಾದ್ ಶೆಟ್ಟಿ

ಪಡುಬಿದ್ರಿ: ನಿರಂತರ ಯೋಗಾಭ್ಯಾಸದಿಂದ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು ಎಂದು ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಹೇಳಿದರು.

ಪಡುಬಿದ್ರಿ ಬಂಟರ ಭವನದಲ್ಲಿ ಜೇಸಿಐ ಪಡುಬಿದ್ರಿ, ಪಡುಬಿದ್ರಿ ಹಠಯೋಗ ಸಮಿತಿ, ಶಿರ್ವ ಪತಂಜಲಿ ಯೋಗ ಸಮಿತಿ, ಪಾದೆಬೆಟ್ಟು ನಿಸರ್ಗ ಪತಂಜಲಿ ಯೋಗ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮ ಮುಖ್ಯ ಅತಿಥಿಯಗಿ ಅವರು ಮಾತನಾಡಿದರು.

ಎಷ್ಟೇ ಐಶ್ವರ್ಯವಂತರಾದರೂ ಅರೋಗ್ಯರಹಿತ ಜೀವನ ಅಸಾಧ್ಯ. ಜೀವನದ ಯಶಸ್ಸಿಗೆ ಉತ್ತಮ ಆರೋಗ್ಯ ಅಗತ್ಯವಾದುದು. ಉತ್ತಮ ಆರೊಗ್ಯ ಕಾಪಾಡಿಕೊಳ್ಳಲು ಯೋಗಾಭ್ಯಾಸ ಅತ್ಯುತ್ತಮ ಔಷಧಿ ಎಂದವರು ಹೇಳಿದರು.

ಹರಿದ್ವಾರದಿಂದ ಆಗಮಿಸಿದ ಯೋಗ ಗುರು ಕೈಲಾಶ್‍ಜಿಯವರು ಹಲವು ಕಠಿಣ ಯೋಗಾಭ್ಯಾಸಗಳನ್ನು ಶಿಬಿರಾರ್ಥಿಗಳಿಗೆ ಕಲಿಸಿದರು. ಅವರಿಗೆ ಬಪ್ಪನಾಡು ಪತಂಜಲಿ ಯೋಗ ಸಮಿತಿಯ ಗುರುಗಳಾದ ರಾಘವೇಂದ್ರ ರಾವ್ ಸಾಥ್ ನೀಡಿದರು.

ಜೇಸಿಐ ಪಡುಬಿದ್ರಿಯ ಅಧ್ಯಕ್ಷ ಅನಿಲ್ ಶೆಟ್ಟಿ, ಪೂರ್ವಾಧ್ಯಕ್ಷರುಗಳಾದ ಡಾ. ಎನ್.ಟಿ.ಅಂಚನ್, ಮಕರಂದ್ ಸಾಲ್ಯಾನ್, ಡಾ.ಮನೋಜ್‍ಕುಮಾರ್ ಶೆಟ್ಟಿ, ಜಯ ಎಸ್.ಶೆಟ್ಟಿ ಪದ್ರ, ಹರೀಶ್ ಕುಮಾರ್, ಕಾರ್ಯದರ್ಶಿ ಪ್ರದೀಪ್ ಆಚಾರ್ಯ, ಯೋಗ ಶಿಕ್ಷಕರಾದ ರಾಧಾಕೃಷ್ಣ ಪ್ರಭು, ಅನಂತರಾಜ್ ಶೆಣೈ, ಲ್ಯಾನ್ಸಿ ಕೋಡಾ ಉಪಸ್ಥಿತರಿದ್ದರು.

ಡಾ.ಮನೋಜ್‍ಕುಮಾರ್ ಶೆಟ್ಟಿ ವಂದಿಸಿದರು.