Hejamady Fisheries Harbour Project to be implemented soon – Minister Venkata Rao Nadagouda

Padubidri, July 18th 2018: Minister for Animal Husbandry and Fisheries Venkata Rao Nadagouda said that Hejamady Fisheries Harbour project will be implemented soon. He gave this information after visiting the project area and inspecting the blue print of the project in the presence of department officials, fishermen and people’s representatives.

Full news in Kannada …..

ಹೆಜಮಾಡಿ ಮೀನುಗಾರಿಕಾ ಬಂದರು ಯೋಜನೆ ಶೀಘ್ರ ಜಾರಿ-ವೆಂಕಟರಾವ್ ನಾಡಗೌಡ

ಬಹುನಿರೀಕ್ಷಿತ ಹೆಜಮಾಡಿ ಮೀನುಗಾರಿಕಾ ಬಂದರು ಯೋಜನೆಯ ಬಗ್ಗೆ ಅಧಿಕಾರಿಗಳೊಂದಿಗೆ ಸಮಗ್ರ ವಿಶ್ಲೇಸಿದ್ದು ಶೀಘ್ರ ಜಾರಿಯಾಗುವುದಾಗಿ ಮೀನುಗಾರಿಕೆ ಮತ್ತು ಪಶು ಸಂಗೋಪನೆ ಸಚಿವ ವೆಂಕಟರಾವ್ ನಾಡಗೌಡರು ಹೇಳಿದರು.
ಬುಧವಾರ ಮೀನುಗಾರಿಕೆ ಮತ್ತು ಬಂದರು ಇಲಾಖಾಧಿಕಾರಿಗಳು,ಮೀನುಗಾರರು,ಜನಪ್ರತಿನಿಧಿಗಳ ಸಮ್ಮುಖ ಹೆಜಮಾಡಿ ಬಂದರು ಪ್ರದೇಶಕ್ಕೆ ಭೇಟಿ ನೀಟಿ ಯೋಜನಾ ನೀಲಿ ನಕಾಶೆಯನ್ನು ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.
ನಿಮ್ಮ ನಿರೀಕ್ಷೆಯನ್ನು ಪೂರೈಸುತ್ತೇನೆ ಎಂದು ಅಲ್ಲಿ ಸೇರಿದ ಮೀನುಗಾರರಿಗೆ ಭರವಸೆ ನೀಡಿದ ಅವರು,ಈ ಬಗ್ಗೆ ಕರಾವಳಿ ಶಾಸಕರು ವಿಧಾನಸಭೆಯಲ್ಲಿ ವಿಷಯ ಪ್ರಸ್ತಾವಿಸಿದ್ದು,ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಯೋಜನೆ ಜಾರಿಯ ಉದ್ದೇಶದಿಂದಲೇ ಇಂದು ಭೇಟಿ ನೀಡಿರುವುದಾಗಿ ಹೇಳಿದರು.

ಹೆಜಮಾಡಿ ಯಾರ್ಡ್‍ನಿಂದ ಬಂದರಿಗೆ ತೆರಳುವ ಮೀನುಗಾರಿಕಾ ರಸ್ತೆ ನಾದುರಸ್ತಿಯಲ್ಲಿದ್ದ ಕಾರಣ ಯಾರ್ಡ್ ಬಳಿಯೇ ಮೀನುಗಾರರೊಂದಿಗೆ ಸಮಾಲೋಚಿಸಿದರು.

ಹೆಜಮಾಡಿ ಬಂದರು ಯೋಜನೆಯಿಂದ ಈ ಭಾಗದ ಮೀನುಗಾರರಿಗೆ ಮಾತ್ರವಲ್ಲದೆ ಹೆಚ್ಚು ಒತ್ತಡದ ಮಲ್ಪೆ ಮತ್ತು ಮಂಗಳೂರು ಬಂದರಿನ ಮೀನುಗಾರರಿಗೂ ಪ್ರಯೋಜನವಾಗಲಿದ್ದು,ಯೋಜನೆ ಜಾರಿಗೆ ಸರಕಾರ ಬದ್ಧವಾಗಿದೆ ಎಂದ ಅವರು,ನೂತನ ತಂತ್ರಜ್ಞಾನ ಬಳಸಲು ಉದ್ದೇಶಿಸಲಾಗಿದೆ ಎಂದರು.

ಈ ಬಾರಿಯ ಬಜೆಟ್‍ನಲ್ಲಿ ಯೋಜನೆಗೆ ಅನುದಾನ ಇಟ್ಟಿಲ್ಲ ಎಂಬ ವಾದ ಸರಿಯಲ್ಲ.ಸಿದ್ಧರಾಮಯ್ಯ ಸರಕಾರದ ಬಜೆಟ್‍ನಲ್ಲಿ ವಿಂಗಡಿಸಿದ ಅನುದಾನ ಊರ್ಜಿತದಲ್ಲಿದೆ.ಹಾಗಾಗಿ ಯೋಜನೆಯಲ್ಲಿ ರಾಜ್ಯ ಸರಕಾರದ ಅನುದಾನ ಶೇ.50 ವಿನಿಯೋಗಿಸಲು ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಬದ್ಧವಾಗಿದೆ ಎಂದವರು ಹೇಳಿದರು.
ಗೋವಾ ಮಾದರಿಯಲ್ಲಿ ತೇಲುವ ಜೆಟ್ಟಿ ಸಹಿತ ಯೋಜನೆಯಲ್ಲಿ ಉನ್ನತ ತಂತ್ರಜ್ಞಾನಕ್ಕೆ ಒತ್ತುನೀಡಲಾಗಿದೆ.ಈ ಬಗ್ಗೆ ಅಧಿಕಾರಿಗಳ ತಂಡ ಗೋವಾಕ್ಕೆ ತೆರಳಿ ಪರಿಶೀಲನೆ ನಡೆಸಲಿದೆ.ಇದೀಗ ಯೋಜನೆ ಟೆಂಡರ್ ಹಂತದಲ್ಲಿದ್ದು,ಶೀಘ್ರ ಜಾರಿಗೊಳ್ಳಲಿದೆ ಎಂದವರು ಹೇಳಿದರು.

ಸೀಮೆಎಣ್ಣೆ ಸಮಸ್ಯೆಗೆ ಕೇಂದ್ರಕ್ಕೆ ಮನವಿ:ಮೀನುಗಾರರಿಗೆ ಸಿಗುವ ಸೀಮೆಎಣ್ಣೆ ಬಗ್ಗೆ ಕೇಂದ್ರ ಸರಕಾರಕ್ಕೆ ಮನವಿ ಮಾಡಲು ನಿರ್ಧರಿಸಲಾಗಿದೆ ಎಂದ ಅವರು,ಈ ಬಗ್ಗೆ ಮೀನುಗಾರರು ಗೊಂದಲಪಡುವ ಅವಶ್ಯಕತೆಯಿಲ್ಲ ಎಂದರು.
ಮೀನುಗಾರ ಮಹಿಳೆಯರಿಗೂ ಕಡಿಮೆ ಬಡ್ಡಿ ದರದ ಸಾಲ:ರೈತರಿಗೆ ನೀಡುವ ಶೇ.0 ದರದಲ್ಲಿ ಬಡ ಮೀನುಗಾರ ಮಹಿಳೆಯರಿಗೂ 50ಸಾವಿರದಷ್ಟು ಸಾಲ ನೀಡಲು ಸರಕಾರ ನಿರ್ಧರಿಸಿದೆ ಎಂದ ಅವರು,ಸಾಲ ಮನ್ನಾ ಯೋಜನೆಯ ಎರಡನೇ ಹಂತದಲ್ಲಿ ಮೀನುಗಾರ ಮಹಿಳೆಯರ ಸಾಲಮನ್ನಾಕ್ಕೂ ನಿರ್ಧರಿಸಲಾಗಿದೆ ಎಂದರು.

ಇದೇ ವೇಳೆ ಅವರು ಹೆಜಮಾಡಿ ಬಂದರು ಯೋಜನೆಯ ನೀಲಿ ನಕಾಶೆಯನ್ನು ಪರಿಶೀಲನೆ ನಡೆಸಿದರು.ಇಲಾಖಾಧಿಕಾರಿಗಳು ಸಚಿವರಿಗೆ ಯೋಜನೆಯ ಬಗ್ಗೆ ಸಮಗ್ರ ವಿವರ ನೀಡಿದರು.

ಪಶು ಸಂಗೋಪನಾ ಇಲಾಖಾ ನೇಮಕಾತಿ: ಪಶು ಸಂಗೋಪನ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಬಗ್ಗೆ ಕೇಳಲಾದ ಪ್ರಶ್ನೆಗೆ,ಅದು ಒಂದೇ ಅಲ್ಲ.ಎಲ್ಲಾ ಇಲಾಖೆಗಳಲ್ಲೂ ಸಿಬ್ಬಂದಿಗಳ ಕೊರತೆಯಿದೆ.ಆದ್ಯತೆ ಮೇರೆಗೆ ಎಲ್ಲಾ ಇಲಾಖೆಗಳಲ್ಲಿ ನೇಮಕಾತಿ ನಡೆಯಲಿದೆ.ಪಶುಸಂಗೋಪನಾ ಇಲಾಖೆಯಲ್ಲಿ ಸುಮಾರು 1500 ಸಿಬ್ಬಂದಿಗಳ ನೇಮಕಕ್ಕೆ ಸರಕಾರ ನಿರ್ಧರಿಸಿದೆ.ಅದೇ ರೀತಿ ಇಲಾಖೆಯಿಂದ ಬೇರೆ ಇಲಾಖೆಗೆ ತೆರಳಿದವರನ್ನು ಮರಳ ಕರೆತರಲು ಚಿಂತನೆ ನಡೆಸಲಾಗಿದೆ ಎಂದರು.
ಕಾಪು ಶಾಸಕ ಲಾಲಾಜಿ ಆರ್.ಮೆಂಡನ್,ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲಾಜಿ ಯೋಗೀಶ್ ಶೆಟ್ಟಿ,ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ,ಹೆಜಮಾಡಿ ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್,ಉಪಾಧ್ಯಕ್ಷ ಸುಧಾಕರ ಕರ್ಕೇರ,ಜಿಪಂ ಸದಸ್ಯ ಶಶಿಕಾಂತ್ ಪಡುಬಿದ್ರಿ,ತಾಪಂ ಸದಸ್ಯೆ ರೇಣುಕಾ ಪುತ್ರನ್,ಕಾಪು ಬಿಜೆಪಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು,ಜೆಡಿಎಸ್ ಅಧ್ಯಕ್ಷ ಸುಧಾಕರ ಶೆಟ್ಟಿ,ಮುಖಂಡರುಗಳಾದ ಹರೀಶ್ ಎನ್.ಪುತ್ರನ್,ಗಂಗಾಧರ ಸುವರ್ಣ ಎರ್ಮಾಳು,ರತ್ನಾಕರ ಸುವರ್ಣ,ಜೀವನ್ ಕೆ.ಶೆಟ್ಟಿ,ಇಕ್ಬಾಲ್ ಅಹ್ಮದ್,ಪ್ರಕಾಶ್ ಕಾಂಚನ್,ವಾಸುದೇವ ರಾವ್,ಇಸ್ಮಾಯಿಲ್ ಪಲಿಮಾರು,ವೆಂಕಟೇಶ್,ಮೀನುಗಾರ ಮುಖಂಡರುಗಳಾದ ವಿಜಯ ಬಂಗೇರ,ಸದಾಶಿವ ಕೋಟ್ಯಾನ್,ಗುರುವಪ್ಪ ಕೋಟ್ಯಾನ್,ವಿನೋದ್ ಕೋಟ್ಯಾನ್,ಹರಿಶ್ಚಂದ್ರ ಮೆಂಡನ್,ಕರುಣಾಕರ ಕರ್ಕೇರ,ರಾಜು ಕರ್ಕೇರ,ಏಕನಾಥ ಕರ್ಕೇರ,ಮೀನುಗಾರಿಕಾ ಇಲಾಖಾ ನಿರ್ದೇಶಕ ವೀರಪ್ಪ ಗೌಡ,ಜಂಟಿ ನಿರ್ದೇಶಕ ಎಮ್.ಎಲ್.ದೊಡ್ಡಮನಿ,ಉಪನಿರ್ದೇಶಕ ಪಾಶ್ರ್ವನಾಥ,ಸಹಾಯಕ ನಿರ್ದೇಶಕ ಕಿರಣ್,ಮೀನುಗಾರಿಕಾ ಫೆಡರೇಶನ್ ಎಮ್‍ಡಿ ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *