ಪಡುಬಿದ್ರಿಯಲ್ಲಿ ಸಾರ್ವಜನಿಕ ಆಟಿ ಕಷಾಯ ವಿತರಣೆ

ಪಡುಬಿದ್ರಿ: ಆಟಿ ಅಮಾವಾಸ್ಯೆಯ ಪ್ರಯುಕ್ತ ಹಾಳೆಯ ಮರದ ತೊಗಟೆಯ ಕಷಾಯ ಮತ್ತು ಮೆಂತೆ ಪಾಯಸವನ್ನು ಉಚಿತವಾಗಿ ಪಡುಬಿದ್ರಿ ಮತ್ತು ಮೂಳೂರಿನಲ್ಲಿ ಸಾರ್ವಜನಿಕರಿಗೆ ಗುರುವಾರ ವಿತರಿಸಲಾಯಿತು.

ಪಡುಬಿದ್ರಿಯಲ್ಲಿ ಪಿ.ಕೆ ಸದಾನಂದ ಪಡುಬಿದ್ರಿ ಅವರು ಮಾರ್ಕೆಟ್ ರಸ್ತೆಯ ಸಾಯಿ ಆರ್ಕೆಡ್‍ನಲ್ಲಿ ವಿತರಿಸಿದರು. ಐದುನೂರಕ್ಕೂ ಅಧಿಕ ಮಂದಿಗೆ ಕಷಾಯ ವಿತರಿಸಲಾಯಿತು.

ಈ ಕಷಾಯದಲ್ಲಿ ಔಷಧೀಯ ಗುಣಗಳಿರುವುದರಿಂದ ಮಕ್ಕಳಿಂದ ವೃದ್ಧರವರೆಗೆ ಆರೋಗ್ಯ ದೃಷ್ಟಿಯಲ್ಲಿ ಅನೇಕ ರೋಗ ರುಜಿನಗಳು ದೂರವಾಗುತ್ತದೆ. ಪುರಾತನ ಕಾಲದ ಪಂಡಿತರಿಂದ ಹಿಡಿದು ಈಗಿನ ವೈಜ್ಞಾನಿಕ ಸಂಶೋದಕರು ಕೂಡ ಈ ವಿಷಯವನ್ನು ಧೃಡ ಪಡಿಸಿದ್ದಾರೆ ಎಂದು ಜಾನಪದ ವಿದ್ವಾಂಸ ಪಿ.ಕೆ ಸದಾನಂದ ತಿಳಿಸಿದರು.

ಇದೇ ವೇಳೆ ಶಾಲಾ ವಿದ್ಯಾರ್ಥಿಗಳಿಗೆ ಪಿ.ಕೆ. ಸದಾನಂದ ಅವರು ಪುಸ್ತಕವನ್ನು ವಿತರಿಸಿದರು. ಅವರ ಸಹೋದರ ಸುರೇಂದ್ರ, ರಮೇಶ್ ಭಂಡಾರಿ ಹಾಜರಿದ್ದರು.