ಹೆಜಮಾಡಿ ಏಳೂರು ಮೊಗವೀರ ಮಹಾಸಭಾ ವತಿಯಿಂದ ಸಮುದ್ರ ಪೂಜೆ

ಪಡುಬಿದ್ರಿ ಸಮೀಪದ ಹೆಜಮಾಡಿ ಅಮವಾಸ್ಯೆ ಕರಿಯ ಬಳಿ ಹೆಜಮಾಡಿ ಏಳೂರು ಮೊಗವೀರ ಮಹಾಸಭಾ ವತಿಯಿಂದ ಸಮುದ್ರ ಪೂಜೆ ನೆರವೇರಿಸಲಾಯಿತು. ಮಟ್ಟು ಶ್ರೀ ಪಂಡುರಂಗ ಭಜನಾ ಮಂದಿರದಿಂದ ಭಜನಾ ಸಂಕೀರ್ಥನೆಯೊಂದಿಗೆ ಆಗಮಿಸಿ ಸಾಮೂಹಿಕ ಪ್ರಾರ್ಥನೆ ಬಳಿಕ ಸಮುದ್ರಕ್ಕೆ ಹಾಲು, ತೆಂಗಿನಕಾಯಿ, ಫಲಪುಷ್ಪ ಸಮರ್ಪಿಸಿ ಮತ್ಸ್ಯ ಸಮೃದ್ಧಿಗಾಗಿ ಪ್ರಾರ್ಥಿಸಲಾಯಿತು. ಏಳೂರು ಮೊಗವೀರ ಸಭಾ ಅಧ್ಯಕ್ಷ ಸದಾಶಿವ ಕೋಟ್ಯಾನ್, ರವಿ ಎಚ್.ಕುಂದರ್ ಹೆಜಮಾಡಿ, ಕುಮಾರ್ ಎಸ್.ಕುಂದರ್ ಕನ್ನಂಗಾರು, ಲೋಕನಾಥ ಗುರಿಕಾರ ಗುಂಡಿ, ಧನಂಜಯ ಡಿ.ಪುತ್ರನ್ ಮಟ್ಟು, ಸುಧಾಕರ ಕೋಟ್ಯಾನ್ ಪಲಿಮಾರು, ಗಣೇಶ್ ಕೋಟ್ಯಾನ್ ಆಚೆಮಟ್ಟು, ಗಂಗಾಧರ ಗುರಿಕಾರ ಸಣ್ಣಗುಂಡಿ, ಹಿರಿಯರಾದ ನಾರಾಯಣ ಮೆಂಡನ್, ಶರಣ್ ಮಟ್ಟು, ವಿಜಯ ಕೋಟ್ಯಾನ್, ಪುಷ್ಪಾವತಿ ಮೆಂಡನ್, ಬಾಲಕೃಷ್ಣ ಸುವರ್ಣ, ಸದಾಶಿವ ವಿ.ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.