24-02-2019 ಭಾನುವಾರ ನಡೆದ ಢಕ್ಕೆಬಲಿ ಸೇವೆಯ ಅಂಗವಾಗಿ ಹೊರೆಕಾಣಿಕೆ ಮೆರವಣಿಗೆ

ದೈವಾರ್ಷಿಕ ನಡಾವಳಿಗೆ ವಿಶ್ವ ಪ್ರಸಿದ್ಧಿ ಪಡೆದ ಶ್ರೀ ಕ್ಷೇತ್ರ ಪಡುಬಿದ್ರಿ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ಭಾನುವಾರ ಎರ್ಮಾಳು ಸೇನಾಳಿ ಮನೆ ವಿ.ವೆಂಕಟರಮಣ ರಾವ್ ಮತ್ತು ಕುಟುಂಬಿಕರ ವತಿಯಿಂದ ನಡೆದ ಢಕ್ಕೆಬಲಿ ಸೇವೆಯ ಅಂಗವಾಗಿ ಶ್ರೀ ಖಡ್ಗೇಶ್ವರೀ ಜ್ಞಾನಮಂದಿರದಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಿತು.ಈ ಸಂದರ್ಭ ಸೇನಾಳಿ ಕುಟುಂಬಿಕರು,ಅರ್ಚಕ ರಾಮಕೃಷ್ಣ ಆಚಾರ್ಯ ಪಿಎಲ್,ಶ್ರೀ ವನದುರ್ಗಾ ಟ್ರಸ್ಟ್ ಅಧ್ಯಕ್ಷ ಕೊರ್ನಾಯ ಶ್ರೀಪತಿ ರಾವ್,ಪ್ರಧಾನ ಕಾರ್ಯದರ್ಶಿ ವೈ.ಎನ್.ರಾಮಚಂದ್ರ ರಾವ್,ಪದ್ಮನಾಭ ಕೊರ್ನಾಯ ಮತ್ತಿತರರು ಉಪಸ್ಥಿತರಿದ್ದರು.

ಫೋಟೋ: ರವಿ ಡಿಜಿಟಲ್ಸ್,ಪಡುಬಿದ್ರಿ