Padubidri beach to receive Blue Flag Certification

News & pics by: Hareesh Kumar Hejmady

Padubidri beach to receive Blue Flag certificationPadubidri, June 2nd, 2018: Association of Coastal Tourism president Manohar K. Shetty announced that Padubidri beach is on the verge of receiving Blue Flag certification and Rs 8 crores grant has been received for the modernisation and development of the beach. Blue Flag certification is given to the beaches meeting stringest standards and Padubidri beach will be the only beach in Karnataka and among the 13 such beaches in India to receive this certification.

He was speaking at the inaugural function of World Environment Day held at Padubidri beach on Saturday, jointly organised by Udupi district administraion, Central department of environment, forest and climate change, Mangalore fisheries college, C Com, Department of tourism, and Association of Coastal tourism.

Mr Shetty urged the district administration to pay more attnetion to Kamini river’s cleanliness. Udupi district tourism department’s deputy director Anita Bhaskar called upon people to take a pledge to reduce the usage of plastic and save beaches. Mangalore fisheries college principal Dr Laxmipati said that the plastic should banned completely. Otherwise it will pose danger to marine life, animals and birds. C com volunteer Ramji Varma said that people dependent on sea for their livelihood can increase their earning by keeping the beaches clean.

Udupi district youth empowerment and sports department’s director Dr. Roshan Kumar Shetty, Zilla panchayat standing committee president Shashikanth Padubidri and Padubidri grama panchayat president Damayanti V. Amin also spoke on the occasion.
C com’s Modalaiyarasan, ACT’s Principle secretary Gourav Shenava, Abhijit, Taluk panchayat member Neeta Gururaj, PU education department’s Vijayalakshmi Nayak, Coastal Security force ASI Bhaskar, H.C., Uday R.B., Amit, presidents of various fishermen’s organisations Sukumar Shriyan, Leeladhar Salian, Shekhar Salian, Ganesh Kotian, Vishwas V Amin, Lions club president Maxim M D’Souza, JCI president Makarand, Grama panchayat members Ashok Salian, Sevanti Sadashiv, Shashikala, Sagar Vidya Mandir English medium school students, Padubidri Govt. PU college students and others were present.

Beach cleaning programme followed by collecting plastic from the beach and the nearby houses. A heap of fishing nets washed ashore was dragged away and disposed off.

ಪಡುಬಿದ್ರಿ ಬೀಚ್‍ಗೆ ಬ್ಲೂ ಫ್ಲ್ಯಾಗ್ ಮಾನ್ಯತೆ:
ಸಮಗ್ರ ಅಭಿವೃದ್ಧಿಗೆ 8 ಕೋಟಿ ರೂ.ಅನುದಾನ-ಮನೋಹರ ಶೆಟ್ಟಿ
ಪರಿಸರ ದಿನಾಚರಣೆ: ಪ್ಲಾಸ್ಟಿಕ್ ಬಳಕೆ ಹಿಮ್ಮೆಟ್ಟಿಸಿ ಘೋಷವಾಕ್ಯ
ವಿಕ ಸುದ್ದಿಲೋಕ ಪಡುಬಿದ್ರಿ
ವಿಶ್ವ ಭೂಪಟದಲ್ಲಿ ಗುರುತಿಸಿಕೊಂಡಿರುವ ಪಡುಬಿದ್ರಿ ಬೀಚ್‍ಗೆ ಬ್ಲೂ ಫ್ಲ್ಯಾಗ್ ಸರ್ಟಿಫಿಕೇಟ್ ಮಾನ್ಯತೆ ದೊರೆಯುವ ಹಂತದಲ್ಲಿದ್ದು,ಅತ್ಯಾಧುನಿಕವಾಗಿ ಅಭಿವೃದ್ಧಿಪಡಿಸಲು 8 ಕೋಟಿ ರೂ ಅನುದಾನ ದೊರಕಿದೆ ಎಂದು ಎಸೋಸಿಯೇಶನ್ ಆಫ್ ಕೋಸ್ಟಲ್ ಟೂರಿಸಂ ಅಧ್ಯಕ್ಷ ಮನೋಹರ ಕೆ.ಶೆಟ್ಟಿ ಹೇಳಿದರು.
ಅವರು ಜೂ. 2ರಂದು ಈಗಾಗಲೇ ಭಾರತದ ವಿವಿಧ ರಾಜ್ಯಗಳ ಹಾಗೂ ಕರ್ನಾಟಕದ ಏಕೈಕ ನೀಲ ಪತಾಕೆ ಮಾನ್ಯತೆ ಪಡೆಯಲಿರುವ 13 ಬೀಚ್‍ಗಳಲ್ಲಿ ಒಂದಾಗಿರುವ ಪಡುಬಿದ್ರಿ ಬೀಚ್‍ನಲ್ಲಿ ಉಡುಪಿ ಜಿಲ್ಲಾಡಳಿತ, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಇಲಾಖೆ, ಮಂಗಳೂರಿನ ಮೀನುಗಾರಿಕಾ ಕಾಲೇಜು, ಸಿ ಕಾಮ್, ಪ್ರವಾಸೋದ್ಯಮ ಇಲಾಖೆ ಹಾಗೂ ಎಸೋಸಿಯೇಶನ್ ಆಫ್ ಕೋಸ್ಟಲ್ ಟೂರಿಸಂಗಳ ಜಂಟಿ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪಡುಬಿದ್ರಿ ಕಾಮಿನಿ ಹೊಳೆ ಸ್ವಚ್ಛತೆಗೆ ಹೆಚ್ಚು ನಿಗಾ ವಹಿಸಬೇಕಾಗಿದೆ.ಈ ನಿಟ್ಟಿನಲ್ಲಿ ಸ್ಥಳೀಯಾಡಳಿತ ಮುತುವರ್ಜಿ ವಹಿಸಬೇಕೆಂದರು.
ನಮ್ಮ ದೇಶದ ಕರಾವಳಿಯು ಹಲವಾರು ಜನರಿಗೆ ಮೂಲಾಧಾರವಾಗಿಯೂ, ಜೀವನಾಧಾರವಾಗಿಯೂ ಇದೆ. ಅಂತಹಾ ಕರಾವಳಿಯನ್ನು `ಪ್ಲಾಸ್ಟಿಕ್ ಬಳಕೆಯನ್ನು ಹಿಮ್ಮೆಟ್ಟಿಸಿ’ ಅದರ ಬಳಕೆಯನ್ನು ಕಡಿತಗೊಳಿಸುವ ಮೂಲಕ ಉಳಿಸಿಕೊಳ್ಳೋಣ. ನನ್ನ ಬೀಚನ್ನು ನಾನು ಉಳಿಸಿಕೊಳ್ಳುವುದಾಗಿ ಪಣತೊಟ್ಟು ಮುಂದುವರಿಯೋಣ ಎಂದು ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖಾ ಸಹಾಯಕ ನಿರ್ದೇಶಕಿ ಅನಿತಾ ಭಾಸ್ಕರ್ ಹೇಳಿದರು.
ಮೀನುಗಾರಿಕಾ ಕಾಲೇಜಿನ ಪ್ರಾಂಶುಪಾಲ ಡಾ| ಲಕ್ಷ್ಮೀಪತಿ ಮಾತನಾಡಿ ಪ್ಲಾಸ್ಟಿಕನ್ನು ಪೂರ್ಣ ನಿಷೇಧಿಸಬೇಕು. ಇಲ್ಲದಿದ್ದಲ್ಲಿ ಸಮುದ್ರವನ್ನು ಸೇರುವ ಇದು ಜಲಚರ ಪ್ರಾಣಿ, ಪಕ್ಷಿಗಳಿಗೆ ಅನಾಹುತವನ್ನು ತಂದೊಡ್ಡುತ್ತದೆ ಎಂದರು. ಸಿ ಕಾಮ್ ಸ್ವಯಂ ಸೇವಕ ರಾಮ್‍ಜಿ ವರ್ಮ ಬೀಚನ್ನು ಶುಚಿತ್ವದಲ್ಲಿರಿಸುವುದರಿಂದ ಜನತೆಗೆ ಅದರಿಂದ ಜೀವನಾಧಾರವಾಗಿ ಸಂಪಾದನೆಯನ್ನೂ ಹೆಚ್ಚಿಸಬಲ್ಲದು ಎಂದರು.
ಸಮಾರಂಭದಲ್ಲಿ ಭಾಗವಹಿಸಿದ ಉಡುಪಿ ಜಿಲ್ಲಾ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ಜಿ. ಪಂ. ಸ್ಥಾಯಿ ಸಮಿತಿಯ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ, ಪಡುಬಿದ್ರಿ ಗ್ರಾ. ಪಂ. ಅಧ್ಯಕ್ಷೆ ದಮಯಂತಿ ಅಮೀನ್ ಮಾತನಾಡಿದರು.
ಸಿ ಕಾಮ್‍ನ ಮೊದಲೈಯರಸನ್, ಆ್ಯಕ್ಟ್‍ನ ಪ್ರಧಾನ ಕಾರ್ಯದರ್ಶಿ ಗೌರವ ಶೇಣವ, ಅಭಿಜಿತ್, ತಾ. ಪಂ. ಸದಸ್ಯೆ ನೀತಾ ಗುರುರಾಜ್, ಪ. ಪೂ. ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ವಿಜಯಲಕ್ಷ್ಮೀ ನಾಯಕ್, ಕರಾವಳಿ ಕಾವಲು ಪಡೆಯ ಎಎಸ್‍ಐ ಭಾಸ್ಕರ್, ಎಚ್. ಸಿ. ಉದಯ್ ಆರ್. ಬಿ, ಅಮಿತ್, ಮೀನುಗಾರ ಸಮುದಾಯದ ವಿವಿಧ ಸಂಘಟನೆಗಳ ಅಧ್ಯಕ್ಷರಾದ ಸುಕುಮಾರ ಶ್ರೀಯಾನ್,ಲೀಲಾಧರ ಸಾಲ್ಯಾನ್, ಶೇಖರ್ ಸಾಲ್ಯಾನ್, ಗಣೇಶ್ ಕೋಟ್ಯಾನ್, ವಿಶ್ವಾಸ್ ಅಮೀನ್, ಜೇಸಿಐ ಪಡುಬಿದ್ರಿ ಅಧ್ಯಕ್ಷ ಮಕರಂದ, ಲಯನ್ಸ್ ಕ್ಲಬ್ ಅಧ್ಯಕ್ಷ ಮ್ಯಾಕ್ಸಿಮ್ ಡಿ`ಸೋಜ, ಗ್ರಾ. ಪಂ. ಸದಸ್ಯರಾದ ಅಶೋಕ್ ಸಾಲ್ಯಾನ್, ಸೇವಂತಿ ಸದಾಶಿವ, ಶಶಿಕಲಾ, ಸಾಗರ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು, ಪಡುಬಿದ್ರಿ ಸರಕಾರಿ ಪ. ಪೂ. ಕಾಲೇಜು ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ಎಲ್ಲರೂ ಪಡುಬಿದ್ರಿ ಬೀಚ್ ಹಾಗೂ ಮನೆಮನೆಗೆ ತೆರಳಿ ಪ್ಲಾಸ್ಟಿಕ್ ಸಹಿತ ತ್ಯಾಜ್ಯಗಳನ್ನು ಸಂಗ್ರಹಿಸಿದರು.
ಫೋಟೋ:02ಎಚ್‍ಕೆ1
Pಕ್ಯಾ:ಪಡುಬಿದ್ರಿ ಕಡಲ ಕಿನಾರೆಯಲ್ಲಿ ಬಂದ ಬೃಹತ್ ಪ್ಲಾಸ್ಟಿಕ್ ಬಲೆಗಳ ಬಂಡಲೊಂದನ್ನು ಬೀಚ್ ಕ್ಲೀನ್ ತಂಡ ದಡಕ್ಕೆ ಎಳೆದೊಯ್ಯುತ್ತಿರುವುದು.