JCI Padubidri organised Review to React (R2R) training Programme

Padubidri, July 15th, 2018  JCI Padubidri organised a training programme called “Review to React” exclusively for the LOM Presidents.  JCI Past Zone President Uday Kumar Shetty Inna inaugurated the training programme  JCI Zone XV president Rakesh Kunjoor presided.   Y Sukumar, Director of JCI India Foundation, was the chief guest.  Shridhar PS, Past GLC JCI India, was the pilot.  Chandrashekhar Nair, National Director G&D JXI India, and Sandeep Kumar, Past Zone President, were the co pilots  JCI Padubidri President Makarand Salian welcomed the guests.  Programme Director Hareesh Kumar Hemady compered and proposed vote of thanks.

ಪಡುಬಿದ್ರಿಯಲ್ಲಿ ಜೇಸೀಐ ತರಬೇತಿ ಕಾರ್ಯಾಗಾರ ರಿವೀವ್ ಟು ರಿಯಾಕ್ಟ್

ಪಡುಬಿದ್ರಿ, 15/07/2018: ಜೇಸಿಐ ವಲಯ 15ರ ಘಟಕಾಧ್ಯಕ್ಷರುಗಳಿಗಾಗಿ ನಡೆಸಿದ “ರಿವೀವ್ ಟು ಯಿಯಾಕ್ಟ್” ತರಬೇತಿ ಕಾರ್ಯಾಗಾರವನ್ನು ಜೇಸಿಐ ಪೂರ್ವ ವಲಯಾಧ್ಯಕ್ಷ ಉದಯಕುಮಾರ್ ಶೆಟ್ಟಿ ಇನ್ನಾ ಉದ್ಘಾಟಿಸಿದರು.

ಜೇಸಿಐ ಅಧ್ಯಕ್ಷರಾಗಿ ಸಿಗುವ ವರ್ಷದ ಅವಧಿಯಲ್ಲಿ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡಲ್ಲಿ ಉನ್ನತರಾಗಲು ಸಾಧ್ಯ.ಸಾರ್ವಜನಿಕಕ ಸೇವೆಯೊಂದಿಗೆ ತಾವೂ ತರಬೇತಿಗಳನ್ನು ಪಡೆದು ಅಭಿವೃದ್ಧಿ ಸಾಧಿಸಬಹುದು ಎಂದ ಉದಯಕುಮಾರ್ ಶೆಟ್ಟಿ ಹೇಳಿದರು.

ಜೇಸಿಐ ಇಂಡಿಯಾ ಫೌಂಡೇಶನ್ ನಿರ್ದೇಶಕ ವೈ.ಸುಕುಮಾರ್ ಸಮಾರಂಭದ ಮುಖ್ಯ ಅತಿಥಿಯಾಗಿದ್ದು,ಘಟಕಾಧ್ಯಕ್ಷರುಗಳಿಗೆ ಶುಭ ಹಾರೈಸಿದರು.

ಜೇಸಿಐ ವಲಯ 15ರ ವಲಯಾಧ್ಯಕ್ಷ ರಾಕೇಶ್ ಕುಂಜೂರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ಜೇಸಿಐ ಇಂಡಿಯಾದ ಮಾಜಿ ಜಿಎಲ್‍ಸಿ ಶ್ರೀಧರ್ ಪಿಎಸ್ ತರಬೇತಿ ಕಾರ್ಯಾಗಾರದ ನೇತೃತ್ವ ವಹಿಸಿದ್ದು,ಭಾರತೀಯ ಜೇಸಿಐ ಅಭಿವೃದ್ಧಿ ವಿಭಾಗದ ರಾಷ್ಟ್ರೀಯ ನಿರ್ದೇಶಕ ಚಂದ್ರಶೇಖರ್ ನಾಯರ್,ಪೂರ್ವ ವಲಯಾಧ್ಯಕ್ಷ ಸಂದೀಪ್ ಕುಮಾರ್ ಸಹ ತರಬೇತುದಾರರಾಗಿದ್ದರು.

ವಲಯ ಉಪಾಧ್ಯಕ್ಷ ಪಶುಪತಿ ಶರ್ಮ,ಆಡಳಿತ ವಿಭಾಗದ ವಲಯ ನಿರ್ದೇಶಕ ಅಶೋಕ್ ಚೂಂತಾರು,ನಿಕಟ ಪೂರ್ವ ವಲಯಾಧ್ಯಕ್ಷ ಸಂತೋಷ್ ಜಿ.,ಜೇಸಿಐ ಪಡುಬಿದ್ರಿ ಪೂರ್ವಾಧ್ಯಕ್ಷ ಪ್ರಸನ್ನಕುಮಾರ್ ಮುಖ್ಯ ಅತಿಥಿಗಳಾಗಿದ್ದರು.
ಜೇಸಿಐ ಪಡುಬಿದ್ರಿಯ ಅಧ್ಯಕ್ಷ ಮಕರಂದ್ ಎಸ್. ಸ್ವಾಗತಿಸಿದರು.ಪ್ರೀತಿ ಸುವರ್ಣ ಜೇಸೀವಾಣಿ ಉದ್ಘೋಷಿಸಿದರು.ಕಾರ್ಯಕ್ರಮ ನಿರ್ದೇಶಕ ಹರೀಶ್ ಕುಮಾರ್ ಹೆಜ್ಮಾಡಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Leave a Reply

Your email address will not be published. Required fields are marked *