ದೈವಸ್ಥಾನಗಳ ಸಾಂಪ್ರದಾಯಿಕ ಆಚರಣೆಗಳಲ್ಲಿ ಯುವ ಜನತೆ ಸಕ್ರಿಯವಾಗಿ ಪಾಲ್ಗೊಳ್ಳಬೇಕು-ಸಂಕಮಾರ್

ಪಡುಬಿದ್ರಿ: ದೈವಸ್ಥಾನಗಳ ಸಾಂಪ್ರದಾಯಿಕ ಆಚರಣೆಗಳಲ್ಲಿ ಯುವ ಜನರು ಸಕ್ರಿಯವಾಗಿ ಪಾಲ್ಗೊಂಡಾಗ ದೈವಸ್ಥಾನಗಳ ಸಾಂಪ್ರದಾಯಿಕ ಕಟ್ಟುಪಾಡುಗಳನ್ನು,ಆಚರಣೆಗಳನ್ನು ಮುಂದಿನ ಪೀಳಿಗೆಗೆ ಉಳಿಸಬಹುದು ಎಂದು ಜಾನಪದ ವಿದ್ವಾಂಸ,ಮಂಗಳೂರು ಸಂತ ಅಲೋಸಿಯಸ್ ಕಾಲೇಜಿನ ಉಪನ್ಯಾಸಕ ಡಾ.ಗಣೇಶ್ ಅಮೀನ್ ಸಂಕಮಾರ್ ಹೇಳಿದರು.

ಹೆಜಮಾಡಿ ಕುಜುಮಮ್ಮುನಟ್ಟಿ ಶ್ರೀ ಜಾರಂದಾಯ ದೈವಸ್ಥಾನದ ಸ್ವರ್ಣಮೊಗ ಸಮರ್ಪಣೆಯ ಧಾರ್ಮಿಕ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಮಂಗಳೂರು ನಮ್ಮ ಕುಡ್ಲ ತುಳು ವಾಹಿನಿಯ ನಿರ್ದೇಶಕ ಹರೀಶ್ ಬಿ.ಕರ್ಕೇರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಪುರೋಹಿತ ರಾಮಚಂದ್ರ ಭಟ್ ಸಮಾರಂಭವನ್ನು ಉದ್ಘಾಟಿಸಿದರು.

ಆದಿತ್ಯ ಮುಕ್ಕಾಲ್ದಿ ಖಂಡಿಗೆಬೀಡು, ಕೃಷ್ಣ ಸಾಮಾನಿ ಕರ್ಮಾರು ಬೀಡು, ಪಡುಹಿತ್ಲು ಶ್ರೀ ಜಾರಂದಾಯ ದೈವಸ್ಥಾನದ ಗುತ್ತಿನಾರ್ ಸುಧಾಕರ ಶೆಟ್ಟಿ, ಹೆಜಮಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಅರ್ಚಕ ಗುರುರಾಜ್ ಪೂಜಾರಿ ಮುಖ್ಯ ಅತಿಥಿಗಳಾಗಿದ್ದರು.
ಅರುಣ್ ಶೆಟ್ಟಿ ಬಾರಗ ಪಡುಮನೆ, ಪಡುಹಿತ್ಲು ಶ್ರೀ ಜಾರಂದಾಯ ದೈವಸ್ಥಾನದ ಅರ್ಚಕ ಸುಧಾಕರ ಪೂಜಾರಿ, ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷ ಲೋಕೇಶ್ ಅಮೀನ್, ಹೆಜಮಾಡಿ ಪಡುಕರೆ ಬಿಲ್ಲವ ಸಂಘದ ಉಪಾಧ್ಯಕ್ಷ ನವೀನ್ ಕುಮಾರ್, ಪಡುಕರೆ ಬಿಲ್ಲವ ಸಭಾದ ಕಾರ್ಯದರ್ಶಿ ಮಾಧವ ಸನಿಲ್ ಉಪಸ್ಥಿತರಿದ್ದರು.

ಈ ಸಂದರ್ಭ ದೈವಸ್ಥಾನದಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪೂಜಾರಿಯವರು, ಅರ್ಚಕರು, ನರ್ತನ ಸೇವಕರು ಮತ್ತು ಕ್ಷೇತ್ರದ ಸೇವಕರನ್ನು ಸನ್ಮಾನಿಸಲಾಯಿತು.

ಸಂಪತ್ ಸನಿಲ್ ಪ್ರಸ್ತಾವಿಸಿದರು.ಮನೋಹರ ಹೆಜ್ಮಾಡಿ ಕಾರ್ಯರಕ್ರಮ ನಿರ್ವಹಿಸಿದರು.ರಮೇಶ್ ಸುವರ್ಣ ವಂದಿಸಿದರು.