Huge catch of silver fish at Hejamady seashore

Padubidri, September 5th, 2018:  A huge catch of silver fish by Hejamady’s fishermen attracted hundreds of people in a rush to buy large quantity of fish at a throw away price. Fishermen belonging to three traditional Kairampani funds caught crores of silver fish on Wednesday and they had to wait till evening to pull their nets back ashore.  The price of silver fish crashed from Rs.. 800 per hundred in the morning to Rs 10 in the evening.  Fish lovers had a festive time buying sacks of fishes.

Read ore in Kannada …..

ಹೆಜಮಾಡಿ ಕಡಲ ತೀರದಲ್ಲಿ ಬೊಳಿಜಿರ್ ಸುಗ್ಗಿ: ಮುಗಿ ಬಿದ್ದ ಜನತೆ

ಶ್ರಾವಣ ಮಾಸ ಆರಂಭದೊಂದಿಗೆ ಕಡಲಿಗಿಳಿಯಳುವ ಮೀನುಗಾರರಿಗೆ ಮೀನಿನ ಸುಗ್ಗಿ ಆರಂಭಗೊಳ್ಲುತ್ತದೆ.ಈ ಬಾರಿ ಸಮುದ್ರ ಪೂಜೆ ಬಳಿಕ ಸಮುದ್ರಕ್ಕಿಳಿದ ಮೀನುಗಾರರಿಗೆ ಮೀನಿನ ಸುಗ್ಗಿ ಆರಂಭಗೊಂಡಿದ್ದು,ಬುಧವಾರ ಹೆಜಮಾಡಿ ಕಡಲಿಗಿಳಿದ ಕೈರಂಪಣಿ ಮೀನುಗಾರರಿಗೆ ಬೇಕಾದಷ್ಟು ಬೊಳಿಂಜಿರ್(ಸಿಲ್ವರ್ ಫಿಶ್ ಅಥವಾ ವೈಟ್ ಸಾರ್ಡಿನ್)ಮೀನು ಹೇರಳವಾಗಿ ದೊರಕಿದ್ದು,ಅರ್ಧ ದಿನದೊಳಗೆ ಮೀನಿನ ದರ ಪಾತಾಳಕ್ಕಿಳಿದಿದೆ.

ಬೊಳಿಂಜಿರ್ ಬಲು ಟೇಸ್ಟಿ:ಮೀನು ತಿನ್ನದವರಿಗೆ ಆರಂಭದಲ್ಲಿ ಬೊಳಿಂಜಿರ್ ಮೀನು ತಿನ್ನಿಸುವುದು ರೂಢಿಯಲ್ಲಿದೆ.ಸರ್ವೇ ಸಾಮಾನ್ಯವಾಗಿ ಮೀನುಗಳಿಗೆ ಇರುವ ಮೀನಿನ ವಾಸನೆ ಇಲ್ಲದ ಮೀನು ಬೊಳಿಂಜಿರ್.ವರ್ಷವಿಢಿ ದೊರಕುವ ಈ ಮೀನು ಹೇರಳವಾಗಿ ದೊರಕುವುದು ತೀರಾ ವಿರಳ.ವರ್ಷವಿಡೀ ಬೊಳಿಂಜಿರ್ ಮೀನಿಗಾಗಿಯೇ ಇರುವ ಪ್ರತ್ಯೇಕ ಬಲೆಯಲ್ಲಿ ಬೊಳಿಂಜಿರ್ ಮೀನು ಹಿಡಿಯಲಾಗುತ್ತದೆ.ಮಳೆಗಾಲದಲ್ಲಿ ಒಕ್ಕೂಟ ವ್ಯವಸ್ಥೆಯಲ್ಲಿ ಇರುವ ಈ ಜಾತಿಯ ಮೀನು ಸಮುದ್ರ ನೀರು ಬಿಸಿಯೇರುತ್ತಿದ್ದಂತೆ ಪ್ರತ್ಯೇಕತೆ ಬಯಸುತ್ತದೆ.ಆ ಬಳಿಕ ಅತೀ ಕಡಿಮೆಯಾಗಿ ಮೀನಿನ ಬಲೆಗೆ ಬೀಳುತ್ತದೆ.ಹಾಗಾಗಿ ವರ್ಷವಿಡೀ ಬೊಳಿಂಜಿರ್ ಒಂದರ ದರ ಮಾರುಕಟ್ಟೆಯಲ್ಲಿ ರೂ.3ರಿಂದ 7 ರವರೆಗೆ ಇರುತ್ತದೆ.

ಹೆಜಮಾಡಿಯಲ್ಲಿ ಬೊಳಿಂಜಿರ್ ಸುಗ್ಗಿ: ಬುಧವಾರ ಎಂದಿನಂತೆ ಕೈರಂಪಣಿ ಹರಡಿದ ಮೂರು ಪ್ರತ್ಯೇಕ ಫಂಡಿನವರಿಗೆ ಬೊಳಿಂಜರ್ ಕೋಟ್ಯಂತರ ಲೆಕ್ಕದಲ್ಲಿ ಬಿದ್ದಿದೆ.ಒಂದೇ ಬಾರಿ ನೀರಿಗೆ ಹಾಕಿದ ಬಲೆಯನ್ನು ಮೇಲೆಳೆಯಲು ಸಂಜೆವರೆಗೂ ಕಾಯಬೇಕಾಯಿತು.
ತೀರಾ ಅಗ್ಗ: ಮಿತಿಗಿಂತ ಅಧಿಕವಾಗಿ ಬಿದ್ದ ಬೊಳಿಂಜಿರ್ ಮಾರುಕಟ್ಟೆಯಲ್ಲಿ ಏಕಾಏಕಿ ದರ ಕುಸಿತಕ್ಕೆ ಕಾರಣವಾಗಿದೆ.ಬಿಡಿ ಲೆಕ್ಕದಲ್ಲಿ ಮಾರಾಟವಾಗುತ್ತಿದ್ದ ಬೊಳಿಂಜಿರ್‍ನ್ನು ಗೋಣಿ ಲೆಕ್ಕದಲ್ಲಿ ಮಾರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.ಮುಂಜಾನೆ 100 ಬೊಳಿಂಜಿರ್‍ಗೆ 80ರಿಂದ 100 ರೂ.ದರವಿದ್ದು,ಮಧ್ಯಾಹ್ನ 5ರಿಂದ 10ರೂ.ಗೆ ಇಳಿದಿತ್ತು.
ಹೆಜಮಾಡಿ ಸುತ್ತಮುತ್ತ ಬೊಳಿಂಜಿರ್ ಪದಾರ್ಥ: ಹೆಜಮಾಡಿಯಲ್ಲಿ ಬೊಳಿಂಜಿರ್ ಸುಗ್ಗಿ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಬಹುಬೇಗ ಪ್ರಸಾರಗೊಂಡು ಸಹಸ್ರಾರು ಮೀನು ಪ್ರಿಯರು ಹೆಜಮಾಡಿಗೆ ಆಗಮಿಸಿ ಧರ್ಮಾರ್ಥವಾಗಿ ಬೊಳಿಂಜಿರ್ ಮನೆಗೊಯ್ದರು.ದೂರದ ಪಲಿಮಾರು,ಎಲ್ಲೂರು,ಬೆಳ್ಮಣ್ಣು,ಕಾರ್ಕಳ,ಮೂಲ್ಕಿ,ಕಿನ್ನಿಗೋಳಿ,ಪಡುಬಿದ್ರಿ,ಎರ್ಮಾಳು ಕಡೆಗಳಿಂದಲೂ ಮತ್ಸ್ಯ ಪ್ರಿಯರು ಆಗಮಿಸಿ ಬೊಳಿಂಜಿರ್ ಮನೆಗೊಯ್ದರು.


ರಸ್ತೆ ಬ್ಲಾಕ್: ದೂರದೂರುಗಳಿಂದ ವಾಹನಗಳಲ್ಲಿ ಆಗಮಿಸಿದ ಮತ್ಸ್ಯಪ್ರಿಯರಿಂದ ಹೆಜಮಾಡಿ ಮೀನುಗಾರಿಕಾ ರಸ್ತೆ ಸಂಪೂರ್ಣ ಬ್ಲಾಕ್ ಆಯಿತು.ಮಧ್ಯಾಹ್ನ ಶಾಲಾ ವಾಹನಗಳು ಸುತ್ತುಬಳಸಿ ಕ್ರಮಿಸಬೇಕಾಯಿತು.ಅನೇಕರು ಎರಡು ಮೂರು ಚೀಲದಷ್ಟು ಮೀನು ಮನೆಗೊಯ್ದರು.

ಜಾಣರನೇಕರು ಗೋಣಿಯಷ್ಟು ಬೊಳಿಂಜಿರ್ ಸಂಗ್ರಹಿಸಿ ದೂರದ ಮೀನು ಮಾರುಕಟ್ಟೆಗಳಿಗೆ ತೆರಳಿ ಹೇರಳ ಹಣವನ್ನೂ ಮಾಡಿದರು.ನಗರ ಪ್ರದೇಶಗಳ ವಸತಿ ಸಂಕೀರ್ಣಗಳಿಗೆ ತೆರಳಿ ತಾಜಾ ಮೀನು ಎಂದು ಹೇಳಿ ಅಧಿಕ ದರಗಳಲ್ಲಿ ಮಾರಾಟ ಮಾಡಿದರು.

ಕಳೆದ ಎರಡು ಮೂರು ದಿನಗಳಿಂದ ಪಡುಬಿದ್ರಿ ಮತ್ತು ಹೆಜಮಾಡಿ ಕಡಲ ತೀರದಲ್ಲಿ ಕೈರಂಪಣಿ ಮೀನುಗಾರರಿಗೆ ಹೇರಳ ಬೊಳಿಂಜಿರ್ ಮೀನು ದೊರಕಿತ್ತು.ಆದರೆ ಬುಧವಾರ ಹೆಜಮಾಡಿಯಲ್ಲಿ ದೊರೆತ ಬೊಳಿಂಜಿರ್ ಏವರೆಗಿನ ದಾಖಲೆಯಾಗಿದ್ದು,ಈವರೆಗೆ ಇಂತಹ ಪರಿಸ್ಥಿತಿ ಕಂಡಿರಲಿಲ್ಲ ಎಂದು ಹಿರಿಯ ಮೀನುಗಾರರೊಬ್ಬರು ಪ್ರತಿಕ್ರಿಯಿಸಿದ್ದು,ಈ ರೀತಿ ಮೀನು ಬಿದ್ದಲ್ಲಿ ಮೀನುಗಾರಿಗೆ ಯಾವುದೇ ಪ್ರಯೋಜನವಿಲ್ಲ.ಅಧಿಕ ಮೀನು ಬಿದ್ದಾಗಲೆಲ್ಲಾ ದರ ತೀರಾ ನಿಕೃಷ್ಟ ಮಟ್ಟಕ್ಕೆ ಇಳಿಯುತ್ತದೆ ಎಂದಿದ್ದಾರೆ.

ಅಂತೂ ಹೆಜಮಾಡಿ ಹಾಗೂ ಆಸುಪಾಸಿನ ಮತ್ಸ್ಯ ಪ್ರಿಯರು ಬುಧವಾರ ಹೆಜಮಾಡಿಯಲ್ಲಿ ಸಂಗ್ರಹಿಸಿದ ಬೊಳಿಂಜಿರ್‍ನಿಂದ ಫುಲ್ ಫಿದಾ ಆಗಿದ್ದು,ವಾರಕ್ಕೆ ಬೇಕಾದಷ್ಟು ಬೊಳಿಂಜಿರ್ ಸಂಗ್ರಹಿಸಿದ್ದಾರೆ.