ಜೈ ಜವಾನ್-ಜೈ ಕಿಸಾನ್ ಘೋಷಣೆಯಡಿ ಯೋಧ ಮತ್ತು ಕೃಷಿಕರಿಗೆ ಗೌರವ

ಪಡುಬಿದ್ರಿ: ದೇಶ ಭಕ್ತಿ ಹಾಗೂ ಭಾರತದ ಆರ್ಥಿಕತೆಯ ಬೆನ್ನೆಲುಬಾದ ಭಾರತೀಯ ಸೈನಿಕರು ಮತ್ತು ಕೃಷಿಕರನ್ನು ಗೌರವಿಸುವ ಜೇಸಿಐನ ಘೋಷಣೆಯಾದ ಜೈ ಜವಾನ್-ಜೈ ಕಿಸಾನ್ ಘೋಷಣೆಯಡಿ ಜೇಸಿಐ ಪಡುಬಿದ್ರಿಯ ವತಿಯಿಂದ ಯೋಧ ಹಾಗೂ ಕೃಷಿಕರನ್ನು ಗೌರವಿಸುವ ಕಾರ್ಯಕ್ರಮ ಇತ್ತೀಚೆಗೆ ಪಡುಬಿದ್ರಿಯಲ್ಲಿ ನಡೆಯಿತು.

ಜೇಸಿಐ ಪಡುಬಿದ್ರಿಯ ಜೇಸೀ ಸಪ್ತಾಹದ ಅಂಗವಾಗಿ ಪಡುಬಿದ್ರಿ ಅಮರ್ ಕಂಫಟ್ರ್ಸ್‍ನ ಸಿರಿ ಗಾರ್ಡನ್‍ನಲ್ಲಿ ನಡೆದ ಕುಟುಂಬೋತ್ಸವ ಮತ್ತು ವಲಯಾಧ್ಯಕ್ಷ ಅಶೋಕ್ ಚೂಂತಾರು ಅಧಿಕೃತ ಭೇಟಿ ಸಂದರ್ಭ ಭಾರತೀಯ ಸೇನೆಯ ನಾಯಕ್ ಪದವಿಯ ವಿಲ್ಸನ್ ಡಿಸೋಜಾ ಮತ್ತು ಪ್ರಗತಿಪರ ಕೃಷಿಕ ಪ್ರಭಾಕರ ಶೆಟ್ಟಿ ಬೊಳಿಂಜೆಗುತ್ತುರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಮಾತನಾಡಿದ ಜೇಸಿಐ ವಲಯಾಧ್ಯಕ್ಷ ಅಶೋಕ್ ಚೂಂತಾರು, ಸಂಕೀರ್ಣ ಕಾಲಘಟ್ಟದಲ್ಲಿ ನಾವಿದ್ದು, ಹಗಲು ರಾತ್ರಿ ನಮ್ಮನ್ನು ಸಂರಕ್ಷಿಸುವ ಸೈನಿಕರನ್ನು ಹಾಗೂ ಭಾರತೀಯ ಆರ್ಥಿಕತೆಯ ಬೆನ್ನೆಲುಬಾದ ರೈತರನ್ನು ಗೌರವಿಸುವ ಕಾರ್ಯಕ್ರಮ ಈ ಬಾರಿ ಜೇಸಿಐ ಹಮ್ಮಿಕೊಂಡಿದ್ದು, ಈಗಾಗಲೇ 49 ಕಡೆಗಳಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. ಯುವ ಕರನ್ನು ತರಬೇತುಗೊಳಿಸುವ ಮೂಲಕ ವ್ಯಕ್ತಿತ್ವ ವಿಕಸನಕ್ಕೆ ಜೇಸಿಐ ಸಂಸ್ಥೆ ಈ ಬಾರಿ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.

HCI Zone XV president felicitated

ಸನ್ಮಾನ: ಜೇಸಿಐ ಪಡುಬಿದ್ರಿಗೆ ಅಧಿಕೃತ ಭೇಟಿ ನೀಡಿದ ವಲಯಾಧ್ಯಕ್ಷ ಅಶೋಕ್ ಚೂಂತಾರುರವರನ್ನು ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಜೇಸಿಐ ಇಂಡಿಯಾ ಫೌಂಡೇಶನ್ ನಿರ್ದೇಶಕ ವೈ.ಸುಕುಮಾರ್, ವಲಯ ಪೂರ್ವಾಧ್ಯಕ್ಷ ಉದಯ ಕುಮಾರ್ ಶೆಟ್ಟಿ ಇನ್ನ, ವಲಯ ಉಪಾಧ್ಯಕ್ಷ ಮಕರಂದ ಸಾಲ್ಯಾನ್ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು.
ಜೇಸಿಐ ಪಡುಬಿದ್ರಿಯ ಅಧ್ಯಕ್ಷ ಅನಿಲ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು.
ಬಹುಮಾನ ವಿತರಣೆ: ಇದೇ ಸಂದರ್ಭ ಸದಸ್ಯರಿಗಾಗಿ ಹಮ್ಮಿಕೊಳ್ಳಲಾದ ವಿವಿಧ ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವಲಯಾಧ್ಯಕ್ಷರ ಆಪ್ತ ಕಾರ್ಯದರ್ಶಿ ರಕ್ಷಿತ್ ಕುಡುಪು, ಜೇಸಿರೆಟ್ ಅಧ್ಯಕ್ಷೆ ಸುಪ್ರಿಯಾ ಅನಿಲ್ ಶೆಟ್ಟಿ, ಜ್ಯೂನಿಯರ್ ಜೇಸಿ ಅಧ್ಯಕ್ಷೆ ಬ್ರಾಹ್ಮೀ ಹರೀಶ್, ಸಪ್ತಾಹ ನಿರ್ದೇಶಕ ಮನೋಜ್ ಕುಮಾರ್, ಕಾರ್ಯಕ್ರಮ ಪ್ರಾಯೋಜಕ ಹಾಗೂ ಪಲಿಮಾರು ಗ್ರಾಪಂ ಅಧ್ಯಕ್ಷ ಜಿತೇಂದ್ರ ಫುರ್ಟಾಡೋ ಉಪಸ್ಥಿತರಿದ್ದರು.

ಪೂರ್ವಾಧ್ಯಕ್ಷ ಡಾ.ಮನೋಜ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಪ್ರದೀಪ್ ಆಚಾರ್ಯ ವಂದಿಸಿದರು.