ಪಡುಬಿದ್ರಿ ದೇವಳದ ಧ್ವಜಾರೋಹಣ

ಪಡುಬಿದ್ರಿ: ಇತಿಹಾಸ ಪ್ರಸಿದ್ಧ ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ದೇವಸ್ಥಾನದ ತಂತ್ರಿಗಳಾದ ವೇದಮೂರ್ತಿ ಸುರೇಂದ್ರ ಉಪಾಧ್ಯಾಯರ ನೇತೃತ್ವದಲ್ಲಿ ಗುರುವಾರ ಧ್ವಜಾರೋಹಣ ನೆರವೇರಿತು.

ಶ್ರೀ ದೇಗುಲದಲ್ಲಿ ನಡೆಯುತ್ತಿರುವ ಅಷ್ಟಬಂಧ ಲೇಪನ ಮತ್ತು ಕಲಶಾಭಿಷೇಕದ ಅಂಗವಾಗಿ ಬೆಳಿಗ್ಗೆ ಆದ್ಯ ಗಣಯಾಗ,ಬಿಂಬಶುದ್ಧಿ ಯಾಗ,ಶಾಂತಿಯಾಗ,ಪ್ರಾಯಶ್ಚಿತ್ತ ಹೋಮ,ಮೂರ್ತಿ ಯಾಗ,ಪಂಚ ಬ್ರಹ್ಮ ಯಾಗ,ಕಲಶಾಭಿಷೇಕ,ಪ್ರಸನ್ನ ಪೂಜೆಗಳು ನಡೆಯಿತು.

ಈ ಸಂದರ್ಭ ಶ್ರೀ ದೇವಳದ ಅನುವಂಶಿಕ ಮೊಕ್ತೇಸರರುಗಳಾದ ಪಡುಬಿದ್ರಿ ಬೀಡು ರತ್ನಾಕರ ರಾಜ್ ಅರಸು ಕಿನ್ಯಕ್ಕ ಬಲ್ಲಾಳರು ಮತ್ತು ಪಡುಬಿದ್ರಿ ಪೇಟೆ ಮನೆ ಪಿ.ವಿಶ್ವನಾಥ ಹೆಗ್ಡೆ,ದೇವಳದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ಕುಮಾರ್ ಶೆಟ್ಟಿ,ಅರ್ಚಕ ವೃಂದ,ಸಿಬಂದಿ ವರ್ಗ ಹಾಗೂ ಗ್ರಾಮಸ್ಥರು ನೆರೆದಿದ್ದರು.