ನೈಜ ಸತ್ಯ,ತತ್ವವನ್ನು ತಿಳಿಯಪಡಿಸುವ ಆಟಿ ಆಚರಣೆ ಅಗತ್ಯ-ಅರ್ಪಿತಾ ಪಿ.ಶೆಟ್ಟಿ

ವೈದ್ಯಕೀಯ ಚಿಂತನೆಯೇ ಆಟಿ ಆಚರಣೆಯ ಮೂಲ. ಅದನ್ನು ಯುವ ಜನಾಂಗಕ್ಕೆ ತಿಳಿಯಪಡಿಸುವ ಕಾರ್ಯ ನಡೆಯಬೇಕು ಎಂದು ತುಳು ವಿದ್ವಾಂಸೆ ಹಾಗೂ ಉಡುಪಿ ಯು.ಜಿ.ಐ ಉಪನ್ಯಾಸಕಿ ಅರ್ಪಿತಾ ಪಿ.ಶೆಟ್ಟಿ ಹೇಳಿದರು.

ಶನಿವಾರ ರಾತ್ರಿ ಪಡುಬಿದ್ರಿಯ ಅಮರ್ ಕಂಫಟ್ರ್ಸ್‍ನ ಸಿರಿ ಗಾರ್ಡನ್‍ನಲ್ಲಿ ಜೆಸಿಐ ಪಡುಬಿದ್ರಿಯ ಜೇಸೀರೆಟ್ ವಿಭಾಗದ ವತಿಯಿಂದ ಹಮ್ಮಿಕೊಂಡ ಆಟಿದ ಕೂಟದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಆಟಿ ತಿಂಗಳ 31 ದಿನಗಳಲ್ಲಿ 31 ಬಗೆಯ ಕಷಾಯ, ಗಂಜಿ ಮಾಡು ಕ್ರಮ ತುಳುವ ಪದ್ಧತಿಯಲ್ಲಿತ್ತು. ಅದಕ್ಕೆ ವೈಜ್ಞಾನಿಕ ಹಿನ್ನೆಲೆಯಿದೆ. ಆಟಿ ತಿನಿಸುಗಳು ಇಂದು ಆಟಿ ಕೂಟಗಳಲ್ಲಿ ಮಾತ್ರ ಲಭ್ಯವಿದೆ. ಅದನ್ನು ಯುವ ಸಮಾಜಕ್ಕೆ ತಿಳಿಸುವ ಜತೆಗೆ ಅದನ್ನು ತಯಾರಿಸುವ ಕಲೆಯನ್ನೂ ಕಲಿಸಿಕೊಡಬೇಕು. ಆಟಿ ತಿಂಗಳ ಪ್ರತಿಯೊಂದು ಆಚರಣೆಯೂ ವೈಜ್ಞಾನಿಕ ಮತ್ತು ಧಾರ್ಮಿಕ ಮಹತ್ವವನ್ನು ಹೊಂದಿದೆ ಎಂದ ಅವರು ಆಟಿ ತಿನಿಸುಗಳ ತಯಾರಿಕೆ ಸಂದರ್ಭ ಅವುಗಳಿಗೆ ಬಳಕೆ ಮಾಡುವ ವಸ್ತಗಳ ಬಗ್ಗೆ ಸ್ಪಷ್ಟ ಪರಿಜ್ಞಾನ ಅಗತ್ಯ ಎಂದರು.

ಆಟಿ ಕೂಟವನ್ನು ಅರ್ಪಿತಾರೊಂದಿಗೆ ಚೆನ್ನೆ ಮಣೆ ಆಟವಾಡುವ ಮೂಲಕ ಉದ್ಘಾಟಿಸಿದ ಜೇಸಿಐ ವಲಯ 15ರ ಮಹಿಳಾ ಜೇಸಿ ಮತ್ತು ಜೇಸಿರೆಟ್ ವಿಭಾಗದ ನಿರ್ದೇಶಕಿ ಸಂಗೀತಾ ಪ್ರಭು ಮಾತನಾಡಿ, ಜೇಸಿಐ ಸಂಸ್ಥೆಯಿಂದ ವ್ಯಕ್ತಿತ್ವ ವಿಕಸನ ಸಾಧ್ಯ. ಯುವ ಜನತೆ ಜೇಸಿಐಗೆ ಸೇರ್ಪಡೆಗೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಜೇಸಿಐ ಪಡುಬಿದ್ರಿಯ ಜೇಸಿರೆಟ್ ವಿಭಾಗದ ಅಧ್ಯಕ್ಷೆ ಸುಪ್ರಿಯಾ ಅನಿಲ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು.
ಜೇಸಿಐ ಪಡುಬಿದ್ರಿಯ ಅಧ್ಯಕ್ಷ ಅನಿಲ್ ಶೆಟ್ಟಿ, ನಿಕಟ ಪೂರ್ವಾಧ್ಯಕ್ಷ ಮಕರಂದ್ ಸಾಲ್ಯಾನ್, ಕಾರ್ಯದರ್ಶಿ ಪ್ರದೀಪ್ ಆಚಾರ್ಯ, ಕೋಶಾಧಿಕಾರಿ ಪ್ರೀತಿ ಸುವರ್ಣ, ಜ್ಯೂನಿಯರ್ ಜೇಸೀ ಅಧ್ಯಕ್ಷೆ ಬ್ರಾಹ್ಮೀ ಹರೀಶ್ ಮುಖ್ಯ ಅತಿಥಿಗಳಾಗಿದ್ದರು.
ಶೋಭಾ ರಾಜಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ಶೋಭಾ ಜಗದೀಶ್ ಶೆಟ್ಟಿ ವಂದಿಸಿದರು.