Dr. Shekhar M. Salian Yermal passes away

Padubidri, Dec. 19th, 2017:  Renowned doctor Shekhar M. Salian (78) from Yermal passed away in a private hospital in Mangalore on Tuesday morning (Dec. 19th).  He had started his medical career in Padubidri after graduating from Mysore medical college .  He has been working in Muscat for the last 40 years and had founded Muscat Tulu Koota and Muscat Mogaveers Organisation.  He was felicitated a number of times for his services to NRI Kannadigas and Tuluvas.  He is survived by his wife, son, 5 brothers and a sister.

 

ನಿಧನ: ಡಾ.ಶೇಖರ್ ಎಮ್.ಸಾಲ್ಯಾನ್ ಎರ್ಮಾಳು

ಪಡುಬಿದ್ರಿ: ಮಸ್ಕತ್‍ನ ರುವಿಯಲ್ಲಿ ಕಳೆದ 40 ವರ್ಷಗಳಿಂದ ಪ್ರಸಿದ್ಧ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಎರ್ಮಾಳು ಬಡಾ ಶ್ರೀ ಮಾತಾ ವಾಸಿ ಡಾ.ಶೇಖರ್ ಎಮ್.ಸಾಲ್ಯಾನ್(78) ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಮುಂಜಾನೆ ನಿಧನರಾದರು.

ಮಸ್ಕತ್ ತುಳು ಕೂಟ ಹಾಗೂ ಮಸ್ಕತ್ ಮೊಗವೀರ್ಸ್ ಸಂಸ್ಥೆಗಳ ಸ್ಥಾಪಕರಾಗಿ,ಕನ್ನಡ ಸಂಘದ ಪದಾಧಿಕಾರಿಯಾಗಿ ಕಳೆದ 40 ವರ್ಷಗಳಿಂದ ಅವರು ಅನಿವಾಸಿ ಕನ್ನಡಿಗರು ಹಾಗೂ ತುಳುವರಿಗಾಗಿ ಗಣನೀಯ ಸೇವೆ ಸಲ್ಲಿಸಿದ್ದರು.ಅಲ್ಲದೆ ಅಲ್ಲಿ ಹಲವು ಸಂಘಸಂಸ್ಥೆಗಳಿಂದ ಹಲವಾರು ಬಾರಿ ಸನ್ಮಾನಿಸಲ್ಪಟ್ಟಿದ್ದರು.

ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದ ಬಳಿಕ ಆರಂಭದಲ್ಲಿ ಪಡುಬಿದ್ರಿಯಲ್ಲಿ ವೈದ್ಯಕೀಯ ಸೇವೆ ಆರಂಭಿಸಿದ್ದ ಅವರು ನೂರಾರು ಅಶಕ್ತರಿಗೆ ಧರ್ಮಾರ್ಥ ಸೇವೆ ನೀಡಿದ ಖ್ಯಾತಿ ಗಳಿಸಿದ್ದರು.

ಕೈಪುಂಜಾಲು ದಿ.ಮಂಜುನಾಥ ಜೆ.ಶ್ರೀಯಾನ್‍ರವರ ಪುತ್ರರಾಗಿರುವ ಅವರಿಗೆ ಪತ್ನಿ,ಪುತ್ರ,5 ಸಹೋದರರು,ಓರ್ವ ಸಹೋದರಿ ಇದ್ದಾರೆ.ಮಂಗಳವಾರ ಸಂಜೆ ಎರ್ಮಾಳುಬಡಾ ಸ್ವಗೃಹದಲ್ಲಿ ಅವರ ಅಂತ್ಯಕ್ರಿಯೆ ನಡೆಯಿತು.

 

 

Leave a Reply

Your email address will not be published. Required fields are marked *