Another bumper fish catch near Padubidri

Padubidri, September 27th, 2018:  Kairampani fishermen near Padubidri had once again a bumper catch of various kinds of fishes including pomfrets on Thursday in a similar fashion like silver fishes (Bolenjir) caught earlier in the month in Hejamady.  People thronged to the sea shore to grab the opportunity.  Yermal Tenka Pandarinatha and Veeranjaneya Kairampani funds had a field day.

 

Read more in Kannada …

ಕರಾವಳಿಯ ಕೈರಂಪಣಿಯಲ್ಲಿ ಮತ್ತೆ ಮತ್ಸ್ಯ ಸಮೃದ್ಧಿ
ಎಚ್ಕೆ ಹೆಜ್ಮಾಡಿ,ಪಡುಬಿದ್ರಿ

ಸೆಪ್ಟಂಬರ್ 5ರಂದು ಕರಾವಳಿಯ ಪಡುಬಿದ್ರಿ ಭಾಗದಲ್ಲಿ ಮತ್ತೆ ಮತ್ಸ್ಯ ಸಮೃದ್ಧಿ ಕಾಣಿಸಿಕೊಂಡಿದ್ದು,ಕೈರಂಪಣಿಗಳಿಗೆ ಹೇರಳ ಮೀನು ದೊರಕಿದೆ. ಗುರುವಾರ ಬೆಳಿಗ್ಗೆ ಮತ್ಸ್ಯ ಬೇಟೆಗೆ ಹೊರಟ ಎರ್ಮಾಳು ತೆಂಕ ಪಂಡರಿನಾಥ ಮತ್ತಿ ವೀರಾಂಜನೇಯ ಕೈರಂಪಣಿಗಳು ಸಮುದ್ರದಲ್ಲಿ ಬಲೆ ಹರಡಿದ ಸಂದರ್ಭ ಬೊಲೆಂಜಿರ್ ಸಿಕ್ಕಿದ ರೀತಿಯಲ್ಲಿಯೇ ಇತರ ಎಲ್ಲಾ ಬಗೆಯ ಮೀನುಗಳು ಹೇರಳವಾಗಿ ದೊರಕಿದ್ದು,ದೂರದೂರುಗಳಿಂದ ಜನತೆ ಮೀನು ಕೊಂಡೊಯ್ಯಲು ಆಗಮಿಸಿದ್ದಾರೆ. ಮಾಂಜಿ,ಕೊಡ್ಡಾಯಿ,ಕಲ್ಲೂರು,ಬತ್ತ ಅಥವಾ ಕಡುವಾಯಿ, ಎರೆಬಾಯಿ,ಮಣಂಗು ಸಹಿತ ಇತರ ಹಲವು ಬಗೆಯ ಮೀನುಗಳು ಎರ್ಮಾಳು ಕಡಲ ತೀರದಲ್ಲಿ ರಾಶಿ ರಾಶಿಯಾಗಿ ದೊರಕಿವೆ.

ಬೆಳಿಗ್ಗೆ ಸಮುದ್ರಕ್ಕಿಳಿದ ಕೈರಂಪಣಿಗೆ ಪ್ರಥಮ ಬಲೆಯಲ್ಲಿ ಯಾವುದೇ ಮೀನುಗಳು ದೊರಕಿರಲಿಲ್ಲ.ಆದರೆ ಎರಡನೇ ಬಾರಿ ಸುಮಾರು 8 ಗಂಟೆಗೆ ತೀರ ಸಮುದ್ರದಲ್ಲಿ ಮೀನಿನ ತೆಪ್ಪಗಳನ್ನು ಕಂಡ ಕೈರಂಪಣಿಯವರು ಕೈರಂಪಣಿ ನೀರಿಗಿಳಿಸಿದ ಸಂದರ್ಭ ಊಹೆಗೂ ನಿಲುಕದ ರೀತಿಯಲ್ಲಿ ಮೀನು ಕಂಡು ಬಂದಿತ್ತು.ಪಂಡರಿನಾಥ ಕೈರಂಪಣಿಯವರು ತೆಂಕ ಎರ್ಮಾಳಿನಲ್ಲಿ ಬಲೆ ಹಾಕಿದ್ದರೆ,ವೀರಾಂಜನೇಯ ಕೈರಂಪಣಿಯವರು ಬಡಾ ಎರ್ಮಾಳು ಕಡಲಲ್ಲಿ ಬಲೆ ಹಾಕಿದ್ದರು.ಎರಡೂ ರಂಪಣಿಗಳಿಗೆ ಹೇರಳ ಮೀನು ಲಭ್ಯವಾಗಿದ್ದು,ಎಲ್ಲಾ ಮೀನುಗಳನ್ನು ಕ್ರಮ ಬದ್ಧವಾಗಿ ನೀರಿನಿಂದ ಮೇಲಕ್ಕೆ ಎತ್ತಿದ್ದಾರೆ.ರಾತ್ರಿವರೆಗೂ ಮೀನು ತೆಗೆಯುವಷ್ಟು ಹೇರಳ ಮೀನು ಲಭ್ಯವಾಗಿದ್ದು ಮೀನುಗಾರರು ಸಂತಸ ವ್ಯಕ್ತಪಡಿಸಿದ್ದಾರೆ.

ಬುಲ್ ಟ್ರಾಲ್ ನಿಷೇಧದ ಪ್ರತಿಫಲ: ಸರಕಾರ ತೀರ ಮೀನುಗಾರಿಕೆಗೆ ಹಾಗೂ ಮೀನು ಮರಿ ಇಡುವ ಸಂದರ್ಭ ಸಮಸ್ಯೆಯುಂಟಾಗುವತ್ತದೆ ಎಂದು ವೈಜ್ಞಾನಿಕ ವರದಿಯ ಹಿನ್ನೆಲೆಯಲ್ಲಿ ಬುಲ್ ಟ್ರಾಲ್ ಮೀನುಗಾರಿಕೆಗೆ ನಿಷೇಧ ಹೇರಿತ್ತು. ಈ ನಿಷೇಧ ಈ ಬಾರಿ ಕಟ್ಟುನಿಟ್ಟಾಗಿ ಜಾರಿಗೆ ಬಂದ ಹಿನ್ನೆಲೆಯಲ್ಲಿ ಯಾವುದೇ ಬುಲ್ ಟ್ರಾಲ್ ಯಾಂತ್ರಿಕ ಬೋಟುಗಳು ತೀರ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿಲ್ಲ.ಹಾಗಾಗಿ ತೆಪ್ಪ ರೀತಿಯಲ್ಲಿ ಇರುವ ಮೀನುಗಳು ತೀರ ಸಮುದ್ರಕ್ಕೆ ಸಲೀಸಾಗಿ ಸಾಗಿಬಂದಿದ್ದು,ಕೈರಂಪಣಿಗಳಿಗೆ ಸುಗ್ಗಿಯಾಗಿದೆ.

ಬೊಲೆಂಜಿರ್ ಬಳಿಕ ಇತರ ಮೀನಿನ ಸರದಿ: ಸೆ.5ರಂದು ಹೆಜಮಾಡಿಯಿಂದ ಎರ್ಮಾಳು ತನಕ ಬೊಲೆಂಜಿರ್ ಸಾಗರೋಪಾದಿಯಲ್ಲಿ ಸಾಗಿ ಬಂದು ಕೈರಂಪಣಿಗಳಿಗೆ ಹೇರಳವಾಗಿ ದೊರಕಿತ್ತು.ಬಳಿಕ ಸೆ.24ರವರೆಗೂ ಮೂಲ್ಕಿಯ ಶಾಂಭವಿ ಹೊಳೆಯಲ್ಲಿ ಬೊಲೆಂಜಿರ್ ಮೀನು ಸಾಕಷ್ಟು ಸಿಕ್ಕಿತ್ತು.ಇದೀಗ ಇತರ ಮೀನುಗಳು ಲಭ್ಯವಾಗುವ ಮೂಲಕ ಸಾಂಪ್ರದಾಯಿಕ ಕೈರಂಪಣಿ ಮೀನುಗಾರರು ಖುಷಿಯಾಗಿದ್ದಾರೆ.

ದೂರದೂರುಗಳಿಂದ ಆಗಮಿಸಿದ ಜನತೆ: ಸಾಮಾಜಿಕ ಜಾಲತಾಣಗಳಲ್ಲಿ ಎರ್ಮಾಳು ಕೈರಂಪಣಿಯಲ್ಲಿ ಸಿಕ್ಕ ಹೇರಳ ಮೀನಿನ ಬಗ್ಗೆ ಸುದ್ದಿ ಹರಡಿದ್ದು,ದೂರದೂರುಗಳಿಂದ ಜನತೆ ಆಗಮಿಸಿ ಹೇರಳ ತಾಜಾ ಮೀನುಗಳನ್ನು ಕೊಂಡೊಯ್ದರು.