ಪಡುಬಿದ್ರಿ ಬಿಚ್‍ನಲ್ಲಿ ಜೆಸಿಯ ಕಡಲೊತ್ಸವ-2019 ಉದ್ಘಾಟನೆ

ದೂರದೃಷ್ಟಿಯ ಕೃತಿ ಅನುಷ್ಠಾನದೊಂದಿಗೆ ಉತ್ತಮ ಯಶಸ್ಸು: ಉದ್ಯಮಿ ಕೆ.ಪ್ರಕಾಶ್ ಶೆಟ್ಟಿ

ಪಡುಬಿದ್ರಿ: ಯವ ಜನತೆಯನ್ನು ತರಬೇತಿಗೊಳಿಸುವ ಜೇಸಿಐ ನಾಯಕತ್ವ ವಿಕಸನ ಸಂಸ್ಥೆಯಾಗಿದೆ.ಯಾವುದೇ ವ್ಯಕ್ತಿಯು ಉತ್ತಮ ದೂರದೃಷ್ಟಿಯೊಂದಿಗೆ ಉತ್ತಮ ಕೃತಿಗಳನ್ನು ಪ್ರಾಮಾಣಿಕವಾಗಿ ಅನುಷ್ಟಾನಿಸಿದಾಗ ಉತ್ತಮ ಫಲ ಶತ:ಸಿದ್ಧ.ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಶ್ರಮಜೀವಿಗಳಾಗಿರಿ ಎಂದು ಜೇಸಿಐ ವಲಯ 15ರ ಯುವ ಜನತೆಗೆ ಬೆಂಗಳೂರಿನ ಎಂಆರ್‍ಜಿ ಗ್ರೂಪ್‍ನ ಸಿಎಂಡಿ,ಉದ್ಯಮಿ ಕೆ.ಪ್ರಕಾಶ್ ಶೆಟ್ಟಿ ಕರೆ ನೀಡಿದರು.

ಅವರು ಶನಿವಾರ ರಾತ್ರಿ ಪಡುಬಿದ್ರಿಯ ಸಮುದ್ರ ಕಿನಾರೆಯಲ್ಲಿ ಪಡುಬಿದ್ರಿ ಜೇಸಿಐನ ಸ್ಥಾಪಕಾಧ್ಯಕ್ಷ ದಿ.ವಿಜಯಕುಮಾರ್ ಶೆಟ್ಟಿ ವೇದಿಕೆಯಲ್ಲಿ ಪಡುಬಿದ್ರಿ ಜೇಸಿಐ ಪ್ರಾಯೋಜಕತ್ವದಲ್ಲಿ ಆಯೋಜಿಸಲಾಗಿದ್ದ ಜೇಸಿಐ ವಲಯ 15ರ ಕಾರ್ಯಕ್ರಮ ಕಡಲೋತ್ಸವ-2019ನ್ನು ಉದ್ಘಾಟಿಸಿ ಮಾತನಾಡಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ಭಾರತೀಯ ಜೇಸಿಐನ ಉಪಾಧ್ಯಕ್ಷ ಅನೀಶ್ ಸಿ.ಮಾಥ್ಯೂ ಮಾತನಾಡಿ,ಜೇಸಿ ಸಂಸ್ಥೆಗಳಲ್ಲಿನ ಅವಕಾಶಗಳನ್ನು ಬಳಸಿಕೊಂಡು ಯುವ ಜನತೆ ಪ್ರತಿಭಾನ್ವಿತರಾಗಿ ಬೆಳೆಯಿರಿ ಎಂದರು.

ಜೇಸಿಐ ವಲಯ 15ರ ವಲಯಾಧ್ಯಕ್ಷ ಅಶೋಕ್ ಚೂಂತಾರ್ ಮಾತನಾಡಿ,28 ವರ್ಷಗಳ ಹಿರಿಮೆಯೊಂದಿಗೆ ಸದಾ ಭಾರತೀಯ ಜೇಸಿಐನಲ್ಲಿ ಮುಂಚೂಣಿಯಲ್ಲಿರುವ ವಲಯ 15ರ ಹೆಮ್ಮೆಯ ಸದಸ್ಯರಾಗಿ ನಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳೋಣವೆಂದರು.
ಸನ್ಮಾನ: ವೇದಿಕೆಯಲ್ಲಿ ಭಾರತೀಯ ಜೇಸಿಐ ಉಪಾಧ್ಯಕ್ಷ ಅನೀಶ್ ಸಿ.ಮಾಥ್ಯೂ ಹಾಗೂ ಪಡುಬಿದ್ರಿ ಜೇಸಿಐ ಪೂರ್ವಾಧ್ಯಕ್ಷರು ಮತ್ತು ಹಿರಿಯ ಸದಸ್ಯರ ಸಮ್ಮುಖದಲ್ಲಿ ಇತ್ತೀಚೆಗಷ್ಟೇ ಮಂಗಳೂರು ವಿವಿ ಡಾಕ್ಟರೇಟ್ ಪದವಿಯನ್ನು ಗಳಿಸಿರುವ ಜೇಸಿಐ ಪಡುಬಿದ್ರಿಯ ಜೇಸಿರೆಟ್ ಪೂರ್ವಾಧ್ಯಕ್ಷೆ ಡಾ.ಸುಪ್ರಭಾ ಹರೀಶ್‍ರನ್ನು ಸಮ್ಮಾನಿಸಿ ಗೌರವಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ವಲಯ ಕಾರ್ಯಕ್ರಮಗಳ ನಿರ್ದೇಶಕ ಜೇಸಿಐ ಸೆನೆಟರ್ ರಾಘವೇಂದ್ರ ಹೊಳ್ಳ ವಹಿಸಿದ್ದು ಮಾತನಾಡಿದರು.

ವೇದಿಕೆಯಲ್ಲಿ ನಿಕಟಪೂರ್ವ ವಲಯಾಧ್ಯಕ್ಷ ರಾಕೇಶ್ ಕುಂಜೂರು, ವಲಯ ಉಪಾಧ್ಯಕ್ಷ ಮಕರಂದ ಸಾಲ್ಯಾನ್,ರಾಷ್ಟ್ರೀಯ ನಿರ್ದೇಶಕ ಸಂದೀಪ್,ಮಾಜಿ ವಲಯಾಧ್ಯಕ್ಷ ಸದಾನಂದ ನಾವಡ,ಜೇಸಿಐ ಇಂಡಿಯಾ ಫೌಂಡೇಶನ್‍ನ ನಿರ್ದೇಶಕ ವೈ.ಸುಕುಮಾರ್,ಅನಿಲ್ ಕುಮಾರ್ ರಾವ್,ಮುರಳೀ ಶ್ಯಾಮ್,ವಲಯ 14ರ ವಲಯಾಧ್ಯಕ್ಷೆ ಸವಿತಾ ಕುಮಾರ್,ಪಡುಬಿದ್ರಿ ಜೇಸಿರೆಟ್ ಅಧ್ಯಕ್ಷೆ ಸುಪ್ರಿಯಾ ಅನಿಲ್ ಶೆಟ್ಟಿ,ಜೂನಿಯರ್ ಜೇಸಿ ಅಧ್ಯಕ್ಷೆ ಬ್ರಾಹ್ಮೀ ಹರೀಶ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪಡುಬಿದ್ರಿ ಜೇಸಿಐ ಅಧ್ಯಕ್ಷ ಅನಿಲ್ ಶೆಟ್ಟಿ ಕಡಲೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿದರು.ಪಡುಬಿದ್ರಿ ಜೇಸಿಐ ಕಡಲೋತ್ಸವ ಕಾರ್ಯಕ್ರಮ ಸಂಯೋಜಕ ಮುರಳೀನಾಥ್ ಶೆಟ್ಟಿ ಪ್ರಸ್ತಾವಿಸಿದರು.ಘಟಕ ಕಾರ್ಯದರ್ಶಿ ಪ್ರದೀಪ್ ಆಚಾರ್ಯ ವಂದಿಸಿದರು.

ಕಡಲೋತ್ಸವದಲ್ಲಿ ವಲಯದ 55 ಘಟಕಗಳ ಸುಮಾರು 1200 ಪ್ರತಿನಿದಿಗಳು ಭಾಗವಹಿಸಿದ್ದರು. ಬೀಚ್ ವಾಲಿಬಾಲ್, ಬೀಚ್ ತ್ರೋಬಾಲ್, ಹಗ್ಗ ಜಗ್ಗಾಟಗಳ ಸ್ಪ`ರ್Éಗಳು ನಡೆಯಿತು. ಜೇಸಿ ಸದಸ್ಯರಿಗಾಗಿ ನಡೆದ ವಾಲಿಬಾಲ್ ಸ್ಪರ್ಧೆಯಲ್ಲಿ ಜೇಸಿಐ ಹೆಬ್ರಿ(ಪ್ರಥಮ), ಜೇಸಿಐ ಕಾಪು(ದ್ವಿತೀಯ),ಜೇಸಿರೆಟ್‍ಗಳಿಗಾಗಿ ನಡೆದ ತ್ರೋಬಾಲ್ ಸ್ಪರ್ಧೆಯಲ್ಲಿ ಜೇಸಿಐ ಕಾಪು(ಪ್ರಥಮ),ಜೇಸಿಐ ಕಂಬೈನ್ಡ್(ದ್ವಿತೀಯ),ಜೇಸಿಗಳಿಗಾಗಿ ನಡೆದ ಹಗ್ಗ ಜಗ್ಗಾಟದಲ್ಲಿ ಜೇಸಿಐ ಕಾಪು(ಪ್ರಥಮ),ಜೇಸಿಐ ಹೆಬ್ರಿ(ದ್ವಿತೀಯ) ಹಾಗೂ ಜೇಸಿರೆಟ್‍ಗಳಿಗಾಗಿ ನಡೆದ ಹಗ್ಗ ಜಗ್ಗಾಟದಲ್ಲಿ ಪ್ರಾಂತ್ಯ`ಜಿ'(ಪ್ರಥಮ) ಹಾಗೂ ಜೇಸಿಐ ಕಲ್ಯಾಣಪುರ(ದ್ವಿತೀಯ) ಸ್ಥಾನಗಳನ್ನು ಗಳಿಸಿತು.