Bharat Scouts and Guides Rangers and Rovers unit Inauguration

ಭಾರತ್ ಸ್ಕೌಟ್ ಎಂಡ್ ಗೈಡ್ಸ್‍ನ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಸಹಕಾರಿ

ಮೂಲ್ಕಿ: ಬದುಕಿನಲ್ಲಿ ಶಿಸ್ತು ಮತ್ತು ದೇಶಪ್ರೇಮ ಹಾಗೂ ಸಮಾಜ ಮುಖಿಯಾಗಿ ಜನರ ಮಧ್ಯೆ ಬದುಕುವ ಕಲೆ ಹಾಗೂ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಲು ಭಾರತ್ ಸ್ಕೌಟ್ ಎಂಡ್ ಗೈಡ್ಸ್‍ನ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ ಎಂದು ಮೂಲ್ಕಿ ವಿಜಯ ಕಾಲೇಜಿನ ಪ್ರಾಂಶುಪಾಲ ಡಾ. ಕೆ. ನಾರಾಯಣ ಪೂಜಾರಿ ಹೇಳಿದರು.
ಅವರು ಮೂಲ್ಕಿ ವಿಜಯ ಕಾಲೇಜಿನ ಭಾರತ್ ಸ್ಕೌಟ್ ಎಂಡ್ ಗೈಡ್ಸ್‍ನ ರೇಂಜರ್ಸ್ ಎಂಡ್ ರೋವರ್ ಘಟಕದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮೂಲ್ಕಿ ಭಾರತ್ ಸ್ಕೌಟ್ ಎಂಡ್ ಗೈಡ್ಸ್‍ನ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಎಂ. ಸರ್ವೋತ್ತಮ ಅಂಚನ್ ದೀಪ ಬೆಳಗಿಸುವ ಮೂಲಕ ಘಟಕವನ್ನು ಉಧ್ಘಾಟಿಸಿ ಶುಭ ಹಾರೈಸಿದರು.

ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು, ಮೂಲ್ಕಿ ಯುವವಾಹಿನಿಯ ಮಾಜಿ ಅಧ್ಯಕ್ಷ ಯೊಗೀಶ್ ಕೋಟ್ಯಾನ್ ಮತ್ತು ಮೂಲ್ಕಿ ನಗರ ಪಂಚಾಯಿತಿಯ ಮಾಜಿ ಅಧ್ಯಕ್ಷೆ ಸರೋಜಿನಿ ಸುವರ್ಣ, ಪಿಯೂಸಿ ಕಾಲೇಜಿನ ಪ್ರಾಂಶುಪಾಲರಾದ ಫಮೀದಾ ಬೇಗಂ ಮುಖ್ಯ ಅತಿಥಿಗಳಾಗಿದ್ದರು.

ರೇಂಜರ್ಸ್ ತರಬೇತಿ ಶಿಕ್ಷಕಿ ಶ್ರುತಿ ಪ್ರಸ್ತಾವಿಕವಾಗಿ ಮಾತನಾಡಿದರು. ವಿನುತಾ ನಾಯಕ್ ವಂದಿಸಿದರು. ಕಾಲೇಜಿನ ರೇಂಜರ್ಸ್ ಮತ್ತು ರೋವರ್ಸ್ ಮುಖ್ಯಸ್ಥರಾದ ಪೆÇ್ರ. ವೆಂಕಟೇಶ್ ಭಟ್ ನಿರೂಪಿಸಿದರು.