ಅದಾನಿ ಫೌಂಡೇಶನ್: ಸಿಎಸ್‍ಆರ್ ಯೋಜನೆಯಡಿ ರೂ. 35 ಲಕ್ಷ ವೆಚ್ಚದಲ್ಲಿ ಮುದರಂಗಡಿ ವ್ಯಾಪ್ತಿಯಲ್ಲಿ 3 ರಸ್ತೆಗಳ ಕಾಂಕ್ರೀಟೀಕರಣ

ಪಡುಬಿದ್ರಿ: ಎಲ್ಲೂರು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಅದಾನಿ ಸಮೂಹದ ಉಡುಪಿ ಪವರ್ ಕಾಪೆರ್Çೀರೇಶನ್ ಸಂಸ್ಥೆಯು ತನ್ನ ಸಿಎಸ್‍ಆರ್ ಯೋಜನೆಯಲ್ಲಿ ಅದಾನಿ ಫೌಂಡೇಷನ್ ಮುಖೇನ ಮುದರಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಮಕ್ರೀಟೀಕರಣಗೊಳಿಸಲಾದ 3 ರಸ್ತೆಗಳನ್ನು ಉದ್ಘಾಟಿಸಲಾಯಿತು.

ರೂ. 35 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಿದ ಸಾಂತೂರು-ಕೊಪ್ಲ ರಸ್ತೆ, ವಿದ್ಯಾನಗರ ರಸ್ತೆ ಮತ್ತು ಸಾಂತೂರು-ಆಲೂ ಬ್ರಹ್ಮಸ್ಥಾನ ರಸ್ತೆಗಳನ್ನು ಅದಾನಿ ಯುಪಿಸಿಎಲ್ ಸಂಸ್ಥೆಯ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಮತ್ತು ಮುದರಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಡೇವಿಡ್ ಡಿಸೋಜಾ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಕಿಶೋರ್ ಆಳ್ವ, ಮುದರಂಗಡಿ ಗ್ರಾಪಂ ಸೇರಿ ಇನ್ನೂ 6 ಗ್ರಾಪಂಗಳಲ್ಲಿ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ವಿಶೇಷ ಅನುದಾನ ಮೀಸಲಿಟ್ಟಿದ್ದು, ಪಂಚಾಯಿತಿ ಸೂಚಿಸುವ ಕಾಮಗಾರಿಗಳನ್ನು ಅದಾನಿ ಸಂಸ್ಥೆ ತನ್ನ ಸಿಎಸ್‍ಆರ್ ಯೋಜನೆಯಲ್ಲಿ ಕೈಗೆತ್ತಿಕೊಳ್ಳುತ್ತಿದೆ ಎಂದರು.

ಒಟ್ಟು ರೂ.22.73 ಕೋಟಿ ವೆಚ್ಚದಲ್ಲಿ 7 ಗ್ರಾಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸಲು ಬದ್ಧವಾಗಿದ್ದು, ಮುದರಂಗಡಿಗೆ 3 ವರ್ಷದ ಅವಧಿಗೆ ಒಟ್ಟು ರೂ. 4.65 ಕೋಟಿ ಅಭಿವೃದ್ಧಿ ಕೆಲಸಗಳನ್ನು ಅದಾನಿ ನಿರ್ವಹಿಸುತ್ತಿದೆ. ಈಗಾಗಲೇ ರೂ. 3.26 ಕೋಟಿಯಷ್ಟು ಮೂಲಭೂತ ಸೌಕರ್ಯ ಅಭಿವೃದ್ಧಿ ಕೆಲಸಗಳನ್ನು ಅದಾನಿ ಸಂಸ್ಥೆಯು ಸಿಎಸ್‍ಆರ್ ಯೋಜನೆಯಲ್ಲಿ ಮುದರಂಗಡಿ ವ್ಯಾಪ್ತಿಯಲ್ಲಿ ಪೂರ್ಣಗೊಳಿಸಿದೆ ಎಂದು ಆಳ್ವ ತಿಳಿಸಿದರು.

ಡೇವಿಡ್ ಡಿಸೋಜಾ ಮಾತನಾಡಿ, ಅದಾನಿ ಯುಪಿಸಿಎಲ್ ಸಂಸ್ಥೆಯು ಸಿಎಸ್‍ಆರ್ ಕಾರ್ಯಕ್ರಮಗಳನ್ನು ಗ್ರಾಮಸ್ಥರಿಗೆ ತಲುಪಿಸುತ್ತಿರುವುದಕ್ಕಾಗಿ ಅಭಿನಂದನೆ ಸಲ್ಲಿಸುತ್ತಾ, ಅದಾನಿ ಸಂಸ್ಥೆಯ ಸಾಮಾಜಿಕ ಕಳಕಳಿಯ ಕೆಲಸಗಳಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ಹೊಂದುತ್ತಿದೆ ಎಂದು ತಿಳಿಸಿದರು.

ಗ್ರಾಪಂ ಉಪಾಧ್ಯಕ್ಷೆ ಜಯಂತಿ ಪೂಜಾರ್ತಿ, ಪಿಡಿಒ ಜಯಂತ್, ಸದಸ್ಯರಾದ ಗಾಬ್ರಿಯಲ್ ಮಥಾಯಿಸ್, ಅದಾನಿ ಯುಪಿಸಿಎಲ್ ಕಂಪನಿಯ ಏಜಿಎಂ ಗಿರೀಶ್ ನಾವಡ, ಹಿರಿಯ ವ್ಯವಸ್ಥಾಪಕÀ ರವಿ ಆರ್. ಜೇರೆ ಉಪಸ್ಥಿತರಿದ್ದರು.