ಪಡುಬಿದ್ರಿಯಲ್ಲಿ ಆರೋಗ್ಯವಂತ ಶಿಶು ಸ್ಪರ್ಧೆ

ಪಡುಬಿದ್ರಿ: ಅತೀ ಹೆಚ್ಚು ಸಾಕ್ಷರತೆ ಹೊಂದಿರುವ ಅವಿಭಜಿತ ದಕ ಜಿಲ್ಲೆಯಲ್ಲಿ ಮಕ್ಕಳ ಆರೋಗ್ಯವು ಉತ್ತಮ ಸ್ಥಿತಿಯಲ್ಲಿದೆ ಎಂದು ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಬಿ.ಬಿ.ರಾವ್ ಹೇಳಿದರು.

ಪಡುಬಿದ್ರಿಯ ಅಮರ್ ಕಂಪಟ್ರ್ಸ್‍ನ ಸಿರಿ ಗಾರ್ಡನ್‍ನಲ್ಲಿ ಜೇಸಿಐ ಪಡುಬಿದ್ರಿಯ ಜೇಸೀ ಸಪ್ತಾಹದ ಅಂಗವಾಗಿ ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಮುಂಬೈನ ಎಚ್ ಎಂಡ್ ಎಚ್ ಫಾರ್ಮಸಿಟಿಕಲ್ಸ್ ಸಹಯೋಗದೊಂದಿಗೆ ನಡೆದ “ಆರೋಗ್ಯವಂತ ಶಿಶು ಸ್ಪರ್ಧೆ”ಯ ಪ್ರಶಸ್ತಿ ವಿತರಣಾ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಪೋಷಕರು ಎಳೆಯ ಮಕ್ಕಳ ಆರೋಗ್ಯದ ಕುರಿತು ಹೆಚ್ಚು ಕಾಳಜಿ ವಹಿಸಬೇಕೆನ್ನುವ ಉದ್ದೇಶದಿಂದ ಇಂತಹ ಸ್ಪರ್ಧೆಗಳನ್ನು ಆಯೋಜಿಸಿದ್ದು, ಭಾಗವಹಿಸಿದ ಎಲ್ಲಾ ಶಿಶುಗಳ ಆರೋಗ್ಯ ಅತ್ಯುತ್ತಮವಾಗಿದೆ ಎಂದರು.

ಪಡುಬಿದ್ರಿ ಅಮರ್ ಕಂಫಟ್ರ್ಸ್ ಮಾಲೀಕ ಹಾಗೂ ಜೇಸಿಐ ಪಡುಬಿದ್ರಿಯ ಪೂರ್ವಾಧ್ಯಕ್ಷ ಮಿಥುನ್ ಆರ್.ಹೆಗ್ಡೆ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.

ಜೇಸಿಐ ಪಡುಬಿದ್ರಿಯ ಅಧ್ಯಕ್ಷ ಅನಿಲ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ನಳಿನಿ, ಜೇಸಿರೆಟ್ ಅಧ್ಯಕ್ಷೆ ಸುಪ್ರಿಯಾ ಅನಿಲ್ ಶೆಟ್ಟಿ ಉಪಸ್ಥಿತರಿದ್ದರು.

ಪೂರ್ವಾಧ್ಯಕ್ಷ ಹರೀಶ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಪ್ರದೀಪ್ ಆಚಾರ್ಯ ವಂದಿಸಿದರು.

ಪಡುಬಿದ್ರಿ ಆರೋಗ್ಯ ಕೇಂದ್ರ ವ್ಯಾಪ್ತಿಯ ಸುಮಾರು 30ಕ್ಕೂ ಅಧಿಕ ಶಿಶುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಎಲ್ಲಾ ಮಕ್ಕಳಿಗೂ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.

ಫಲಿತಾಂಶ: 0-1 ವಿಭಾಗ: ಪ್ರಥಮ-ಹೆಜಮಾಡಿಯ ರೇಷ್ಮಾ ಮತ್ತು ಹರೀಶ್ ದಂಪತಿಯ ಮಗು ಹಾರ್ದಿಕ್, ದ್ವಿತೀಯ-ಪಾದೆಬೆಟ್ಟುವಿನ ಸುರೇಖಾ ಮತ್ತು ಸುರೇಶ್ ದಂಪತಿಯ ಮಗು ಸುಯಾಂಶಿ, ತೃತೀಯ-ಪಡುಬಿದ್ರಿಯ ಜಯಶ್ರೀ ಮತ್ತು ರಾಜೇಶ್ ದಂಪತಿಯ ಮಗು ಮೋಕ್ಷಿತ್.

1-2 ವಿಭಾಗ: ಪ್ರಥಮ- ಉಚ್ಚಿಲದ ಅಶ್ವಿನಿ ಬಂಗೇರ ಮತ್ತು ರೆನಾಲ್ಡ್ ರಿಶಾನ್ ದಂಪತಿಯ ಮಗು ರಿಶಾನ್ ಜೋವಿನ್ ಬಂಗೇರ, ದ್ವಿತೀಯ- ನಡ್ಸಾಲು ನಯನಾ ಮತ್ತು ಯಶವಂತ ದಂಪತಿಯ ಮಗು ರಿಷಿನ್, ತೃತೀಯ- ಎರ್ಮಾಳು ಬಡಾ ಸರೋಜಿನಿ ಮತ್ತು ಪ್ರವೀಣ್ ದಂಪತಿಯ ಮಗು ಹನ್ಶಿಕ್.

ಫೋಟೋ: ಪಡುಬಿದ್ರಿಯಲ್ಲಿ ನಡೆದ ಆರೋಗ್ಯವಂತ ಶಿಶು ಸ್ಪರ್ಧೆಯಲ್ಲಿ ವಿಜೇತ ಮಕ್ಕಳು ತಮ್ಮ ಪೋಷಕರೊಂದಿಗೆ ಪ್ರಶಸ್ತಿ ಸ್ವೀಕರಿಸಿದರು.