ಮಾರ್ಚ್ 14-22:ಪಡುಬಿದ್ರಿ ದೇವಳದ ವರ್ಷಾವಧಿ ಮಹೋತ್ಸವ

ಪಡುಬಿದ್ರಿ: ಇಲ್ಲಿನ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವರ್ಷಾವಧಿ ಮಹೋತ್ಸವ ಹಾಗೂ ಅಷ್ಟಬಂಧ ಲೇಪನ ಕಲಶಾಭಿಷೇಕ ಮಾರ್ಚ್ 14 ರಿಂದ 22 ರವರೆಗೆ ನಡೆಯಲಿದೆ.

ಮಾ.12ರಿಂದ 16ರ ವರೆಗೆ ಅಷ್ಟಬಂಧ ಲೇಪನ ಕಲಶಾಭಿಷೇಕದ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿದೆ.ಮಾ.14ರಂದು ಬೆಳಿಗ್ಗೆ 9.30ಕ್ಕೆ ಧ್ವಜಾರೋಹಣ,ರಾತ್ರಿ ಬಡಗು ಸವಾರಿ,15 ರಂದು ರಾತ್ರಿ ಆಯನೋತ್ಸವ,ದೀಪಾರಾಧನೆ,16ರಂದು ಅಷ್ಟ ಬಂಧ ಲೇಪನ ಕಲಶಾಭಿಷೇಕ, ಫಲೋಕ್ಷಪ ಬಲಿ ಉತ್ಸವ,17ರಂದು ಪಡು ಸವಾರಿ,18ರಂದು ಪಾರುಪತ್ಯಗಾರ ಕಟ್ಟೆಪೂಜೆ,19ರಂದು ಕೆರೆ ದೀಪೋತ್ಸವ,20ರಂದು ತೆಂಕು ಸವಾರಿ,21ರಂದು ಮಧ್ಯಾಹ್ನ 11 ಗಂಟೆಗೆ ರಥಾರೋಹಣ,ರಾತ್ರಿ ಮಹಾರಥೋತ್ಸವ,ಭೂತಬಲಿ,22ರಂದು ಬೆಳಿಗ್ಗೆ ತುಲಾಭಾರ ಸೇವೆ,ಸಂಜೆ 4 ಗಂಟೆಗೆ ಚೆಂಡು ಉತ್ಸವ,ರಾತ್ರಿ 7 ಗಂಟೆಗೆ ಅವಭೃತ ಸ್ನಾನ,ಬಲಿಉತ್ಸವ ಬಳಿಕ ಧ್ವಜಾವರೋಹಣವಾಗಲಿದೆ.

14ರಿಂದ 20ರವರೆಗೆ ಪ್ರತಿದಿನ ಸಂಜೆ 6.30ಕ್ಕೆ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ನಾಗಸ್ವರ ಹಾಗೂ ಸ್ಯಾಕ್ಸೋಫೋನ್ ವಾದನ,16 ರಂದು ಪಡುಬಿದ್ರಿ ತುಳುನಾಡ ಕಲಾವಿದರು ಸಂಘಟನೆಯವರಿಂದ ನೃತ್ಯ ವೂಭವ ಹಾಗೂ ಕಲ್ಲಡ್ಕ ವಿಠಲನಾಯಕ್ ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ, 19 ರಂದು ಪಡುಬಿದ್ರಿ ಗಜಾನನ ಯಕ್ಷಗಾನ ಮಿತ್ರ ಮಂಡಳಿಯವರಿಂದ ಯಕ್ಷಗಾನ ಬಯಲಾಟ,21 ರಂದು ಮಧ್ಯಾಹ್ನ ಚಂದ್ರಕಾಂತ ಆಚಾರ್ಯ ಮತ್ತು ಬಳಗದಿಂದ ಭಕ್ತಿಸುಧೆ, ಸಂಜೆ 3 ಗಂಟೆಗೆ ಗಣೇಶ್ ಬಳಗದವರಿಂದ ಭಕ್ತಿಗೀತೆ,ರಾತ್ರಿ ಶಶಿ ಮ್ಯೂಸಿಕಲ್ಸ್ ತಂಡದಿಂದ ಸಂಗೀತ ರಸಮಂಜರಿ,22ರಂದು ರಾತ್ರಿ ವನದುರ್ಗಾ ಫ್ರೆಂಡ್ಸ್‍ನಿಂದ ಬಾವ ಯೋಗಗಾನ ನೃತ್ಯ ಕಾರ್ಯಕ್ರಮ ನಡೆಯಲಿದೆ.ಧ್ವಜಾರೋಹಣದಂದು ಪಡುಬಿದ್ರಿ ವನದುರ್ಗಾ ಫ್ರೆಂಡ್ಸ್ ಹಾಗೂ ರಥೋತ್ಸವದಂದು ಪಡುಬಿದ್ರಿ ಮಧ್ವನಗರ ತರಂಗಿಣಿ ಮಿತ್ರಮಂಡಳಿಯವರು ವಿಶೇಷ ಹೂವಿನ ಅಲಂಕಾರ ಮಾಡಲಿದ್ದಾರೆ ಎಂದು ದೇವಳದ ಕಾರ್ಯ ನಿರ್ವಹಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.