ತುಳುನಾಡ ಕಲಾವಿದರಿಂದ ಉತ್ತಮ ಸಾಮಾಜಿಕ ಕಾರ್ಯಕ್ರಮ: ವೈ. ಸುಧೀರ್‍ಕುಮಾರ್

ಪಡುಬಿದ್ರಿ: ತುಳುನಾಡ ಕಲಾವಿದರು, ಪಡುಬಿದ್ರಿ ಇವರು ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದ ವರ್ಷಾವಧಿ ಮಹೋತ್ಸವದ ಸಂದರ್ಭದಲ್ಲಿ ಸಾದರಪಡಿಸಿದ ಸಾಂಸ್ಕøತಿಕ ಕಾರ್ಯಕ್ರಮವನ್ನು ಪಡುಬಿದ್ರಿ ವ್ಯವಸಾಯಿಕ ಸಹಕಾರಿ ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವೈ. ಸುಧೀರ್ ಕುಮಾರ್ ಸಮಾಜದಲ್ಲಿ ಸಾಧಕರನ್ನು ಸಮ್ಮಾನಿಸಿರುವುದು ಉತ್ತಮ ಕಾರ್ಯಕ್ರಮವಾಗಿದೆ. ಸಮಾಜದ ಜನರ ಪ್ರೀತಿ ವಿಶ್ವಾಸಗಳನ್ನು ಗಳಿಸಿಕೊಳ್ಳಬೇಕು. ಆ ಮೂಲಕವಾಗಿ ಸಮಾಜದ ಋಣವನ್ನು ತೀರಿಸಿಕೊಳ್ಳಬೇಕು ಎಂದು ಹೇಳಿದರು.

ಸನ್ಮಾನ: ನಿವೃತ್ತ ಸೇನಾನಿ ರಾಜೇಶ್ ಮೆಂಡನ್ ಪೆÇಲಿಪು ಮತ್ತು ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದ ಅರ್ಚಕರೂ, ಕೃಷಿಕರೂ ಆಗಿರುವ ಪಿ. ಎಲ್. ರಾಮಕೃಷ್ಣ ಆಚಾರ್ಯ ಅವರನ್ನು ಈ ವೇದಿಕೆಯಲ್ಲಿ ಸಮ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ವೈ. ಸುಕುಮಾರ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಶುಭ ಹಾರೈಸಿದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬಳ್ಳಾರಿ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಸಾಮಾಜಿಕ ಮುಂದಾಳು ನವೀನ್‍ಚಂದ್ರ ಜೆ. ಶೆಟ್ಟಿ ಮಾತನಾಡಿದರು.

ಸಂಘದ ಉಪಾಧ್ಯಕ್ಷ ಅಶ್ರಫ್ ಪಡುಬಿದ್ರಿ, ಸುಧಾಕರ ಸಾಲ್ಯಾನ್, ರಿಯಾಜ್ ಮುದರಂಗಡಿ, ಮಯ್ಯದಿ ಕನ್ನಂಗಾರ್, ರವೀನ್ ಪಡುಬಿದ್ರಿ ಮತ್ತಿತರರು ಉಪಸ್ಥಿತರಿದ್ದರು.

ರಾಜೇಶ್ ಶೇರಿಗಾರ್ ಹಾಗೂ ಸಂತೋಷ್ ಪಡುಬಿದ್ರಿ ಕಾರ್ಯಕ್ರಮ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಸುಧಾಕರ ಕೆ. ವಂದಿಸಿದರು.

ಫೋಟೋ: ಕ್ಯಾ: ನಿವೃತ್ತ ಸೇನಾನಿ ರಾಜೇಶ್ ಮೆಂಡನ್ ಪೆÇಲಿಪು ಮತ್ತು ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದ ಅರ್ಚಕರೂ, ಕೃಷಿಕರೂ ಆಗಿರುವ ಪಿ. ಎಲ್. ರಾಮಕೃಷ್ಣ ಆಚಾರ್ಯ ಅವರನ್ನು ಈ ವೇದಿಕೆಯಲ್ಲಿ ಸಮ್ಮಾನಿಸಲಾಯಿತು.