Big catch of silver fish (white sardines) now in Shambhavi River

Padubidri, September 14th, 2018:  Schools of silver fish (white sardines), known as ‘Bolingir’ in local Tulu language, caught by Kairampani and Matu Bale (nets) caught at the shores of Hejjmady, Sasihithlu, Padubidri and Yermal last week has now rushed to river Shambhavi in Mulki land and have been caught in sufficient  quantities.

As per the local fishermen, due to excessive motorised boat movements at the sea shores, the fishes might have rushed to the river.

As per Dr. Pratibha Rohith, the chief scientist of Central Marine Fisheries Research Institute in Mangalore, it is common to find large number certain kinds of fishes  after the month of September due to lower sea pressure during this monsoon.  “Increase in sea pressure now could be the reason for increased number of silver fishes rushing to the river. All increased mechanised boat activities could be the reason.  All the fishes are looking strong.  There are examples of sardines rushing to the river.  Sometimes it happens due to lack of oxygen,” she said.

Read in Kannada …..

ಶಾಂಭವಿ ಹೊಳೆಗೆ ಬಂದ ಬೊಲೆಂಜಿರ್ ಮೀನು
ಎಚ್ಕೆ ಹೆಜ್ಮಾಡಿ,ಮೂಲ್ಕಿ

ಕಳೆದ ವಾರ ಹೆಜಮಾಡಿ,ಪಡುಬಿದ್ರಿ,ಎರ್ಮಾಳು ಮತ್ತು ಸಸಿಹಿತ್ಲು ಸಮುದ್ರ ತೀರದಲ್ಲಿ ಕೈರಂಪಣಿ ಮತ್ತು ಮಾಟುಬಲೆಗೆ ಬಿದ್ದ ಬೊಲೆಂಜಿರ್(ಸಿಲ್ವರ್ ಫಿಶ್ ಅಥವಾ ವೈಟ್ ಸಾರ್ಡಿನ್) ಮೀನು ಶುಕ್ರವಾರ ಶಾಂಭವಿ ಹೊಳೆಗೆ ನುಗ್ಗಿದ್ದು,ಬೊಲೆಂಜಿರ್ ಬಲೆಗೆ ಬೇಕಾದಷ್ಟು ಬಿದ್ದಿದೆ.

ಸಸಿಹಿತ್ಲು,ಕದಿಕೆ,ಹೆಜಮಾಡಿಯ ಬೊಲೆಂಜಿರ್ ಬಲೆ ಮೀನುಗಾರರಿಗೆ ಶುಕ್ರವಾರ ಮುಂಜಾನೆ ಶಾಂಭವಿ ಹೊಳೆಯಲ್ಲಿ ಸುಗ್ಗಿಯೋ ಸುಗ್ಗಿ.ಕಳೆದ ವಾರ ಸಮುದ್ರ ತೀರದಲ್ಲಿ ಹೇರಳವಾಗಿ ಬಿದ್ದಿದ್ದ ಬೊಲೆಂಜಿರ್ ಬಹುಶ ಕಡಲಲ್ಲಿ ವಿಪರೀತ ಯಾಂತ್ರಿಕ ದೋಣಿಗಳ ಸಾಗಾಟದಿಂದ ಶಾಂಭವಿ ಹೊಳೆ ಹೊಕ್ಕಿರಹುದು ಎಂದು ಸ್ಥಳೀಯ ಮೀನುಗಾರರ ಅಂಬೋಣ.
ಸೆಪ್ಟಂಬರ್ ಐದರಂದು ಹೆಜಮಾಡಿ ಕಡಲ ತೀರದಲ್ಲಿ ಆರು ಕೈರಂಪಣಿಗಳು ಬಲೆ ಹಾಕಿದಾಗ ಕೋಟ್ಯಂತರ ಲೆಕ್ಕದಲ್ಲಿ ಬೊಲೆಂಜಿರ್ ಬಿದ್ದು ಸುದ್ದಿಯಾಗಿತ್ತು.ಅಂದು ದೂರದೂರುಗಳಿಂದಲೂ ಮತ್ಸ್ಯಪ್ರಿಯರು ಹೆಜಮಾಡಿಗೆ ಆಗಮಿಸಿ ಬೊಲೆಂಜಿರ್ ಕೊಂಡೊಯ್ದು ಬೊಲೆಂಜಿರ್ ಸವಿದಿದ್ದರು.ಮಧ್ಯರಾತ್ರಿವರೆಗೂ ಬೊಲೆಂಜಿರ್ ಸಾಗಾಟ ಮುಂದುವರಿದಿತ್ತು.
ಮರುದಿನವೇ ಮೂಲ್ಕಿ ಶಾಂಭವಿ ಹೊಳೆಯಲ್ಲಿ ಅಲ್ಪ ಪ್ರಮಾಣದಲ್ಲಿ ಬೊಲೆಂಜಿರ್ ಕಂಡುಬಂದಿದ್ದು,ಹೊಳೆಯ ಕೈರಂಪಣಿಗೆ ಅಲ್ಪ ಪ್ರಮಾಣದಲ್ಲಿ ಬಿದ್ದಿತ್ತು.ಇದರ ಜಾಡು ಹಿಡಿದ ಕದಿಕೆಯ ಬೊಲೆಂಜಿರ್ ಬಲೆಯ ಮೀನುಗಾರರು ಹುಡುಕಾಟದಲ್ಲಿ ತೊಡಗಿದ್ದು,ಸಾಕಷ್ಟು ಬೊಲೆಂಜಿರ್ ಹಿಡಿದಿದ್ದರು.ಬಳಿಕ ಚೌತಿ ದಿನದವರೆಗೂ ಅಲ್ಪಸ್ವಲ್ಪ ಬೊಲೆಂಜಿರ್ ಹೊಳೆಯಲ್ಲಿ ಸಿಗುತ್ತಲೇ ಇತ್ತು.


ಆದರೆ ಚೌತಿ ರಜೆ ಕಳೆದು ಶುಕ್ರವಾರ ಮುಂಜಾನೆ ಆಗಮಿಸಿದ ಬೊಲೆಂಜಿರ್ ಬಲೆ ಮೀನುಗಾರರಿಗೆ ದೋಣಿ ತುಂಬಿಸುವಷ್ಟು ಬೊಲೆಂಜಿರ್ ದೊರಕಿದೆ.ಕೈರಂಪಣಿ ಬಲೆಗಾದರೆ ಹೆಜಮಾಡಿಯಲ್ಲಿ ದೊರಕಿದಷ್ಟೇ ಬೊಲೆಂಜಿರ್ ಸಿಗುತ್ತಿತ್ತು.ಆದರೆ ಸಮುದ್ರದಲ್ಲಿ ಹರಡುವಂತೆ ಹೊಳೆಯಲ್ಲಿ ಕೈರಂಪಣಿ ಬಲೆ ಹಾಕಲು ಸಾಧ್ಯವಿಲ್ಲದ ಕಾರಣ ಬೊಲೆಂಜಿರ್ ಮೀನು ಹಿಡಿಯಲೆಂದೇ ಇರುವ ಪ್ರತ್ಯೇಕ ಬಲೆ ಹಾಕಿ ಬೊಲೆಂಜಿರ್ ಹಿಡಿಯಲಾಗಿದೆ.ಕೈರಂಪಣಿಯಲ್ಲಿ ರಂಪಣಿಯ ಬಲೆಗೆ ಯಾವುದೇ ಬೊಲೆಂಜಿರ್ ಸಿಕ್ಕಿಹಾಕಿಕೊಳ್ಳುವುದಿಲ್ಲ.ಹಾಗಾಗಿ ಮೀನು ವಿಲೇವಾರಿ ಬಲು ಸುಲಭ.ಆದರೆ ಬೊಲೆಂಜಿರ್ ಬಲೆಯಲ್ಲಿ ಮೀನು ಸಿಕ್ಕಿಹಾಕಿಕೊಂಡಿದ್ದು ಪ್ರತಿಯೊಂದು ಮೀನನ್ನೂ ಬಲೆಯಿಂದ ಬಿಡಿಸಬೇಕು.

ದರದಲ್ಲಿ ಸುಧಾರಣೆ: ಹೆಜಮಾಡಿಯಲ್ಲಿ ಬೊಲೆಂಜಿರ್ ಬಿದ್ದ ಸಂದರ್ಭ ಬೊಲೆಂಜಿರ್ ಧಾರಣೆ ಪಾತಾಳಕ್ಕಿಳಿದಿತ್ತು.ಆದರೆ ಮತ್ತೆರಡು ದಿನಗಳ ಬಳಿಕ ಧಾರಣೆ ಚೆನ್ನಾಗಿತ್ತು.ಕಳೆದ ವರ್ಷ 2ರಿಂದ 4 ರೂ.ಇದ್ದ ಬೊಲೆಂಜಿರ್ ಈ ಬಾರಿ ಅದರ ಅರ್ಧದಷ್ಟೂ ಇಲ್ಲ.ಆದರೆ ಕಳೆದ ಎರಡು ಮೂರು ದಿನಗಳಿಂದ ಒಂದರಿಂದ ಒಂದೂವರೆ ರೂ.ದರ ಇದೆ.
ಬೀಸುಬಲೆಗೂ ಬಿದ್ದ ಬೊಲೆಂಜಿರ್: ಶಾಂಭವಿ ಹೊಳೆಯಲ್ಲಿ ಬೊಲೆಂಜಿರ್ ಸುಗ್ಗಿ ಮಾಹಿತಿ ಅರಿತ ಬೀಸುಬಲೆಯವರೂ ಬಲೆ ಹಿಡಿದು ಬಂದು ಬೊಲೆಂಜಿರ್ ಹಿಡಿದರು.ಆದರೆ ಬೇಕಾದಷ್ಟು ಪ್ರಮಾಣದಲ್ಲಿ ದೊರೆಯಲಿಲ್ಲ.ಸಣ್ಣಪುಟ್ಟ ದೋಣಿ ಬಳಸಿಯೂ ಬೀಸುಬಲೆಯವರು ಪ್ರಯತ್ನಿಸಿದರು.

ಶಾಂಭವಿ ಹೊಳೆಯ ಕೊಳಚಿಕಂಬಳ,ನಡಿಕುದ್ರು,ಚಿತ್ರಾಪು,ಬಪ್ಪನಾಡು ಪ್ರದೇಶಗಳಲ್ಲಿ ಬೊಲೆಂಜಿರ್ ಸಾಕಷ್ಟು ಕಂಡುಬಂದಿತ್ತು.ಕೆಲವು ಕಡೆ ಮೊಣಕಾಲಿನ ನೀರಿನಲ್ಲೂ ಬೊಲೆಂಜಿರ್ ತೆಪ್ಪ ಕಂಡುಬಂದಿತ್ತು.
ಹೊಳೆ ನೀರು ತೀರಾ ಇಳಿಯುವ ಹಂತದಲ್ಲಿ ಮಾತ್ರ ಬೊಲೆಂಜಿರ್ ಕಂಡುಬಂದಿದ್ದು,ಹೊತ್ತೇರುತ್ತಿದ್ದಂತೆ ಹಾಗೂನೀರಿನ ಪ್ರಮಾಣ ಹೆಚ್ಚುತ್ತಿದ್ದಂತೆ ಬೊಲೆಂಜಿರ್ ಕಂಡುಬರಲಿಲ್ಲ.

ಮಂಗಳೂರು ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಕೇಂದ್ರದ ಮುಖ್ಯ ವಿಜ್ಞಾನಿ ಡಾ.ಪ್ರತಿಭಾ ರೋಹಿತ್ ಮಾಹಿತಿ ನೀಡಿ,ಸೆಪ್ಟೆಂಬರ್ ಬಳಿಕ ಸಮುದ್ರ ಮೀನು ಹೇರಳವಾಗಿ ದೊರಕುತ್ತದೆ.ಈ ಬಾರಿ ಮಳೆಗಾಲದಲ್ಲಿ ಸಮುದ್ರದಲ್ಲಿ ಹೆಚ್ಚು ಒತ್ತಡವಿಲ್ಲದ ಕಾರಣ ಈ ಬಾರಿ ಕೆಲವೊಂದು ಜಾತಿಯ ಮೀನುಗಳು ಹೇರಳವಾಗಿ ದೊರಕಿದೆ.ಆದರೆ ಈವರೆಗೆ ಕಂಡರಿಯದಷ್ಟು ಮೊಲೆಂಜಿರ್ ಮೀನು ಕಂಡುಬಂದಿದ್ದು ಸಮುದ್ರದಾಳದ ನೀರಿನ ಒತ್ತಡ ಕಾರಣವಿರಬಹುದು.ಹೊಳೆಗೆ ಬೊಲೆಂಜಿರ್ ಬರುವುದು ಸಾಮಾನ್ಯ.ಇದೀಗ ಸಮುದ್ರದಲ್ಲಿ ಯಾಂತ್ರಿಕ ದೋಣಿಗಳ ಒತ್ತಡ ಅಧಿಕವಾಗಿರುವ ಕಾರಣ ಹೆಚ್ಚು ಬಂದಿರಬಹುದು.ಆದರೆ ಎಲ್ಲಾ ಮೀನುಗಳು ಜೀವಂತವಿದ್ದು ಸುದೃಢವಾಗಿದೆ.ಬೂತಾಯಿ ಮೀನುಗಳು ಸಮುದ್ರದಲ್ಲಿ ಒತ್ತಡ ಅಧಿಕವಾದಾಗ ಹೊಳೆಗೆ ಬಂದ ಉದಾಹರಣೆಗಳಿವೆ.ಪೈನೀರು(ಅಪ್‍ವೆಲ್ಲಿಂಗ್ ಸಿಸ್ಟಮ್) ಬಂದಿರುವ ಸಂಭವವೂ ಇರಬಹುದು.ಹಾಗಿದ್ದಲ್ಲಿ ಬೇರೆ ಮೀನುಗಳೂ ಹೊಳೆಗೆ ಬರಬೇಕಿತ್ತು.  ಆಮ್ಲಜನಕದ ಕೊರತೆಯಿಂದಲೂ ಈ ರೀತಿ ಸಂಭವಿಸುತ್ತದೆ ಎಂದಿದ್ದಾರೆ.