ಜಿಲ್ಲಾ ಮಟ್ಟದ ಶಾಲಾ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟ

ಮಣೂರು ಸರಕಾರಿ, ಪಡುಬಿದ್ರಿ ಸಾಗರ್, ಮೂಳೂರು ಅಲ್-ಇಹ್ಸಾನ್ ಮತ್ತು ಪಡುಬಿದ್ರಿ ಲಯನ್ಸ್‍ಗೆ ಪ್ರಶಸ್ತಿ

ಪಡುಬಿದ್ರಿ: ಪಡುಬಿದ್ರಿಯ ಕಡಲ ತಡಿಯ ಸಾಗರ್ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ-ಪ್ರೌಢ ಶಾಲಾ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಮಣೂರು ಸರಕಾರಿ ಪ್ರೌಢ ಶಾಲೆ, ಪಡುಬಿದ್ರಿಯ ಸಾಗರ್ ವಿದ್ಯಾ ಮಂದಿರ ಶಾಲೆ, ಮೂಳೂರು ಅಲ್-ಇಹ್ಸಾನ್ ಶಾಲೆ ಮತ್ತು ಪಡುಬಿದ್ರಿ ಲಯನ್ಸ್ ಶಾಲೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆಯಿತು.

ಉಡುಪಿ ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಮತ್ತು ಸಾಗರ್ ವಿದ್ಯಾ ಮಂದಿರ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಸಾಗರ್ ವಿದ್ಯಾ ಮಂದಿರ ಶಾಲೆಯಲ್ಲಿ ಪ್ರೋ ಕಬಡ್ಡಿ ಮಾದರಿಯ ಮ್ಯಾಟ್ ಅಂಗಣದಲ್ಲಿ ರೋಚಕ ಪಂದ್ಯಾಟ ನಡೆಯಿತು.

ಬಹುಮಾನ ವಿತರಣೆ: ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ದಮಯಂತಿ ವಿ.ಅಮೀನ್, ಶಾಲಾ ಸಂಚಾಲಕ ಸುಕುಮಾರ್ ಶ್ರೀಯಾನ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಧುಕರ ಎಸ್.,ದೈಹಿಕ ಪರಿವೀಕ್ಷಣಾಧಿಕಾರಿಗಳಾದ ಭುಜಂಗ ಶೆಟ್ಟಿ, ದತ್ತಾತ್ರೇಯ ನಾಯಕ್, ಚಂದ್ರಶೇಖರ್ ಶೆಟ್ಟಿ, ಸಿದ್ದಪ್ಪ ಎಸ್, ಸತ್ಯನಾರಾಯಣ, ಶಾಲಾ ಮುಖ್ಯೋಪಾಧ್ಯಾಯಿನಿ ಪದ್ಮಶ್ರೀ ಸುರೇಶ್ ರಾವ್, ರಕ್ಷಕರ ಸಂಘದ ಅಧ್ಯಕ್ಷ ಗಣೇಶ್ ಕೋಟ್ಯಾನ್, ದಾನಿಗಳಾದ ಗಾಯತ್ರಿ ರಾವ್, ಹರೀಶ್ ಪುತ್ರನ್, ದಿನೇಶ್ ಪೂಜಾರಿ, ಅಶೋಕ್ ಸಾಲ್ಯಾನ್, ಪ್ರಶಾಂತ್ ಪುತ್ರನ್, ಯತಿನ್ ಬಂಗೇರ, ಸತೀಶ್ ಸುವರ್ಣ, ನಿರ್ಮಲಾ ಸುಕುಮಾರ್, ಶುಭಾ ದಿನೇಶ್, ಅನಸೂಯಾ ಸಾಲ್ಯಾನ್ ಬಹುಮಾನ ವಿತರಿಸಿದರು.
ವಿನುತಾ ಶೆಟ್ಟಿ ನಿರ್ವಹಿಸಿ, ಅಕ್ಷತಾ ವಂದಿಸಿದರು.

ಫಲಿತಾಂಶ:


17ರ ವಯೋಮಿತಿಯ ಬಾಲಕರ ವಿಭಾಗ: ಪ್ರಥಮ-ಬ್ರಹ್ಮಾವರ ವಲಯದ ಮಣೂರು ಸರಕಾರಿ ಪ್ರೌಢ ಶಾಲೆ, ದ್ವಿತೀಯ-ಬೈಂದೂರು ವಲಯದ ಬ್ರಹ್ಮಾವರ ಸರಕಾರಿ ಪದವಿ ಪೂರ್ವ ಕಾಲೇಜು,
ಉತ್ತಮ ಹಿಡಿತಗಾರ-ಬ್ರಹ್ಮಾವರ ವಲಯದ ಸಚಿನ್, ಉತ್ತಮ ದಾಳಿಗಾರ-ಬೈಂದೂರು ವಲಯದ ಅಮಿತ್, ಆಲ್‍ರೌಂಡರ್-ಬ್ರಹ್ಮಾವರ ವಲಯದ ಸಾತ್ವಿಕ್.

17ರ ವಯೋಮಿತಿಯ ಬಾಲಕಿಯರ ವಿಭಾಗ: ಪ್ರಥಮ-ಉಡುಪಿ ವಲಯದ ಪಡುಬಿದ್ರಿ ಸಾಗರ್ ವಿದ್ಯಾ ಮಂದಿರ ಪ್ರೌಢ ಶಾಲೆ, ದ್ವಿತೀಯ-ಕಾರ್ಕಳ ವಲಯದ ಮುಂಡ್ಕೂರು ವಿದ್ಯಾವರ್ಧಕ ಪ್ರೌಢ ಶಾಲೆ,
ಉತ್ತಮ ಹಿಡಿತಗಾರ್ತಿ-ಉಡುಪಿ ವಲಯದ ಚೈತಾಲಿ, ಉತ್ತಮ ದಾಳಿಗಾರ್ತಿ-ಕಾರ್ಕಳ ವಲಯದ ಹರಿಣಾಕ್ಷಿ, ಆಲ್‍ರೌಂಡರ್-ಉಡುಪಿ ವಲಯದ ಉನ್ನತಿ ಎಚ್.ಪುತ್ರನ್ ಪಡುಬಿದ್ರಿ.

14ರ ವಯೋಮಿತಿಯ ಬಾಲಕರ ವಿಭಾಗ: ಪ್ರಥಮ-ಉಡುಪಿ ವಲಯದ ಮೂಳೂರು ಅಲ್-ಇಹ್ಸಾನ್ ಪ್ರಾಥಮಿಕ ಶಾಲೆ, ದ್ವಿತೀಯ-ಬೈಂದೂರು ವಲಯದ ಮಯ್ಯಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕ ಶಾಲೆ,
ಉತ್ತಮ ಹಿಡಿತಗಾರ-ಬೈಂದೂರು ವಲಯದ ಅಕ್ಷಯ್, ಉತ್ತಮ ದಾಳಿಗಾರ-ಉಡುಪಿ ವಲಯದ ರಾಶಿಕ್, ಆಲ್‍ರೌಂಡರ್-ಉಡುಪಿ ವಲಯದ ಶಹೀಮ್.

14ರ ವಯೋಮಿತಿಯ ಬಾಲಕಿಯರ ವಿಭಾಗ: ಪ್ರಥಮ-ಉಡುಪಿ ವಲಯದ ಪಡುಬಿದ್ರಿ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆ, ದ್ವಿತೀಯ-ಕಾರ್ಕಳ ವಲಯದ ಬಜಗೋಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ,
ಉತ್ತಮ ಹಿಡಿತಗಾರ್ತಿ-ಉಡುಪಿ ವಲಯದ ಸ್ನೇಹಾ, ಉತ್ತಮ ದಾಳಿಗಾರ್ತಿ-ಉಡುಪಿ ವಲಯದ ಗಣ್ಯಾ, ಆಲ್‍ರೌಂಡರ್ ಕಾರ್ಕಳ ವಲಯದ ವಿಶ್ಮಿತಾ.