23-02-2019 ಶನಿವಾರ ನಡೆದ ಢಕ್ಕೆಬಲಿ ಸೇವೆಯ ಅಂಗವಾಗಿ ಅನ್ನಸಂತರ್ಪಣೆ ಬಳಿಕ ಹೊರೆ ಕಾಣಿಕೆ ಮೆರವಣಿಗೆ

ದ್ವೈವಾರ್ಷಿಕ ನಡಾವಳಿ ಢಕ್ಕೆಬಲಿ ಸೇವೆಗೆ ಜಗತ್‍ಪ್ರಸಿದ್ಧಿ ಪಡೆದ ಪಡುಬಿದ್ರಿಯ ಶ್ರೀ ಕ್ಷೇತ್ರ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ಶನಿವಾರ ಮುಂಬೈ ಚಂದ್ರಶೇಖರ್ ಕೆ.ಶೆಟ್ಟಿ ಕುಟುಂಬಿಕರ ವತಿಯಿಂದ ನಡೆದ ಢಕ್ಕೆಬಲಿ ಸೇವೆಯ ಅಂಗವಾಗಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ಅನ್ನಸಂತರ್ಪಣೆ ನಡೆಯಿತು.ಬಳಿಕ ಅಲ್ಲಿಂದಲೇ ಹೊರೆ ಕಾಣಿಕೆ ಮೆರವಣಿಗೆಯು ಬ್ರಹ್ಮಸ್ಥಾನದವರೆಗೆ ನಡೆಯಿತು.ಈ ಸಂದರ್ಭ ಪಡುಬಿದ್ರಿ ಬೀಡು ಅರಸು ರತ್ನಾಕರ ರಾಜ್ ಅರಸು ಕಿನ್ಯಕ್ಕ ಬಲ್ಲಾಳ್,ಶ್ರೀ ವನದುರ್ಗಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ವೈ.ಎನ್.ರಾಮಚಂದ್ರ ರಾವ್ ಉಪಸ್ಥಿತರಿದ್ದರು.