Appeal to blacklist highway contractors Navyug constructions – Shobha Karandlaje

Padubidri, August 27th, 2018:  Inaugurating the concrete work on Padubidri Grama Panchayat’s Padebettu-Narsikatte road, Udupi-Chikmagalur MP Shobha Karandlaje has said that she has appealed to the Minister of  Road Transport Mr. Nitin Gadkari to add highway contractors Navyug Constructions to the blacklist for not completing the NH-66 four-lane work within  allotted time.

“Talapady Kundapura highway work is undertaken at a very slow pace.  Even after holding meeting twice, no progress has been achieved.  To speed up the work, the centre has given financial aid but the work is still delayed with company giving various excuses.  The company should not collect toll till the work is completed by 100%,” she said.

Full news in Kannada ….

ನವಯುಗ್ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಲು ಕೇಂದ್ರ ಸಚಿವರಿಗೆ ಮನವಿ-ಶೋಭಾ ಕರಂದ್ಲಾಜೆ

ಕ್ಲಪ್ತ ಸಮಯದಲ್ಲಿ ಹೆದ್ದಾರಿ ಚತಿಷ್ಪಥ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರ ಕಂಪನಿ ನವಯುಗ್ ಕಂಪನಿಯನ್ನು ಕಪ್ಪಪಟ್ಟಿಗೆ ಸೇರಿಸುವಂತೆ ತಾನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರಿಗೆ ಮನವಿ ಮಾಡಿದ್ದಾಗಿ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಸೋಮವಾರ ಪಡುಬಿದ್ರಿ ಗ್ರಾಪಂ ವ್ಯಾಪ್ತಿಯ ಪಾದೆಬೆಟ್ಟು-ನರ್ಸಿಕಟ್ಟೆ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಯನ್ನು ಉದ್ಘಾಟಿಸಿದ ಬಳಿಕ ಮಾಧ್ಯಮದೊಂದಿಗೆ ಅವರು ಮಾತನಾಡಿದರು.

ತಲಪಾಡಿ-ಕುಂದಾಪುರ ಹೆದ್ದಾರಿ ಕಾಮಗಾರಿ ತೀರಾ ನಿಧಾನಗತಿಯಲ್ಲಿ ನಡೆಸಲಾಗುತ್ತಿದೆ.ಈ ಬಗ್ಗೆ 2 ಬಾರಿ ದಿಶಾ ಸಭೆ ನಡೆದರೂ ಯಾವುದೇ ಪ್ರಗತಿ ಸಾಧಿಸಿಲ್ಲ.ಅಲ್ಲದೆ ಕಾಮಗಾರಿ ಸ್ಪೀಡ್‍ಅಪ್ ಮಾಡಲು ಕೇಂದ್ರ ಸರಕಾರ ಆರ್ಥಿಕ ನೆರವನ್ನೂ ನೀಡಿದೆ.ಆದರೆ ಬೇರೆ ಬೇರೆ ಕಾರಣ ನೀಡಿ ಕಾಮಗಾರಿ ವಿಳಂಬವಾಗುತ್ತಿದೆ.ಕಾಮಗಾರಿ ಶೇ.100 ಆಗುವವರೆಗೆ ಟೋಲ್ ಸಂಗ್ರಹವೂ ಮಾಡಬಾರದು ಎಂದವರು ಹೇಳಿದರು.

ತನ್ನ ಸಂಸದರ ನಿಧಿ ರೂ.5 ಲಕ್ಷದಿಂದ ನಿರ್ಮಾಣಗೊಂಡ ಪಾದೆಬೆಟ್ಟು-ನರ್ಸಿಕಟ್ಟೆ(126 ಮೀ.)ರಸ್ತೆ ಕಾಮಗಾರಿಯನ್ನು ಅವರು ಉದ್ಘಾಟಿಸಿದರು.

ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ದಮಯಂತಿ ವಿ.ಅಮೀನ್,ಸದಸ್ಯ ಶ್ರೀನಿವಾಸ ಶರ್ಮ,ಪಿಡಿಒ ಪಂಚಾಕ್ಷರಿ ಸ್ವಾಮಿ,ಬಿಜೆಪಿ ಮಂಗಳೂರು ವಿಭಾಗ ಪ್ರಮುಖ್ ಉದಯ ಕುಮಾರ್ ಶೆಟ್ಟಿ,ಬಿಜೆಪಿ ರಾಜ್ಯ ಸಮಿತಿಯ ಕಾರ್ಯದರ್ಶಿ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ,ಸುಪ್ರಸಾದ ಶೆಟ್ಟಿ,ಜಿಲ್ಲಾ ಸಮಿತಿಯ ಕಾರ್ಯದರ್ಶಿ ರಮಾಕಾಂತ ದೇವಾಡಿಗ,ರಾಜ್ಯ ಸಮಿತಿಯ ಶ್ಯಾಮಲಾ ಕುಂದರ್,ಗುತ್ತಿಗೆದಾರ ದಿನೇಶ್ ಕಾಮತ್ ಕಾಂಜರಕಟ್ಟೆ ಮತ್ತಿತರ